ಕುಷ್ಠರೋಗ ಗುಣಪಡಿಸುವ ಕಾಯಿಲೆ:ಡಾ.ವಿನೋದ್ ಕುಮಾರ್

Date:

ಬಾಗೇಪಲ್ಲಿ: ಕುಷ್ಠರೋಗ ನಿರ್ಮೂಲನಾ ಅಭಿಯಾನ ಆರಂಭವಾಗಿದೆ. ಇದು ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಎಲ್ಲರೂ ಪರೀಕ್ಷಿಸಿಕೊಳ್ಳಬೇಕು. ದೇಶದಲ್ಲಿ ಕುಷ್ಠರೋಗವನ್ನು 2027ರೊಳಗೆ ನಿರ್ಮೂಲನೆ ಮಾಡಲು ಪಣತೊಡಲಾಗಿದೆ ಎಂದು ಡಾ.ವಿನೋದ್ ಕುಮಾರ್ ಹೇಳಿದರು.

- Advertisement -

ಪಾತಪಾಳ್ಯ ಹೋಬಳಿ ಕೇಂದ್ರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಷ್ಠರೋಗದ ಪತೆಹಚ್ಚು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕುಷ್ಠರೋಗವು ಮಾರಣಾಂತಿಕ ಕಾಯಿಲೆಯಲ್ಲ, ಇದು ಗುಣಪಡಿಸುವಂತಹ ಕಾಯಿಲೆಯಾಗಿದ್ದು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿದಾಗ ಮನೆಯ ಸದಸ್ಯರೆಲ್ಲರೂ ಪರೀಕ್ಷಿಸಿಕೊಳ್ಳಬೇಕು,’’ ಎಂದು ಪಾತಪಾಳ್ಯ ಸಾರ್ವಜನಿಕ ಆಸ್ಪತ್ರೆಯ ಡಾ.ವಿನೋದ್ ಕುಮಾರ್ ಹೇಳಿದರು.

ದೇಶದಲ್ಲಿ ಪ್ಲೇಗ್ ,ಕಾಲಾರಾ ಇನ್ನೂ ಮುಂತಾದ ರೋಗಗಳನ್ನು ನಿರ್ಮೂಲನೆಗೊಳಿಸಿದ್ದೇವೆ. ಕುಷ್ಠರೋಗವನ್ನು 2027ರೊಳಗೆ ನಿರ್ಮೂಲನೆಗೊಳಿಸಲು ನಾವೆಲ್ಲರೂ ಪಣತೊಡಬೇಕಿದೆ. ಆಶಾ ಕಾರ್ಯಕರ್ತೆಯರು ಸಮೀಕ್ಷೆಗೆ ಮನೆಗೆ ಬಂದಾಗ ಅವರಿಗೆ ಸಹಕರಿಸಿ ಸರಿಯಾದ ಮಾಹಿತಿ ನೀಡಬೇಕು. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು,’’ ಎಂದರು.

ಇದನ್ನು ಓದಿದ್ದೀರಾ…? ಮೀನು ಹಿಡಿಯಲು ಹೋದ ಮಹಿಳೆ ವಿದ್ಯುತ್ ತಂತಿಗಳಿಗೆ ಬಲಿ

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಹಾಗೂ ಸಿಬ್ಬಂದಿಗಳಾದ ಶಶಿಕಲಾ ,ಹರ್ಷಾಭಾನು,ಕಾಂಚನಾ,ಉಮಾದೇವಿ, ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | 2018ರಿಂದ ಬಾಕಿ ಉಳಿದ ನಿವೇಶನ ಹಕ್ಕು: ಕೊರಗ ಸಮುದಾಯದ ಅರೆಬೆತ್ತಲೆ ಮೆರವಣಿಗೆ

ವಾಮಂಜೂರು ಮಂಗಳಜ್ಯೋತಿಯ ಕೊರಗ ಸಮುದಾಯದ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಾಗೂ...

ತರೀಕೆರೆ | ಅ. 15ರ ವರೆಗೆ ಕೈಗಾರಿಕಾ ತರಬೇತಿಗೆ ಅವಕಾಶ 

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ...

ಮಂಗಳೂರು | ಬರದ ಸಂಕಷ್ಟದ ನಡುವೆ ಕಂಬಳ ಬೇಡ: ಕೋಣಗಳ ಮಾಲೀಕರಿಗೆ ಎ.ಟಿ. ರಾಮಸ್ವಾಮಿ ಮನವಿ

ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರ ಪರಿಸ್ಥಿತಿಯಿಂದ ತತ್ತರಿಸುತ್ತಿದ್ದು, ರೈತರು ಹಾಗೂ...

ಚಿಕ್ಕಮಗಳೂರು | ಮಹಿಳೆಗೆ ದೌರ್ಜನ್ಯ ಆರೋಪದಡಿ ಅರ್ಚಕ ಬಂಧನ 

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಮೂಲದ ಅರ್ಚಕ ಸತೀಶ್ ಪಾತ್ರಿ ಎಂಬಾತ ದೆವ್ವ...