ಆಟವಾಡುತ್ತಿದ್ದ ವೇಳೆ ಮೂರು ವರ್ಷದ ಪುಟ್ಟ ಮಗು ಜೆಸಿಬಿಗೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಕಬ್ಬೂರಿನ ಹನುಮಾನ್ ನಗರದಲ್ಲಿ ಈ ದುರ್ಘಟನೆ ನಡೆದಿದ್ದು, ಮೃತಪಟ್ಟ ಮಗುವನ್ನು ಭೂಮಿಕಾ ರಮೇಶ ಕುಕನೂರ ಎಂದು ಗುರುತಿಸಲಾಗಿದೆ.
ತಾಲೂಕಿನ ಕಬ್ಬೂರ ಪಟ್ಟಣದ ಹನುಮಾನ್ ನಗರದಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ಜಲಕುಂಭ ಕಾಮಗಾರಿಯನ್ನು ರಮೇಶ ಕುಕನೂರ ಎಂಬುವರ ಮನೆ ಮುಂದುಗಡೆ ನಡೆಸಲಾಗುತ್ತಿತ್ತು. ತೋಟದ ಹತ್ತಿರ ಪೈಪ್ಲೈನ್ಗಾಗಿ ಗುಂಡಿ ತೆಗೆಯುವಾಗ ಮನೆಯ ಹತ್ತಿರ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿ ಭೂಮಿಕಾ ಜೆಸಿಬಿಗೆ ಸಿಲುಕಿದ್ದರಿಂದ ಈ ದಾರುಣ ಘಟನೆ ಸಂಭವಿಸಿದೆ. ಈ ಘಟನೆಯಿಂದಾಗಿ ಮೃತ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನು ಓದಿದ್ದೀರಾ? ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೆ ಯತ್ನ; ಕಾಮುಕ ವೈದ್ಯನ ಖಾಸಗಿ ಅಂಗ ಕತ್ತರಿಸಿದ ನರ್ಸ್
ಘಟನಾ ಸ್ಥಳಕ್ಕೆ ಚಿಕ್ಕೋಡಿಯ ಪಿಎಸ್ಐ ಬಸಗೌಡ ನೆರ್ಲಿ,ಎಎಸ್ಐ ಮಾರುತಿ ಉಗಾರೆ ಸೇರಿದಂತೆ ಸಿಬ್ಬಂದಿಗಳು ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೋಟೋ: ಸಾಂದರ್ಭಿಕ ಚಿತ್ರ
