ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಬಳಿ ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬೆಳಗಾವಿಯಿಂದ ಬೈಲಹೊಂಗಲ ಕಡೆಗೆ ಗೂಡ್ಸ್ ವಾಹನ ಗೋಗುವ ಸಂದರ್ಭದಲ್ಲಿ, ಹಿಂಬದಿಯಿಂದ ಬಂದ ಬೈಕ್ ನೇರವಾಗಿ ಗೂಡ್ಸ್ ವಾಹನಕ್ಕೆ ಹೊಡೆದಿದ್ದು ಬೈಕ್ ಸವಾರ ರಾಘವೇಂದ್ರ ಕೋಲಕಾರ( 22) ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ರತನ್ ಟಾಟಾ | ಬಂಡವಾಳಶಾಹಿಗಳ ರತ್ನ – ಸಮಾಜವಾದಿ ಆಶಯಗಳ ದುಃಸ್ವಪ್ನ?
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
