ಒಂದು ಜೀವವಾಗಿ ಟಾಟಾ ಗೌರವಾರ್ಹರು – ಆದರೆ…!

Date:

ಭಾರತದಂತಹ ಜಾತಿಗ್ರಸ್ತ ಸಮಾಜದಲ್ಲಿ ಮೇಲ್ಜಾತಿಯ ವ್ಯಕ್ತಿಯೊಬ್ಬ ತನ್ನ Social capital ಪ್ರಭಾವದಿಂದ ಬೃಹತ್ ಬಂಡವಾಳಶಾಹಿಯಾಗಿ ಬೆಳೆಯುವುದು ನಿಜಕ್ಕೂ ದೊಡ್ಡ ಸಾಧನೆ ಅಲ್ಲವೇ ಅಲ್ಲ. ಮೇಲ್ಜಾತಿಯಾದ ಕಾರಣಕ್ಕೆ ಹಾಗೂ ಸರ್ಕಾರದ ಸಖ್ಯವಿದ್ದ ಕಾರಣಕ್ಕೆ ದೇಶದ ಸಂಪನ್ಮೂಲಗಳ ಬಳಕೆಯಲ್ಲಿ bargain ಮಾಡಿಕೊಂಡು ಕೋಟಿ ಕೋಟಿ ಸಂಪಾದಿಸಿ, ಅದರಿಂದ ಒಂದಷ್ಟು ಜನಕ್ಕೆ ಉದ್ಯೋಗ ಹಾಗೂ ದೇಶದ ಉತ್ಪಾದನಾ ರಂಗಕ್ಕೆ ವೇಗ ಕೊಡುವುದೂ ಸಹ ದೊಡ್ಡಸ್ಥಿಕೆ ಏನಲ್ಲ. ಅದರಲ್ಲೂ ಕೃಷಿಕರೇ ಹೆಚ್ಚಿದ್ದ 60-90ರ ದಶಕದಲ್ಲಿ ದೇಶದ ಬೆನ್ನೆಲುಬಾಗಿದ್ದವರು ರೈತರೇ. ಈಗಲೂ ಸಹ ಭಾರತದ ಜಿಡಿಪಿಯಲ್ಲಿ ರೈತರು, ಕೂಲಿಕಾರ್ಮಿಕರು, ಅಸಂಘಟಿತ ಕಾರ್ಮಿಕರು ಹಾಗೂ MSMEಗಳ ಪಾಲೇ ಹೆಚ್ಚು. ಈ ಕೋಟ್ಯಾಧಿಪತಿ ಕಾರ್ಪೊರೇಟಿಗರು ಸೃಷ್ಟಿಸಿರುವ ಉದ್ಯೋಗ ತೀರ ಕಡಿಮೆ. ಆದರೆ, ಗಳಿಸಿರುವ ಲಾಭ ಬೆಟ್ಟದಷ್ಟು. ಭಾರತದ ಒಂದೆರಡು ವರ್ಷದ ಬಜೆಟ್ಟಿಗೆ ಸಮನಾಗುವಷ್ಟು.

- Advertisement -

ಇಂತಹ ಬಂಡವಾಳಶಾಹಿಗಳು ಯಾವುದೇ ಕಾಲವಿರಲಿ, ಮತ್ತಷ್ಟು ಬಲಿತು ಬೆಳೆಯುತ್ತಾರೆಯೇ ಹೊರತು ಇಳಿಯುವುದಿಲ್ಲ. ಕಳೆದ ದಶಕದಲ್ಲಿ ಅಂಬಾನಿ-ಅದಾನಿಗಳು ಟಾಟಾ-ಬಿರ್ಲಾರನ್ನು replace ಮಾಡಿದರೇ ಹೊರತು ದೇಶದ ಬಡತನ, ಜಾತೀಯತೆ, ಪುರುಷಾಧಿಪತ್ಯ ಕಡಿಮೆ ಮಾಡುವಲ್ಲಿ ಇವರ ಪಾಲೇನೂ ಇಲ್ಲ. ಬದಲಾಗಿ ಅದನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಇವರ ಕಾಣಿಕೆ ಸಾಕಷ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಈ ವರದಿ ಓದಿದ್ದೀರಾ?: ʼಈ ದಿನʼ ವಿಶ್ಲೇಷಣೆ | ಹರಿಯಾಣ ಚುನಾವಣೆ ಕಾಂಗ್ರೆಸ್ ಕೈ ತಪ್ಪಿದ್ದೇಕೆ?

ಈ ಅತಿ ಶ್ರೀಮಂತರು ತಾವು ಅಕ್ರಮವಾಗಿ ಗಳಿಸಿದ (ಅವರು ಗಳಿಸಿರುವ ಎಲ್ಲವೂ ಅಕ್ರಮವೇ) ಪ್ರತಿ ನೂರು ರೂಪಾಯಿಯಲ್ಲಿ ಒಂದು ಪೈಸೆಯನ್ನು ತಮ್ಮದೇ ಹೆಸರಿನ ಚಾರಿಟಿಯಿಂದ ಸಮಾಜದ ಪ್ರಗತಿಗೆ ದೇಣಿಗೆಯಾಗಿ ನೀಡುತ್ತಾ ಉಳಿದಂತೆ ಮಿಗುತಾಯವಾದ 99.99 ರೂಪಾಯಿ ಬೆವರಿಲ್ಲದ ಲಾಭವನ್ನು ಜೇಬಿಗೆ ಹಾಕಿಕೊಂಡಿರುವುದನ್ನು ಮರೆಮಾಚಿಸುತ್ತಾರೆ. ಸಾಮಾನ್ಯ ಜನರ ಬಾಯಲ್ಲಿ ದೇವರಾಗಿ ಬಿಡುತ್ತಾರೆ. ಆದರೆ, ಪ್ರಜ್ಞಾವಂತರು ಈ ಖೆಡ್ಡಾಕೆ ಬೀಳಬಾರದು. ಏಕೆಂದರೆ, ಇಂದಿಗೂ direct tax ಕಡಿಮೆ‌ ಕಟ್ಟುವುದು ಉದ್ಯಮಿಗಳೇ. indirect tax ಹೆಚ್ಚು ಕಟ್ಟುವುದು ಬಡವರೇ.

ಒಂದು ಜೀವವಾಗಿ ಟಾಟಾ ಗೌರವಾರ್ಹರು. ಆದರೆ, ಉದ್ಯಮಿಯಾಗಿ ದುಡಿವ ಜನರ ಬೆವರಿನ ಪಾಲನ್ನು ಕಿತ್ತುಕೊಂಡು ತಮ್ಮ ಜೇಬಿಗೆ ಹಾಕಿಕೊಂಡು ಐಷಾರಾಮಿ ಜೀವನ ಸಾಗಿಸಿದ, ಶ್ರಮಿಕರನ್ನು ಶೋಷಿಸಿದ, ದೇಶದ ಬಡತನವನ್ನು ಹೆಚ್ಚಿಸಿದ ಬಂಡವಾಳಶಾಹಿ ಎಂಬುದನ್ನು ನಾವು ಮರೆಯಬಾರದು.

ಪೋಸ್ಟ್ ಹಂಚಿಕೊಳ್ಳಿ:

ವಿಕಾಸ್ ಮೌರ್ಯ
ವಿಕಾಸ್ ಮೌರ್ಯ
ವಿಜ್ಞಾನ ಶಿಕ್ಷಕ, ಬರಹಗಾರ, ಹೋರಾಟಗಾರ. ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು. ಲೇಖನಗಳ ಸಂಗ್ರಹ 'ಚಮ್ಮಟಿಕೆ', 'ನೀಲವ್ವ' ಎಂಬ ಕಥಾಸಂಕಲನ ಪ್ರಕಟ. ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು' ಎಂಬ ಅನುವಾದಿತ ಕೃತಿ ಹಾಗೂ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯನ್ನು 'ಅಂಬೇಡ್ಕರ್ ಜಗತ್ತು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ದಲಿತ ಸಂವೇದನೆಯನ್ನು ಅಕ್ಷರಮುಖಿ ನಿರ್ವಚನದ ಆಚೆಗೂ ಪಡಿಮೂಡಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...

ವಾಹನ ದಟ್ಟಣೆಯ ಸುಳಿಯಲ್ಲಿ ಮನಾಲಿ; ಪ್ರವಾಸೋದ್ಯಮದ ಒತ್ತಡಕ್ಕೆ ನಲುಗುತ್ತಿವೆಯೇ ಬೆಟ್ಟಗಳು?

ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ...