ಮೀನು ಹಿಡಿಯಲು ಹೋದ ಮಹಿಳೆ ವಿದ್ಯುತ್ ತಂತಿಗಳಿಗೆ ಬಲಿ

Date:

ಬಾಗೇಪಲ್ಲಿ: ಮೀನು ಹಿಡಿದು ಜೀವನ ಮಾಡುತ್ತಿದ್ದ ಬಡ ಕುಟುಂಬದ ಮಹಿಳೆ ವಿದ್ಯುತ್ ತಂತಿಗಳು ಸೋಕಿ ಕೆರೆಯಲ್ಲೇ ಮೃತಪಟ್ಟಿರುವ ಘಟನೆ ಚೇಳೂರು ತಾ. ದಿಗವನೆಟ್ಟಕುಂಟಪಲ್ಲಿ ಗ್ರಾಮದಲ್ಲಿ ನಡೆದಿದೆ.

- Advertisement -

ಗ್ರಾಮದ ಚಾಪಲ ಮಾಬುಸಾಬ್ ಕುಟುಂಬದವರು ಸುಮಾರು ವರ್ಷಗಳಿಂದ ಸುತ್ತಮುತ್ತಲಿನ ಕೆರೆ ಕುಂಟೆಗಳಲ್ಲಿ ಮೀನುಗಳು ಹಿಡಿದು ಮಾರಾಟ ಮಾಡಿ ಬಡ ಕುಟುಂಬವನ್ನು ಪೋಷಣೆ ಮಾಡಿಕೊಂಡು ಬದುಕು ನಡೆಸಿದ್ದರು.
ಗ್ರಾಮದ ಊರುಮುಂದಿನ ಕೆರೆಯಲ್ಲಿ ಹಗಲಿನಲ್ಲಿ ಮೀನುಗಳಿಗೆ ಬಲೆಗಳು ಹಾಕಿ ರಾತ್ರಿ 08-30 ರ ಸಮಯದಲ್ಲಿ ಬಲೆಗಳಿಗೆ ಬಿದ್ದ ಮೀನುಗಳನ್ನು ಮನೆಗೆ ತಂದು ಬೆಳಿಗ್ಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಗುರುವಾರ ರಾತ್ರಿ ಸಹಾ ಎಂದಿನಂತೆ ಕೆರೆಯಲ್ಲಿ ಬೋಟ್ ಇಳಿಸಿ ಮೀನುಗಳ ಬಲೆಗೆ ಹೋಗುತ್ತಿರುವಾಗ 11 ಕೆ.ವಿ. ತಂತಿಗಳು ಇರುವ ಪಕ್ಕದಲ್ಲಿ ಬೋಟ್‌ನಲ್ಲಿ ಕುಳಿತಿದ್ದ ಚಾಪಲ ಮಾಬುಸಾಬ್‌ಗೆ ಬುಜದ ಹಿಂದೆ ವಿದ್ಯುತ್ ತಂತಿ ಸೋಕಿ ಗಾಯವಾದರೆ ಅದೇ ತಂತಿ ಹಿಂದೆ ಕುಳಿತ್ತಿದ್ದ ಹೆಂಡತಿ ಆಶಾಬೀ (54) ಗೆ ವಿದ್ಯುತ್ ತಂತಿ ಸೋಕಿ ಕೆರೆಯಲ್ಲೇ ಬಿದ್ದು ಮೃತಪಟ್ಟಿರುತ್ತಾಳೆ.

ಕೆರೆಯಿಂದ ಪ್ರಾಣ ಪಾಯದಿಂದ ಗಾಯಗಳಿಂದ ಪಾರಾದ ಈ ವ್ಯಕ್ತಿ ಈ ವಿಚಾರವನ್ನು ಗ್ರಾಮದ ಜನರಿಗೆ ಹೇಳಿದಾಗ ಜನತೆ ಬಾಗೇಪಲ್ಲಿ ಅಗ್ನಿ ಶಾಮಕ ದಳದವರಿಂದ ಕೆರೆಯಲ್ಲಿ ಮೃತಿಸಿದ ಮೃತದೇಹವನ್ನು ಕೆರೆಯಿಂದ ಹೊರ ತೆಗೆದು ಬಾಗೇಪಲ್ಲಿ ಸರಕಾರಿಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿಲಾಯಿತು ಈ ಕೆರೆ ಗ್ರಾ.ಪಂ.ಗೆ ಸೇರಿದ್ದು ಹರಾಜುನಲ್ಲಿ ಮುಜಾಹೀದ್ ಎಂಬುವರು ತೆಗೆದುಕೊಂಡಿದ್ದು ಅವರಿಂದ ಮಾಬುಸಾಬ್ ವರ್ಷಕ್ಕೆ 80 ಸಾವಿರ ನೀಡಿ ಮೀನುಗಳು ಹಿಡಿಯುತ್ತಿದ್ದನು.

ಬಡಕುಟುಂಬದ ಆಕ್ರಂದನ; ಗ್ರಾಮದ ಆಶಾಬೀ ರವರು ಬಡಕುಟುಂಬದವಳಾಗಿದ್ದು ಮಕ್ಕಳು ಮೊಮ್ಮಕ್ಕಳು ಮೃತ ದೇಹದ ಮೇಲೆ ರೋಧಿಸುತ್ತಿದ್ದರು.

ಇದನ್ನು ಓದಿದ್ದೀರಾ…? ಕೋಲಾರ |ಆದಿಮ ನಾಟಕೋತ್ಸವ ಸಂಭ್ರಮ

ಒತ್ತಾಯ; ಗ್ರಾಮದಲ್ಲಿ ಮೀನುಗಳು ಮಾರಾಟ ಮಾಡಿ ಜೀವನ ಮಾಡುವ ಇವರ ಕುಟುಂಬಕ್ಕೆ ಸರಕಾರದಿಂದ ಗ್ರಾ.ಪಂ.ಯಿಂದ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ಕೃಷಿ ಕೂಲಿ ಕಾರ್ಮಿಕರ ಪ್ರಾಂತ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಜಹೀರ್‌ಬೇಗ್ ರವರು ಮನವಿ ಮಾಡಿ ಒತ್ತಾಯಿಸಿದ್ದಾರೆ.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

‘SIR’ ಪರಿಶೋಧ-ಪ್ರತಿರೋಧ: ಸೆ.29ರಂದು ಮೈಸೂರಿನಲ್ಲಿ ಪ್ರಕಾಶ್ ರಾಜ್ ಸಂವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆ...

ಉಡುಪಿ | ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ

ಹೆತ್ತ ತಾಯಿಯನ್ನೇ ಮಗ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ...

ಬಳ್ಳಾರಿ | ಲಾರಿ ಪಲ್ಟಿ; ಸ್ಟೀನಿಂಗ್ ಯಂತ್ರ ಬಿದ್ದು ಯುವಕ ದುರ್ಮರಣ

ಜಿಲ್ಲೆ ಸಂಡೂರು ತಾಲ್ಲೂಕಿನ ಉಬ್ಬಳಗಂಡಿ ಗ್ರಾಮದ ಬಳಿ ಮೈನ್‌ಸ್‌ನ ಸ್ಟೀನಿಂಗ್ ಯಂತ್ರವನ್ನು...