ಬೆಂಗಳೂರು | ಕೆಐಎ ಒಂದನೇ ಟರ್ಮಿನಲ್‌ ಶೀಘ್ರ ನವೀಕರಣ

Date:

Advertisements
  • ಹದಿನೈದು ವರ್ಷಗಳಲ್ಲಿ 250 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದ ಟರ್ಮಿನಲ್ 1
  • ಎಲ್ಲ ಅಂತಾರಾಷ್ಟ್ರೀಯ ಸಂಚಾರವನ್ನು ಟರ್ಮಿನಲ್ 2 ಗೆ ಸ್ಥಳಾಂತರಿಸಿದ ನಂತರ T1ರ ನವೀಕರಣ

ಕಳೆದ 15 ವರ್ಷಗಳಿಂದ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ನವೀಕರಣಕ್ಕೆ ಸಜ್ಜಾಗಿದೆ.

“ಈ ವರ್ಷದ ಮೂರನೇ ತ್ರೈಮಾಸಿಕ (ಜುಲೈ, ಆಗಸ್ಟ್, ಸೆಪ್ಟೆಂಬರ್)ದಲ್ಲಿ ಟರ್ಮಿನಲ್ ಒಂದರ ಸಮಗ್ರ ನವೀಕರಣ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು” ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ ಲಿಮಿಟೆಡ್ (ಬಿಐಎಎಲ್) ನಿರ್ವಾಹಕ ಹೇಳಿದರು.

“ಕಳೆದ ಹದಿನೈದು ವರ್ಷಗಳಲ್ಲಿ ಈ ಐಕಾನಿಕ್ ಟರ್ಮಿನಲ್ 250 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಪ್ರಯಾಣವನ್ನು ಸಂತೋಷಕರವಾಗಿಸಿದೆ. ಬೆಳೆಯುತ್ತಿರುವ ನಗರದಲ್ಲಿ ಹೆಚ್ಚಾದ ಬೇಡಿಕೆ ಮತ್ತು ವಿಕಸನಗೊಳ್ಳುತ್ತಿರುವ ಅಗತ್ಯತೆಗಳಿಂದ ಟರ್ಮಿನಲ್ 1ರಲ್ಲಿ ಪ್ರಮುಖ ಸೌಲಭ್ಯಗಳು ಮತ್ತು ಉಪಯುಕ್ತತೆಗಳಿಗೆ ನವೀಕರಣದ ಅಗತ್ಯತೆ ಇದೆ. ಅಸ್ತಿತ್ವದಲ್ಲಿರುವ ಅನೇಕ ಸೌಲಭ್ಯಗಳು ಅಂತ್ಯವನ್ನು ತಲುಪುತ್ತಿವೆ. ಹಾಗಾಗಿ, ಪ್ರಸ್ತುತ ಟರ್ಮಿನಲ್‌ 1ರ ಆಧುನೀಕರಣದ ಅಗತ್ಯವಿದೆ” ಎಂದು ಬಿಐಎಎಲ್ ವಕ್ತಾರರು ತಿಳಿಸಿದರು.

Advertisements

“T1 ಅನ್ನು ಆರಂಭದಲ್ಲಿ ವರ್ಷಕ್ಕೆ ಸರಿಸುಮಾರು 22 ಮಿಲಿಯನ್ ಪ್ರಯಾಣಿಕರ ದೇಶೀಯ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿತ್ತು. ಆದಾಗ್ಯೂ, ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ, ಟರ್ಮಿನಲ್ ಗಣನೀಯವಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ನಿರ್ವಹಿಸುತ್ತಿತ್ತು. ವರ್ಷಕ್ಕೆ 33 ಮಿಲಿಯನ್ ಪ್ರಯಾಣಿಕರು ಟರ್ಮಿನಲ್ 1 ರಿಂದ ಸಂಚರಿಸುತ್ತಾರೆ. ಪ್ರಯಾಣಿಕರ ದಟ್ಟಣೆಯಲ್ಲಿನ ಈ ಉಲ್ಬಣವು ಟರ್ಮಿನಲ್‌ ಮೂಲಸೌಕರ್ಯದ ಮೇಲೆ ಗಣನೀಯ ಒತ್ತಡವನ್ನು ಉಂಟುಮಾಡಿದೆ” ಎಂದರು.

“ಪ್ರಸ್ತುತ ಟರ್ಮಿನಲ್‌ 1ರಲ್ಲಿ ಪ್ರತಿ ಗಂಟೆಗೆ ಸುಮಾರು 27 ದೇಶೀಯ ನಿರ್ಗಮನ ಸೇವೆ ಮತ್ತು ಪೀಕ್ ಅವರ್‌ನಲ್ಲಿ ಸರಿಸುಮಾರು 3,900 ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದೆ. ಇದನ್ನು ಪೀಕ್‌ ಅವರ್‌ನಲ್ಲಿ ಗಂಟೆಗೆ 4,500 ಪ್ರಯಾಣಿಕರಿಗೆ ಮತ್ತು ವರ್ಷಕ್ಕೆ ಸುಮಾರು 35 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಒದಗಿಸುವಂತೆ ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸುತ್ತಿದ್ದೇವೆ”ಎಂದು ವಕ್ತಾರರು ಹೇಳಿದರು.

“ಟರ್ಮಿನಲ್‌ 1ರಲ್ಲಿ ಒಟ್ಟಾರೆ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರ ಹರಿವು ಮತ್ತು ಟಚ್ ಪಾಯಿಂಟ್‌ಗಳನ್ನು ಇನ್ನಷ್ಟು ಸುಧಾರಿಸಲು, ಭದ್ರತಾ ತಪಾಸಣೆ ವಲಯಗಳು ಸೇರಿದಂತೆ ಪ್ರಮುಖ ಪ್ರದೇಶಗಳ ನವೀಕರಣ ಮತ್ತು ವಿಸ್ತರಣೆಯ ಅಗತ್ಯತೆ ಇದ್ದು, ಯೋಜನೆ ರೂಪಿಸಲಾಗಿದೆ. ಅಂದಾಜು 24 ರಿಂದ 36 ತಿಂಗಳುಗಳವರೆಗೆ ಅಂದಾಜು ಅವಧಿಯೊಂದಿಗೆ T1 ನವೀಕರಣವನ್ನು ಹಂತಹಂತವಾಗಿ ಕಾರ್ಯಗತಗೊಳಿಸಲು ನಿರೀಕ್ಷಿಸಲಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ನೇಹಿತನ ಜತೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಪ್ರಿಯಕರ

ಟರ್ಮಿನಲ್‌ 2ನಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ

ಪ್ರಯಾಣಿಕರ ಮೇಲೆ ಈ ಪರಿಣಾಮ ಬೀರುವುದನ್ನು ಕಡಿಮೆ ಮಾಡಲು, ಎಲ್ಲ ಅಂತಾರಾಷ್ಟ್ರೀಯ ಸಂಚಾರವನ್ನು ಟರ್ಮಿನಲ್ 2 ಗೆ ಸ್ಥಳಾಂತರಿಸಿದ ನಂತರ ಬಿಐಎಎಲ್ ನವೀಕರಣವನ್ನು ಪ್ರಾರಂಭಿಸುತ್ತದೆ.

“ಮುಂಬರುವ ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳು T2 ಗೆ ಸ್ಥಳಾಂತರಗೊಳ್ಳುತ್ತವೆ. T1 ಒಳಗೆ ಅಸ್ತಿತ್ವದಲ್ಲಿರುವ ಅಂತಾರಾಷ್ಟ್ರೀಯ ಪ್ರದೇಶಗಳನ್ನು ದೇಶೀಯ ಸೌಲಭ್ಯಗಳಿಗೆ ಪರಿವರ್ತಿಸುತ್ತೇವೆ. ಕೆಐಎನಲ್ಲಿ ದೇಶೀಯ ಪ್ರಯಾಣಿಕರ ದಟ್ಟಣೆಯು ವೇಗವಾಗಿ ಬೆಳೆಯುತ್ತಿರುವುದರಿಂದ ಟರ್ಮಿನಲ್ 1ರ ನವೀಕರಣ ಮುಖ್ಯವಾಗಿದೆ”ಎಂದು ವಕ್ತಾರರು ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

Download Eedina App Android / iOS

X