ಆಘಾತಕಾರಿ ಘಟನೆ | ಮುಸ್ಲಿಂ ವಿದ್ಯಾರ್ಥಿಯ ಕೆನ್ನೆಗೆ ಹೊಡೆಯುವಂತೆ ಹಿಂದೂ ವಿದ್ಯಾರ್ಥಿಗಳಿಗೆ ಸೂಚಿಸಿದ ಶಿಕ್ಷಕಿ!

Date:

  • ಉತ್ತರ ಪ್ರದೇಶದ ಮುಝಾಫರ್‌ ನಗರದಲ್ಲಿ ನಡೆದಿರುವ ಘಟನೆ; ವಿಡಿಯೋ ವೈರಲ್
  • ಪೊಲೀಸರಿಗೆ ದೂರು ನೀಡಲು ಬಯಸದ ಮುಸ್ಲಿಂ ವಿದ್ಯಾರ್ಥಿಯ ಪೋಷಕರು

ಆಘಾತಕಾರಿ ಘಟನೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಯೋರ್ವನಿಗೆ ಕಪಾಳಕ್ಕೆ ಬಾರಿಸುವಂತೆ ಹಿಂದು ವಿದ್ಯಾರ್ಥಿಗಳಿಗೆ ಶಿಕ್ಷಕಿಯೊಬ್ಬರು ಸೂಚಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಉತ್ತರ ಪ್ರದೇಶದ ಮುಝಾಫರ್‌ ನಗರದಲ್ಲಿರುವ ನೇಹಾ ಪಬ್ಲಿಕ್ ಶಾಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

ಶಿಕ್ಷಕಿಯ ಆದೇಶದಂತೆ ಇತರೆ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವ ದೃಶ್ಯವನ್ನು ವಿದ್ಯಾರ್ಥಿಯ ಸಂಬಂಧಿಯೋರ್ವ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಬೇರೆ ಕೆಲಸದ ನಿಮಿತ್ತ ವಿದ್ಯಾರ್ಥಿಯ ಸಂಬಂಧಿ ಶಾಲೆಗೆ ಹೋಗಿದ್ದ ವೇಳೆ ಈ ಬೆಳವಣಿಗೆ ನಡೆದಿದ್ದು, ಅದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
https://twitter.com/Delhiite_/status/1695075079607202263?s=20

ಬಳಿಕ ಈ ವಿಡಿಯೋವನ್ನು ವಿದ್ಯಾರ್ಥಿಯ ಪೋಷಕರಿಗೆ ತೋರಿಸಿದ್ದು, ಶಾಲೆಯಲ್ಲಿ ಈ ರೀತಿ ನಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಆ ಬಳಿಕ ಶಾಲೆಗೆ ಪೊಲೀಸರು ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಹೊಡೆಯಲು ಸೂಚಿಸಿದ ಶಿಕ್ಷಕಿಯನ್ನು ತೃಪ್ತ ತ್ಯಾಗಿ ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಒಬ್ಬೊಬ್ಬರಾಗಿ ಬಂದು ಇತರೆ ವಿದ್ಯಾರ್ಥಿಗಳು ಕೆನ್ನೆಗೆ ಹಾಗೂ ಬೆನ್ನಿಗೆ ಬಾರಿಸುತ್ತಿರುವುದು ದಾಖಲಾಗಿದೆ. ಮಕ್ಕಳು ಹೊಡೆದ ಬಳಿಕ ಮುಂದಿನ ಸರದಿ ಯಾರದ್ದು ಎಂದು ಶಿಕ್ಷಕಿ ತೃಪ್ತ ತ್ಯಾಗಿ ಕೇಳುತ್ತಿರುವುದು ದಾಖಲಾಗಿದೆ. ಇದೇ ವೇಳೆ ಮುಸ್ಲಿಂ ವಿದ್ಯಾರ್ಥಿ, ಕಣ್ಣೀರಿಡುತ್ತಾ ನಿಂತಿರುವುದು ಕಾಣಿಸಿದೆ.

https://twitter.com/zoo_bear/status/1695060906709795185?s=20

ಈ ಘಟನೆಯ ಬಗ್ಗೆ ಟ್ವೀಟ್ ಮಾಹಿತಿ ಹಂಚಿಕೊಂಡಿರುವ ಆಲ್ಟ್‌ ನ್ಯೂಸ್‌ನ ಪತ್ರಕರ್ತ ಮುಹಮ್ಮದ್ ಝುಬೇರ್, ‘ಬಾಲಕನ ತಂದೆ ಜೊತೆ ಮಾತನಾಡಿದೆ. ತನ್ನ ಮಗನನ್ನು ಶಾಲೆಗೆ ಕಳುಹಿಸದಿರಲು ನಿರ್ಧರಿಸಿದ್ದೇನೆ. ಪೊಲೀಸರ ಮುಂದೆ ಶಿಕ್ಷಕಿ ಕ್ಷಮೆ ಯಾಚಿಸಿದ್ದಾರೆ. ಹಾಗಾಗಿ ಶಿಕ್ಷಕಿಯ ಅವರ ವಿರುದ್ಧ ದೂರು ನೀಡಲು ಬಯಸುವುದಿಲ್ಲ ಎಂದು ಮುಝಫ್ಫರ್‌ ನಗರ ಪೊಲೀಸರಿಗೆ ಲಿಖಿತವಾಗಿ ಬರೆದು ಕೊಟ್ಟಿದ್ದೇನೆ ಎಂದು ನನಗೆ ತಿಳಿಸಿದರು’ ಎಂದು ತಿಳಿಸಿದ್ದಾರೆ.

ಶಿಕ್ಷಕಿ ತೃಪ್ತ ತ್ಯಾಗಿ ಮತ್ತು ಆಕೆಯ ಪತಿ ಇಬ್ಬರು ವಿಕಲ ಚೇತನರಾಗಿದ್ದು, ಈ ಶಾಲೆಯನ್ನು ತಮ್ಮ ಮನೆಯ ಆವರಣದಲ್ಲೇ ನಡೆಸುತ್ತಿದ್ದರು ಎಂದು ವರದಿಯಾಗಿದೆ. ಈ ಶಾಲೆಯಲ್ಲಿ ಸುಮಾರು 50ರಷ್ಟು ಮಕ್ಕಳು ಕಲಿಯುತ್ತಿದ್ದರು ಎಂದು ತಿಳಿದುಬಂದಿದೆ.

ಈ ಘಟನೆಗೆ ಪ್ರತಿಕ್ರಿಯಿಸಿರುವ ಹಲವರು, ‘ದೇಶದಲ್ಲಿ ಹೆಚ್ಚುತ್ತಿರುವ ಮುಸ್ಲಿಂ ದ್ವೇಷಕ್ಕೆ ಗೋದಿ ಮಾಧ್ಯಮಗಳು ಹಾಗೂ ಈಗಿನ ರಾಜಕೀಯ ಬೆಳವಣಿಗೆಯೇ ಕಾರಣ. ಶಿಕ್ಷಕಿ ಕ್ಷಮೆ ಕೇಳಿದರೆ ಸಾಕೇ? ಆಕೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ನಿಮ್ಮ news Reporter ಪೂರ್ಣ ವಿಷದ ಬಗ್ಗೆ ತಿಳಿದು Niu reports annu ಮಾಡೋದು ಕಲಿರಿ, ನಿಮ್ಮಂತ ಕಚಡ್ news papers yindane namm desha halagtirodu , Kachada solemaklra Poorna vishaya bariyodanna kaliri, ನಿಮ್ಮಂತ ಸುಳೆ ಮಕ್ಕಳಿಂದ ನಮ್ಮ ದೇಶದ ಜನರ ಭಾವನೆಗಳು ಚೇಂಜ್ ಆಗ್ತಿದೆ ದ್ವೇಷ ಹುತ್ಕೊತಿವೆ,

    ಮೊದಲು teacher ಅವರನ್ನ ಯಾಕೆ ಹೊಡಿ ಅಂತ ಹೇಳಿದ್ರು ಅನ್ನೋದನ್ನ ತಿಳಿದು,

    ಆಮೇಲೆ ಆtarad news report’s ready madkondu upload maadu,

    Saushadpak news galanna online nalli bittu jachigal madde jagad hach kelasa modok hogbyad,

  2. ಕಾಲಗಳು ಬದಲಾದಂತೆ ಜನರು ಕೂಡ ಬದಲಾಗಿದ್ದಾರೆ ಆದ್ರೆ ನೀವು ಕೊಡುವ ಸಂದೇಶಗಳು ಜನರಿಗೆ ಅಮೂಲ್ಯ ರತ್ನ, ಆದ ಕಾರಣ ನೀವುಗಳು, ಉತ್ತಮ ಸಂದೇಶ ಗಲ್ಲನು ಕೊಡ್ಬೇಕೆ ಹೊರತು ಅನವಶಕದ ದೇಶದಲ್ಲಿ ಜಾತಿಗಳ ಮದ್ದೆ ಜಗಡ್ ಹಚ್ಚ್ ಸಂದೇಶಗಳು ಯಾವತ್ತೂ ಮಾದುಕ್ ಹೋಗ್ಬ್ಯಾಡ್ರಿ,

    ನಿಮ್ಮ ಸಂದೇಶ ಜನರಿಗೆ ಅಮೂಲ್ಯ ರತ್ನ, ದೇಶ ಉಳಿವುದು ಆಲಿಸುವುದು ನಿಮ್ಮ kaiyallirutte ದಯವಿಟ್ಟು ದೇಶದ ವಳಿತಿಗಾಗಿ ಕೆಲಸಗಳನ್ನ ಮಾಡಿ,

    ನಾವು ನಿಮ್ಮಿಂದ ಬಾಯೋಸೋದೂ ದೇಶದ ಜನರು ಶಾಂತತೆ ಯಿಂಡ್ ಜೀವನ ಸಾಗಲಿ ಅನ್ನೋ ಒಂದೇ ನಮ್ಮೆಲ್ಲರ ಭಾವನೆ,

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅನಧಿಕೃತ ಕೋಚಿಂಗ್‌ ಕೇಂದ್ರಗಳ ವಿರುದ್ಧ ಕ್ರಮಕ್ಕೆ ದಲಿತ ಸೇನೆ ಆಗ್ರಹ

ಔರಾದ ತಾಲೂಕಿನಾದ್ಯಂತ ನಿಯಮಬಾಹಿರವಾಗಿ ನಡೆಯುತ್ತಿರುವ ಕೋಚಿಂಗ್ ಕೇಂದ್ರಗಳು ಹಾಗೂ ಅನಧಿಕೃತ ವಸತಿ...

ಡಿಸೆಂಬರ್‌ 20, 21, 22 ರಂದು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಡಿಸೆಂಬರ್‌ 20,...

ಬಾಲಸೋರ್‌ ದುರಂತ ಮಾಸುವ ಮುನ್ನವೇ ಮತ್ತೊಂದು ರೈಲು ಅಪಘಾತ | Railway accident | West Bengal

ಒಡಿಶಾದ ಬಾಲಸೋರ್‌ ನಲ್ಲಿ ನಡೆದ ಭೀಕರ ದುರಂತ ಮಾಸುವ ಮುನ್ನವೇ ಮತ್ತೊಂದು...

ಪರ್ಯಾಯ ಮಾಧ್ಯಮಗಳತ್ತ ಜನರ ಚಿತ್ತ

2024ರ ಲೋಕಸಭಾ ಚುನಾವಣೆಯ ವರದಿ ಮತ್ತು ವೀಕ್ಷಣೆಯಲ್ಲಿ ಮುಖ್ಯವಾಹಿನಿ ಮಾಧ್ಯಮಗಳಿಗಿಂತ ಪರ್ಯಾಯ...