ಕರ್ನಾಟಕದ ಸಾಂಸ್ಕೃತಿಕ ಚಳವಳಿಯಲ್ಲಿ ಬಹುಮುಖ್ಯ ಹೆಸರಾಗಿರುವ ‘ಬೆಂಗಳೂರು ಸಮುದಾಯ’ದ ನೂತನ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಬಂಡಾಯ ಸಾಹಿತಿ, ಸಾಂಸ್ಕೃತಿಕ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ.
‘ಬೆಂಗಳೂರು ಸಮುದಾಯ’ದ ಸರ್ವ ಸದಸ್ಯರ ಸಭೆಯು ಬೆಂಗಳೂರಿನಲ್ಲಿ ನಡೆಯಿತು. ಈ ಸಭೆಯಲ್ಲಿ ಸರ್ವಾನುಮತದಿಂದ ನೂತನ ಸಮಿತಿಯನ್ನು ಆಯ್ಕೆ ಮಾಡಿದೆ.
ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಚಳವಳಿಗಾರರಾದ ಡಾ.ಮಂಜುನಾಥ್ ಬಿ ಆರ್ ಅವರು ಕಾರ್ಯಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಕೇರಳ ಪ್ರವಾಸೋದ್ಯಮ; ಅಖಿಲ ಭಾರತ ಅಭಿಯಾನಕ್ಕೆ ಚಾಲನೆ
ಉಪಾಧ್ಯಕ್ಷರಾಗಿ ಎನ್ ಎಸ್ ಸನತ್ ಕುಮಾರ್, ಪದ್ಮಾ ಶಿವಮೊಗ್ಗ. ಕಾರ್ಯದರ್ಶಿಯಾಗಿ ಸಂಗಮೇಶ ಶಿವಣಗಿ ಆಯ್ಕೆ ಆಗಿದ್ದಾರೆ. ಖಜಾಂಚಿಯಾಗಿ ಫೈರೋಜ್ ಕೆ. ಜಂಟಿ ಕಾರ್ಯದರ್ಶಿಗಳಾಗಿ ನಾಗಲಕ್ಷ್ಮಿ ಎಂ ಅನಂತು ಶಾಂದ್ರೇಯ. ಸದಸ್ಯರಾಗಿ ಸಿ. ಕೆ ಗುಂಡಣ್ಣ, ಜೆ. ಸಿ ಶಶಿಧರ್, ಕಾವ್ಯ ಅಚ್ಯುತ್, ಪ್ರಣವ್ ವಿ, ಕಿಶನ್, ಎಂ. ವಿ ಸುರೇಶ್, ದಿಲೀಪ್, ರವೀಂದ್ರನಾಥ ಸಿರಿವರ, ಡಾ. ರವಿಕುಮಾರ್ ಬಾಗಿ ಆಯ್ಕೆಯಾಗಿದ್ದಾರೆ ಎಂದು ‘ಬೆಂಗಳೂರು ಸಮುದಾಯ’ದ ಕಾರ್ಯದರ್ಶಿ ಸಂಗಮೇಶ ಶಿವಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
