ನಮ್ಮ ಮೆಟ್ರೋ ಕಾಮಗಾರಿ ಹಿನ್ನೆಲೆ ಸೆಂಟ್ರಲ್ ಜಂಕ್ಷನ್ ಫ್ಲೈಓವರ್ ಅನ್ನು ಬಂದ್ ಮಾಡಲಾಗುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಫ್ಲೈಓವರ್ (ಮಡಿವಾಳ ಬದಿ) ಇಂದಿನಿಂದ ನಾಲ್ಕು ತಿಂಗಳವರೆಗೆ ಭಾಗಶಃ ಬಂದ್ ಆಗಿರಲಿದೆ.
ಸಿಲ್ಕ್ ಬೋರ್ಡ್ ಫ್ಲೈಓವರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಮೆಟ್ರೋ ಕಾಮಗಾರಿಗಳು ಆರಂಭವಾಗಿವೆ. ಈ ಕಾಮಗಾರಿಯನ್ನು ಆದಷ್ಟು ಬೇಗನೇ ಮುಗಿಸಬೇಕಿರುವ ಒತ್ತಡ ಬಿಎಂಆರ್‌ಸಿಎಲ್ ಮೇಲಿದೆ. ಈ ಹಿನ್ನೆಲೆಯಲ್ಲಿ ಸಿಲ್ಕ್ ಬೋರ್ಡ್ ಫ್ಲೈಓವರ್ ಅನ್ನು ಕೆಲ ತಿಂಗಳ ಕಾಲ ಮುಚ್ಚಲೇಬೇಕಿರುವ ಅನಿವಾರ್ಯತೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ನಾಲ್ಕು ತಿಂಗಳವರೆಗೆ ಬಂದ್ ಮಾಡಿ ಕಾಮಗಾರಿ ಮುಗಿಸಲು ಬಿಎಂಆರ್‌ಸಿಎಲ್ ಯೋಜಿಸಿದೆ.
Traffic situation at #SilkBoard junction is expected to worsen as the #BMRCL is barricading the carriageway (2.50 mts on both sides) of the flyover up and down ramp (#Madivala side) for 4 months.#Madiwala #Bengaluru #BengaluruTraffic pic.twitter.com/iKmK5cccJo
— Madhuri Adnal (@madhuriadnal) October 20, 2023
ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆ ಅಪ್ & ಡೌನ್ ರ್‍ಯಾಂಪ್ ಕ್ಯಾರೇಜ್ ವೇ(ಮಡಿವಾಳ ಬದಿ) ಲೂಪ್‌ಗಳು ಮತ್ತು ರ್‍ಯಾಂಪ್ ಫ್ಲೈಓವರ್ ಸ್ಟ್ರೇಜಿಂಗ್ ಕಾಮಗಾರಿ ಕೈಗೊಳ್ಳಲು ತಾತ್ಕಾಲಿಕವಾಗಿ ದಿನಾಂಕ 21-10- 2023ರಿಂದ ನಾಲ್ಕು ತಿಂಗಳವರೆಗೂ ಎರಡು ಕ್ಯಾರೇಜ್ ಮಾರ್ಗಗಳಲ್ಲಿ 2.50 ಮೀಟರ್ ಭಾಗಶಃ ಬ್ಯಾರಿಕೇಡ್ ಹಾಕಲಾಗುವುದು. ಸಾರ್ವಜನಿಕರು ಸಹಕರಿಸಬೇಕು. ಇದರಿಂದಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದು ತಿಳಿಸಿದೆ.
ಬೆಂಗಳೂರು | ಸಂಚಾರ ದಟ್ಟಣೆಗೆ ನಮ್ಮ ಮೆಟ್ರೋ ಮದ್ದು; ನಿತ್ಯ 7 ಲಕ್ಷ ಪ್ರಯಾಣಿಕರ ಓಡಾಟ
ಈಗಾಗಲೇ ಟ್ರಾಫಿಕ್ ಜಾಮ್‌ನಿಂದಾಗಿ ಸುದ್ದಿಯಾಗುತ್ತಿರುವ ಈ ಫ್ಲೈ ಓವರ್, ಮೆಟ್ರೋ ಕಾಮಗಾರಿಯಿಂದಾಗಿ ನಾಲ್ಕು ತಿಂಗಳು ಈ ಪ್ರದೇಶದ ನಾಗರಿಕರು ಇನ್ನಷ್ಟು ಟ್ರಾಫಿಕ್ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ.
ನಮ್ಮ ಮೆಟ್ರೋದ ನೀಲಿ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.