ವಿದ್ಯುತ್‌ ದರ ಹೆಚ್ಚಳವಾಗಲು ಕಾರಣಗಳೇನು? ಇಲ್ಲಿದೆ ಮಾಹಿತಿ

Date:

  • 100 ಯೂನಿಟ್‌ ವರೆಗಿನ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ₹4.15 ದರ ನಿಗದಿ
  • 100 ಯೂನಿಟ್‌ ಮೀರಿದರೆ, ಬಳಸಿದ ಅಷ್ಟೂ ಯೂನಿಟ್‌ಗೂ ₹7ರಂತೆ ದರ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಪ್ರಸಕ್ತ ಸಾಲಿನ ಏಪ್ರಿಲ್‌ 1ರಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್‌ ದರ ಹೆಚ್ಚಿಸಿ ಆದೇಶ ಹೊರಡಿಸಿದ್ದು, ಜೂನ್‌ ತಿಂಗಳಿನಿಂದ ಗ್ರಾಹಕರಿಗೆ ಎರಡು ಸ್ತರಗಳಲ್ಲಿ (ಸ್ಲ್ಯಾಬ್‌ಗಳಲ್ಲಿ) ವಿದ್ಯುತ್‌ ಯೂನಿಟ್‌ ದರ ನಿಗದಿಪಡಿಸಲಾಗಿದೆ.

ಕೆಇಆರ್‌ಸಿ ಮೇ 12ರಂದು ಹೊರಡಿಸಿದ ಆದೇಶದ ಪ್ರಕಾರ, ಗ್ರಾಹಕರು ಬಳಸಿದ 100 ಯೂನಿಟ್‌ವರೆಗಿನ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ₹4.15 ಪೈಸೆ ವಿಧಿಸಲಾಗುತ್ತದೆ. 100 ಯೂನಿಟ್‌ ಮೀರಿದರೆ, ಬಳಸಿದ ಅಷ್ಟೂ ಯೂನಿಟ್‌ ವಿದ್ಯುತ್‌ಗೆ ₹7ರಂತೆ ದರ ವಿಧಿಸಲಾಗುತ್ತದೆ.

ಹೀಗಾಗಿ, ಜುಲೈ ತಿಂಗಳಲ್ಲಿ 100 ಯೂನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡಿದ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ₹7ರಂತೆ ದರ ಲೆಕ್ಕ ಹಾಕಿ ಬಿಲ್‌ ನೀಡಲಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಹಿಂದೆ ಮೂರು ಹಂತಗಳಲ್ಲಿ ಮೊದಲ 50 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ ₹4.10 ಪೈಸೆ, ನಂತರದ 50 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ ₹5.60 ಪೈಸೆಯಂತೆ, ನಂತರ ಪ್ರತಿ ಯೂನಿಟ್‌ಗೆ ₹7.15 ಪೈಸೆಯಂತೆ ದರ ವಿಧಿಸಲಾಗುತ್ತಿತ್ತು.

ವಿದ್ಯುತ್ ದರ ಏರಿಕೆ ಪ್ರಸ್ತಾವನೆಯನ್ನು ಎಸ್ಕಾಂಗಳು ಕೆಇಆರ್‌ಸಿ ಮುಂದೆ ಇಟ್ಟಿದ್ದರೂ ಚುನಾವಣೆ ನಡೆಯುತ್ತಿದ್ದ ಹೊತ್ತಿನಲ್ಲಿ ಅನುಮೋದನೆ ನೀಡಿರಲಿಲ್ಲ. ಫಲಿತಾಂಶದ ಮುನ್ನಾದಿನವಷ್ಟೇ (ಮೇ 12ರಂದು) ದರ ಏರಿಕೆಗೆ ಒಪ್ಪಿಗೆ ನೀಡಲಾಗಿತ್ತು.

ಕಡಿಮೆ ವಿದ್ಯುತ್ ಬಳಸುವವರಿಗೆ ಕಡಿಮೆ ದರ, ಹೆಚ್ಚು ವಿದ್ಯುತ್ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ ಹೆಚ್ಚಿನ ದರದ ಪದ್ಧತಿ ಇತ್ತು. ಹೀಗೆ ನಾಲ್ಕು ಸ್ತರಗಳಲ್ಲಿ ವಿಧಿಸುತ್ತಿದ್ದ ದರವನ್ನು ಎರಡು ಸ್ತರಕ್ಕೆ ಬದಲಾವಣೆ ಮಾಡಲಾಯಿತು. ಇದರಿಂದಾಗಿ, ಜೂನ್‌ ತಿಂಗಳಿನಲ್ಲಿ ನೀಡಲಾದ ವಿದ್ಯುತ್ ಬಿಲ್‌ನಲ್ಲಿ ಮೇ ತಿಂಗಳಿಗೆ ಹೋಲಿಸಿದರೆ ಭಾರಿ ಹೆಚ್ಚಳವಾಗಿದೆ.

ಈ ಸುದ್ದಿ ಓದಿದ್ದೀರಾ? ರಾಜಧಾನಿ ಸೇರಿ ವಿವಿಧ ಜಿಲ್ಲೆಗಳಲ್ಲಿ ʼಶಕ್ತಿ ಯೋಜನೆʼ ಜಾರಿಯ ಸಂಭ್ರಮ

100 ಯೂನಿಟ್ ಒಳಗಿನವರಿಗಷ್ಟೇ ಕಡಿಮೆ ಬಿಲ್ ಬಂದಿದೆ. 110 ಯೂನಿಟ್ ಬಳಸುತ್ತಿದ್ದವರಿಗೆ ಮೊದಲ 50 ಯೂನಿಟ್‌ವರೆಗೆ ₹4.10 ರಂತೆ ₹205, ನಂತರದ 50 ಯೂನಿಟ್‌ವರೆಗೆ ₹5.60ರಂತೆ ₹280 ಹಾಗೂ 10 ಯೂನಿಟ್‌ಗೆ ತಲಾ ₹7.15 ರಂತೆ ₹71.50 ಸೇರಿ ₹556.50 ಬಿಲ್ ಬರುತ್ತಿತ್ತು.

ಆದರೆ, ಈಗ 110 ಯೂನಿಟ್ ಬಳಸಿದವರಿಗೆ ₹770 ಬಿಲ್‌ ಬಂದಿದೆ. ಅಂದರೆ ಏಕಾಏಕಿ ₹223.50 ಹೆಚ್ಚಳವಾದಂತಾಗಿದೆ. 100 ಯೂನಿಟ್‌ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್‌ಗೆ ₹7 ನಿಗದಿ ಮಾಡಿರುವುದರಿಂದ, 150 ಯೂನಿಟ್ ಬಳಸುವವರು ₹208 ಹೆಚ್ಚಿಗೆ ಪಾವತಿಸುವಂತಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಪ್ರತಿ ಯುನಿಟ್ಗೆ ರೂ4.15 ಎಂದು ಹೇಳಿದ್ದೀರಿ, ಆದರೆ ರೂ4.75 ಆಗಿದೆ. ಮತ್ತು ಇಂಧನ ಹೊಂದಾಣಿಕೆ ಶುಲ್ಕ ಎಂದು ರೂ0.53 ಪ್ರತಿ ಯುನಿಟ್ಟಿಗೆ ಇದ್ದದ್ದು ಈಗ ರೂ2.42 ಆಗಿದೆ. ಹಾಗೂ ಮಿನಿಮಮ್ ಹಣ ರೂ 85 ಇದ್ದದ್ದು ರೂ110 ಕ್ಕೆ ಹೆಚ್ಚಿಸಲಾಗಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಕೇಂದ್ರದಲ್ಲಿ ಇಂಡಿಯಾ ಒಕ್ಕೂಟಕ್ಕೆ ಅಧಿಕಾರ: ಗೃಹ ಸಚಿವ ಪರಮೇಶ್ವರ್

ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭಾ...

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....