ಸಮರ್ಪಕ ವಿದ್ಯುತ್ ನೀಡುವಂತೆ ಆಗ್ರಹಿಸಿ ಸ್ವಾಭಿಮಾನಿ ರೈತ ಸಂಘದ ಕಾರ್ಯಕರ್ತರು ಬೆಳಗಾವಿ ವಲಯ ಮುಖ್ಯ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು.
“ಬೆಳಗಾವಿ ಜಿಲ್ಲೆಯಲ್ಲಿ ಸರಿಯಾಗಿ ಮಳೆ ಆಗದಿರುವುದರಿಂದ ರೈತರು ಬೆಳೆದ ಬೆಳೆಯು ಒಣಗುತ್ತಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸರಿಯಾದ ಸಮಯಕ್ಕೆ ವಿದ್ಯುತ್ ನೀಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಆದ್ಧರಿಂದ ಸರಿಯಾಗಿ ವಿದ್ಯುತ್ ನೀಡಬೇಕು” ಎಂದು ಒತ್ತಾಯಿಸಿದರು.
“ರೈತರ ಹೊಲದ ಟಿ ಸಿಗಳು ಸುಟ್ಟಾಗ ಕೂಡಲೇ ಸರಿಪಡಿಸಿ ಹೊಸ ಟಿ ಸಿಗಳನ್ನು ಹಾಕಬೇಕು ಹಾಗೂ ಫ್ಯೂಜ್ ಹೋದಾಗ ರೈತರಿಂದ ಪ್ಯೂಜ್ ತರಿಸಿಕೊಳ್ಳುತ್ತಿದ್ಧಾರೆ. ಪ್ರಶ್ನೆ ಮಾಡಿದರೆ ಇಲಾಖೆಯಲ್ಲಿ ಪ್ಯೂಜ್ ಇಲ್ಲವೆಂದು ಉತ್ತರಿಸುತ್ತಿದ್ಧು, ಇದನ್ನು ನಿಲ್ಲಿಸಿ ರೈತರಿಗೆ ಅನೂಕೂಲ ಮಾಡಿಕೊಡಬೇಕು” ಎಂದು ಸ್ವಾಭಿಮಾನಿ ರೈತ ಸಂಘಟನೆಯ ಮುಖಂಡರು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ‘ಡ್ರಗ್ಸ್ ವಿರೋಧಿ ಜಾಗೃತಿ ಮಾಸ’ ಅಭಿಯಾನಕ್ಕೆ ಚಾಲನೆ
ರೈತ ಸಂಘಟನೆಯ ಮುಖಂಡ ಶಿವನಶಿಂಘ ಮೋಕಾಶಿ ಮಾತನಾಡಿ, “ರೈತರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಅಧಿಕಾರಿಗಳೂ ರೈತರ ಬೇಡಿಕೆ ಈಡೇರಿಸುವುದಾಗಿ ಹೇಳಿದ್ಧಾರೆ. ಆದಷ್ಟು ಬೇಗನೆ ಬೇಡಿಕೆ ಈಡೇರಿಸಲಿ” ಎಂದು ಹೇಳಿದರು.
ಸಿದ್ಧಪ್ಪ ಜಳಕದ, ಈರಪ್ಪ ಗುಮ್ಮನಗೊಳ, ಪ್ರಸಾದ ಕುಲಕರ್ಣಿ, ವಿಶ್ವನಾಥ ಹಿಟ್ಟಿನ, ಯಲ್ಲಪ್ಪ ದೇವಲತ್ತಿ, ಮಂಜುನಾಥ, ಬೀರಪ್ಪ ದೇಶನೂರ, ಮಾರುತಿ ಕಮತಗಿ, ರಾಜು, ಕಲ್ಲಪ್ಪ, ವಿಶಾಲ, ನಾಗನಗೌಡ್ರ, ಚಂದ್ರಪ್ಪ, ನಾಗಪ್ಪ, ಸುರೇಶ ಸೇರಿದಂತೆ ಇತರರು ಇದ್ಧರು.