- 2017ರ ಸೆ.5ರಂದು ಗೌರಿ ಲಂಕೇಶ್ ಅವರನ್ನು ಹತ್ಯೆಗೈದಿದ್ದ ಸಂಘಿಗಳು
- 2022ರಲ್ಲಿ ‘ಅತ್ಯುತ್ತಮ ಮಾನವ ಹಕ್ಕು’ ವಿಭಾಗದಲ್ಲಿ ಚಲನಚಿತ್ರ ಪ್ರಶಸ್ತಿ
ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತೆ, ನಿರ್ದೇಶಕಿ ಕವಿತಾ ಲಂಕೇಶ್ ನಿರ್ದೇಶನದ ‘ಗೌರಿ’ ಸಾಕ್ಷ್ಯಚಿತ್ರಕ್ಕೆ ‘ಅತ್ಯುತ್ತಮ ದೀರ್ಘ ಸಾಕ್ಷ್ಯಚಿತ್ರ’ ಪ್ರಶಸ್ತಿಗೆ ಆಯ್ಕೆಯಾಗಿದೆ. ಮಾಂಟ್ರಿಯಲ್‌ನ ದಕ್ಷಿಣ ಏಷ್ಯಾ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
2017ರಲ್ಲಿ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರು ಹಿಂದುತ್ವವಾದಿಗಳಿಂದ ಹತ್ಯೆಯಾದರು. ಅವರ ಸಹೋದರಿ ಕವಿತಾ ಅವರು ‘ಗೌರಿ’ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದ್ದರು. ಸಾಕ್ಷ್ಯಾಚಿತ್ರವು ‘ಅತ್ಯುತ್ತಮ ದೀರ್ಘ ಸಾಕ್ಷ್ಯಚಿತ್ರ’ ಪ್ರಶಸ್ತಿ ಪಡೆದುಕೊಂಡಿದೆ. ಜೊತೆಗೆ, ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ‘ಆಲ್ ದಟ್ ಬೀನ್ಸ್’ ಸಾಕ್ಷ್ಯಚಿತ್ರವೂ ‘ರನ್ನರ್ ಅಪ್’ ಪ್ರಶಸ್ತಿ ಪಡೆದಿದೆ.
‘ಸಾಕ್ಷ್ಯಚಿತ್ರವು 2017ರಲ್ಲಿ ರಾಜಕೀಯ ಹತ್ಯೆಗೊಳಗಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಕುರಿತು ಬೆಳಕು ಚೆಲ್ಲುತ್ತದೆ. ಗೌರಿ ಅವರ ಸಹೋದರಿ ಕವಿತಾ ಲಂಕೇಶ್ ಅವರು ಉತ್ಸಾಹದಿಂದ ನಿರ್ದೇಶಿಸಿದ ಮತ್ತು ನಿರೂಪಿಸಿದ ಡಾಕ್ಯು-ಥ್ರಿಲ್ಲರ್ ಇದಾಗಿದೆ’ ಎಂದು ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ.
‘ಅಮ್‌ಸ್ಟರ್‌ಡ್ಯಾಮ್‌ನ ಫ್ರೀ ಪ್ರೆಸ್ ಅನ್‌ಲಿಮಿಟೆಡ್’ ಗೌರಿ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಹಕರಿಸಿತ್ತು. ವೃತ್ತಿಪರ ಸೇವೆಯ ಕಾರಣದಿಂದಾಗಿ ಹಿಂಸೆಗೆ ಒಳಗಾಗಿ ಪ್ರಾಣತೆತ್ತ ಪತ್ರಕರ್ತರ ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಲು ಸಂಸ್ಥೆ ಕೋರಿತ್ತು. ಸುಮಾರು 300 ಪ್ರಸ್ತಾವನೆಗಳು ಬಂದಿದ್ದವು. ಆ ಪೈಕಿ, ಆಯ್ಕೆಯಾದ ನಾಲ್ಕು ಚಿತ್ರಗಳಲ್ಲಿ ‘ಗೌರಿ’ ಸಾಕ್ಷ್ಯಚಿತ್ರವೂ ಒಂದು.
ಈ ಸುದ್ದಿ ಓದಿದ್ದೀರಾ? ಈದಿನ ವಿಶೇಷ | ಸಾಫ್ಟ್‌ವೇರ್ ಇಂಜಿನಿಯರ್ ʼಡೇರ್‌ಡೆವಿಲ್ ಮುಸ್ತಫಾʼ ಸಿನಿಮಾ ಮಾಡಿದ ಕಥೆ
2022ರಲ್ಲಿ ಟೊರೊಂಟೋ ಪ್ರಶಸ್ತಿ
ಟೊರೊಂಟೊ ಮಹಿಳಾ ಚಲನಚಿತ್ರೋತ್ಸವ 2022ರಲ್ಲಿ ಗೌರಿ ಡಾಕ್ಯುಮೆಂಟರಿಗೆ ಟೊರೊಂಟೋ ಪ್ರಶಸ್ತಿ ಬಂದಿದೆ. ಗೌರಿ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಮಾನವ ಹಕ್ಕು ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.