ಬೆಂಗಳೂರು ಮೆಟ್ರೋದ ಹೊಸ ಮಾರ್ಗಗಳಲ್ಲಿ ಸುರಕ್ಷತಾ ಪರೀಕ್ಷೆಗಳು ನಡೆಯುವ ಕಾರಣ ಭಾನುವಾರ (ಆಗಸ್ಟ್ 27) ನೇರಳೆ ಮಾರ್ಗದ ಕೆಲವು ನಿಲ್ದಾಣಗಳ ನಡುವೆ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೆಟ್ರೋ ನಿಗಮ ತಿಳಿಸಿದೆ.
ಭಾನುವಾರದಂದು ಕೆ.ಆರ್‌ಪುರಂನಿಂದ ಬೈಯ್ಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚೆಲ್ಲಘಟ್ಟ ನಡುವಿನ ಹೊಸ ಮೆಟ್ರೋ ಮಾರ್ಗಗಳಲ್ಲಿ ಸುರಕ್ಷತಾ ಪರೀಕ್ಷೆಗಳು ನಡೆಯಲಿವೆ. ಹಾಗಾಗಿ, ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನೇರಳೆ ಮಾರ್ಗದಲ್ಲಿ ಕೆಲವು ನಿಲ್ಧಾಣಗಳಿಗೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ನಿಗಮ ಹೇಳಿದೆ.
ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವೆ, ಬೈಯಪ್ಪನಹಳ್ಳಿ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ನಿಲ್ದಾಣದ ನಡುವೆ ಹಾಗೂ ವೈಟ್‌ಫೀಲ್ಡ್‌ನಿಂದ ಕೆ.ಆರ್‌ಪುರಂ ನಡುವೆ ಮೆಟ್ರೋ ಸಂಚಾರ ಇರುವುದಿಲ್ಲ. ಈ ಸಮಯದಲ್ಲಿಯೂ ಬೈಯಪ್ಪನಗಳಲ್ಲಿ ಮತ್ತು ಮೈಸೂರು ರಸ್ತೆಯ ನಡುವೆ ಮೆಟ್ರೋ ಸಂಚಾರ ಇರುತ್ತದೆ ಎಂದು ನಿಗಮ ಹೇಳಿದೆ.
ಈ ಸುದ್ದಿ ಓದಿದ್ದೀರಾ?: ಸೋಂಕುಗಳು, ಅಪಘಾತಗಳೂ ಕಾರ್ನಿಯಲ್ ಕುರುಡುತನಕ್ಕೆ ಕಾರಣವಾಗುತ್ತವೆ: ಕಣ್ಣಿನ ತಜ್ಞ
ಮಧ್ಯಾಹ್ನ 1 ಗಂಟೆಯ ನಂತರ ಎಂದಿನಂತೆ ಬೈಯಪ್ಪನಹಳ್ಳಿಯಿಂದ ಕೆಂಗೇರಿವರೆಗೆ ಹಾಗೂ ಕೆಆರ್‌ಪುರಂನಿಂದ ವೈಟ್‌ಫೀಲ್ಡ್ ವರೆಗೆ ಮೆಟ್ರೋ ಸೇವೆ ಇರುತ್ತದೆ ಎಂದು ಹೇಳಿದೆ.
ಅಲ್ಲದೆ, ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದೂ ನಿಗಮ ತಿಳಿಸಿದೆ.