ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ದಳಸನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೂಹಳ್ಳಿ ಗ್ರಾಮದಲ್ಲಿನ ನಿವೇಶನಗಳಿಗೆ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು
ಸುಮಾರು 15 ವರ್ಷಗಳಿಂದ ಗ್ರಾಮದಲ್ಲಿನ ಕೂಲಿ ಕಾರ್ಮಿಕರಿಗೆ, ರೈತರಿಗೆ ಮನೆ ಇಲ್ಲದವರಿಗಾಗಿ ಸರ್ವೆ ನಂಬರ್ 68 ರಲ್ಲಿ ಊರಿನ ಗ್ರಾಮಸ್ಥರೆಲ್ಲರೂ ಒಟ್ಟಾಗಿ ನಿವೇಶನಗಳನ್ನು ನೀಡಿದ್ದಾರೆ ಜನರು ತಮ್ಮ ಸ್ವಂತ ಕೂಲಿ ಮಾಡಿದ ಹಣದಲ್ಲಿ ಮನೆ ಕಟ್ಟಿಕೊಂಡಿದ್ದಾರೆ ರಸ್ತೆ ಮಾಡಿಕೊಂಡಿದ್ದಾರೆ ಬೀದಿ ದೀಪ ಅಳವಡಿಸಿಕೊಂಡಿದ್ದಾರೆ ಆದರೆ ಹಕ್ಕುಪತ್ರ ಮಾತ್ರ ಅಲ್ಲಿನ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ನೀಡುತ್ತಿಲ್ಲ ಎಂದು ಆರೋಪಿಸಿದರು
ಸುಮಾರು ವರ್ಷಗಳಿಂದ ಜಿಲ್ಲಾಧಿಕಾರಿಗೆ, ತಹಸೀಲ್ದಾರ್ ಗೆ, ತಾಲೂಕು ಪಂಚಾಯಿತಿ ಇಒಗೆ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿ ಹಕ್ಕು ಪತ್ರ ವಿತರಿಸಲು ಮನವಿ ಮಾಡಿಕೊಂಡಿದ್ದರು ಇದುವರೆಗೂ ಯಾರು ಸಹ ಇವರ ಬಗ್ಗೆ ಗಮನ ಹರಿಸಿಲ್ಲ ಕೂಡಲೇ ಪರಿಶೀಲಿಸಿ ನಮಗೆ ಹಕ್ಕುಪತ್ರ ವಿತರಿಸಲು ಆದೇಶ ಮಾಡಬೇಕೆಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಅರ್ಜಿಗಳನ್ನು ಪರಿಶೀಲಿಸಿ ಇದುವರೆಗೂ ಏಕೆ ಅಧಿಕಾರಿಗಳು ಅನುಕೂಲ ಕಲ್ಪಿಸಲಿಲ್ಲ ಎಂಬುದನ್ನು ಬೇಸರದಿಂದ ವ್ಯಕ್ತಪಡಿಸಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಕ್ಕು ಪತ್ರ ವಿತರಿಸಲು ಸಮಸ್ಯೆಯನ್ನು ಪರಿಶೀಲಿಸುವುದಾಗಿ ಮುಂದಿನ ದಿನಗಳಲ್ಲಿ ನಿಮಗೆಲ್ಲ ಅನುಕೂಲವಾಗುವಂತೆ ಹಕ್ಕುಪತ್ರ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ..? ದಲಿತರು ಶಿಕ್ಷಣ ಉದ್ಯೋಗಕ್ಕೆ ಸೀಮಿತಗೊಳ್ಳದೆ ಉದ್ಯಮಿಗಳಾಗುವಂತೆ ಡಿಸಿ ಎಂ.ಆರ್ ರವಿ ಕರೆ
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ಜಿಲ್ಲಾ ಸಂಚಾಲಕ ಆರ್ ಶ್ರೀನಿವಾಸನ್, ಮುಖಂಡರಾದ ಹರಟಿ ಪ್ರಕಾಶ್, ಸೋಮಶೇಖರ್, ಗಂಗಮ್ಮ, ಹೊಲ್ಲಂಬಳ್ಳಿ ವೆಂಕಟೇಶ್, ವೆಂಕಟಲಕ್ಷ್ಮಮ್ಮ, ಕವಿತಾ, ಉಮಾ, ಮುನಿಲಕ್ಷ್ಮಮ್ಮ ಸೇರಿದಂತೆ ಗ್ರಾಮಸ್ಥರು ಇದ್ದರು.




