ಬೀದರ್ |ವಚನ ಸಾಹಿತ್ಯದಲ್ಲಿ ಬಹುಮುಖಿ ಚಿಂತನೆಗಳು ಅಡಕವಾಗಿವೆ : ಡಾ. ಭೀಮಾಶಂಕರ ಬಿರಾದಾರ

Date:

  • ವಚನ ಸಾಹಿತ್ಯದಲ್ಲಿ ಬಹುಸಾಂಸ್ಕೃತಿಕತೆ ಅಡಕವಾಗಿದೆ
  • ಜಾತಿ, ಪಂಥ, ವರ್ಗಗಳನ್ನು ಮೀರಿ ನಿಲ್ಲುವ ವಚನ ಸಾಹಿತ್ಯ

ವಚನ ಸಾಹಿತ್ಯದಲ್ಲಿ ಲೋಕಮೀಮಾಂಸೆಯ ನೆಲೆಗಳು ಬಹಳ ತೀವ್ರವಾಗಿವೆ. ಅವು ಪ್ರಭುತ್ವ ಮತ್ತು ಸಾಮಾಜಿಕ ರಚನೆಗಳ ಕುರಿತು ಸಾಂಸ್ಕೃತಿಕ ನೆಲೆಯಲ್ಲಿ ನಿರ್ವಚಿಸಿವೆ ಎಂದು ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜು ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಹೇಳಿದರು.

ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಗಳಂಗಳಪ್ಪ ಪಾಟೀಲ ಬಸವಾದಿ ಶರಣ ಸಾಹಿತ್ಯ ಕೇಂದ್ರ ಹಾಗೂ ಎಸ್ಎಸ್‌ಕೆಬಿ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ‘ವಚನಗಳ ಸಂಸ್ಕೃತಿಕ ಆಯಾಮ’ ಕುರಿತ ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದರು.

“ವಚನ ಸಾಹಿತ್ಯದಲ್ಲಿ, ಬಹುಸಾಂಸ್ಕೃತಿಕತೆ, ಬಹುಧ್ವನಿತ್ವ ಮತ್ತು ಬಹುಮುಖಿ ಚಿಂತನೆಗಳು ಅಡಕವಾಗಿವೆ. 12ನೇ ಶತನಮಾನದಲ್ಲಿ ಸಬಾಲ್ಟರ್ನ್ ಸಂಸ್ಕೃತಿ, ಮಹಿಳಾ ಸಂಸ್ಕೃತಿ, ಶ್ರಮಿಕ ಸಂಸ್ಕೃತಿ ಸೇರಿ ಕನ್ನಡ ಜಗತ್ತಿಗೆ ಒಂದು ತಾತ್ವಿಕ ಬೌದ್ಧಿಕವಾದ ವಿನ್ಯಾಸವೊಂದನ್ನು ರೂಪಿದ್ದವು” ಎಂದು ಹೇಳಿದರು.

“ಬಸವಣ್ಣ ಅವರ ಸಮಾಜವಾದ, ಅಲ್ಲಮನ ಬಯಲ ಸಿದ್ಧಾಂತ, ಅಕ್ಕನ ಶೋಧಗುಣ ಭಾರತೀಯ ದಾರ್ಶನಿಕ ಪರಪಂರೆಯ ಬೆಳಕಿನ ಬೀಜಗಳಾಗಿವೆ” ಎಂದು ಅಭಿಪ್ರಾಯಪಟ್ಟರು.

ಸಮಾರಂಭ ಉದ್ಘಾಟಿಸಿದ ಗುಲಬರ್ಗಾ ವಿವಿಯ ಡಾ. ಗಳಂಗಳಪ್ಪ ಪಾಟೀಲ ಬಸವಾದಿ ಶರಣ ಸಾಹಿತ್ಯ ಕೇಂದ್ರದ ನಿರ್ದೇಶಕ ಡಾ. ಎಸ್ ಎಂ ಹನಗೋಡಿಮಠ ಮಾತನಾಡಿ, “ವಚನಗಳು ಕನ್ನಡದಲ್ಲಿ ಬಹುದೊಡ್ಡ ಜ್ಞಾನ ಪರಂಪರೆ ಕಟ್ಟಿಕೊಟ್ಟಿವೆ. ಜಗತ್ತನ್ನು ಆಳುವುದು ಜ್ಞಾನ. ಆದರೆ, ವಚನಕಾರರು ಆಳುವುದಕ್ಕಾಗಿ ವಚನ ಬರೆದಿಲ್ಲ. ಆತ್ಮಸಂತುಷ್ಠಿಗಾಗಿ ವಚನಗಳನ್ನು ಕಟ್ಟಿದ್ದಾರೆ” ಎಂದರು.

“ಸಮಾಜದ ಬದಲಾವಣೆಗಾಗಿ ಶರಣರು ಬರೆದರು. ತಮ್ಮ ಸುತ್ತಲಿನ ಸಂಗತಿಗಳನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಶರಣರು ಗ್ರಹಿಸಿದರು. ನಮಗೆ ಕಾಲ ಪ್ರಜ್ಞೆ, ಸಮಾಜ ಪ್ರಜ್ಞೆ ಅಗತ್ಯ. ವಿದ್ಯಾರ್ಥಿಗಳು ಜ್ಞಾನದಾಹಿಗಳಾಗಬೇಕು” ಎಂದು ಮನವರಿಕೆ ಮಾಡಿದರು.

“ಮನೋರಂಜನೆಗೆ ಒತ್ತುಕೊಡಬೇಡಿ. ಅದು ಕಾಲವನ್ನು ಹರಣ ಮಾಡುತ್ತದೆ. ಸರಿಯಾದ ಕ್ರಮದಲ್ಲಿ ಸಮಾಜಿಕ ಜಾಲತಾಣಗಳ ಸದ್ಬಳಕೆ ಮಾಡಿಕೊಳ್ಳಿ” ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಬಸವರಾಜ ಎವಲೆ ಮಾತನಾಡಿ, “ವಿಶ್ವಕ್ಕೆ ವಚನ ಸಾಹಿತ್ಯ ಕೊಟ್ಟ ಬಸವಕಲ್ಯಾಣ ಶ್ರೇಷ್ಠ ಸ್ಥಳವಾಗಿದೆ. ಶರಣರಿಂದ ರಚನೆಯಾದ ವಚನಗಳು ಜಾತಿ ಪಂಥ, ವರ್ಗವನ್ನು ವಿರೋಧಿಸುವ ನೆಲೆಯಲ್ಲಿ ನಿಲ್ಲುತ್ತವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಕೊಳಗೇರಿ ಪ್ರದೇಶಗಳಲ್ಲಿ ಬೀದಿ ಸಭೆಗಳ ಮೂಲಕ ಮತದಾನ ಜಾಗೃತಿಗೆ ನಿರ್ಣಯ

“ವಚನಗಳನ್ನು ಆಳವಾಗಿ ಓದಿದರೆ ಬದುಕನ್ನು ಬದಲಾಯಿಸುತ್ತವೆ. ಜೀವನದ ಯಶಸ್ಸಿಗೆ ಕಾರಣವಾಗುತ್ತದೆ. ವಚನಗಳಿಂದ ಜ್ಞಾನಾರ್ಜನೆಯ ಜೊತೆಗೆ ಸಮಾಜಿಕ ಚಿಂತನೆ ಸಾಧ್ಯವಾಗುತ್ತದೆ. ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಬಹುದೊಡ್ಡ ಸಂಸ್ಕೃತಿ ಮತ್ತು ಸಿದ್ಧಾಂತಗಳನ್ನು ಕಟ್ಟಿಕೊಟ್ಟಿದ್ದಾರೆ” ಎಂದು ತಿಳಿಸಿದರು.

ಪ್ರೊ. ಆರ್ ಡಿ ಬಾಲಕಿಲೆ, ಪ್ರೊ. ಲಕ್ಷ್ಮಿಬಾಯಿ ಭಂಕೂರ, ಸೂರ್ಯಕಾಂತ ನಾಸೆ, ನವಿನ ಶ್ರೀವಾತ್ಸವ, ಶಿವಕುಮಾರ ಕೊಳ್ಳೆ, ನಾಗಪ್ಪಾ ನಿಣ್ಣೆ, ರತ್ನಸಾಗರ ರಗಟೆ, ಸಂಗೀತಾ ಪೂಜಾರಿ, ಭಾರತಿಮಠ, ವೈಶಾಲಿ ಹೊಶೆಟ್ಟೆ, ಶಿವಾನಂದ ಬಿರಾದಾರ, ಆನಂದ ಇದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | 20 ದಿನದ ಹಸುಗೂಸು ಮಾರಾಟ; ಮತ್ತಿಬ್ಬರ ಬಂಧನ

20 ದಿನದ ಹಸುಗೂಸನ್ನು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು...

ಶಿವಮೊಗ್ಗ | ಸಿಡಿಲು ಬಡಿದು ಸಹೋದರರ ಸಾವು

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಹೋದರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ...

ಉತ್ತರ ಕನ್ನಡ | ಅವೈಜ್ಞಾನಿಕ ಮೀನುಗಾರಿಕೆ; ಸಮುದ್ರದಲ್ಲಿ ಮೀನು ಕ್ಷಾಮ

ಬರ ಕೇವಲ ರೈತರನ್ನು ಕಾಡುತ್ತಿಲ್ಲ, ಸಮುದ್ರ ಮೀನುಗಾರಿಕೆಗೂ ಈ ಬಾರಿ ಬರ...

‘ಬುಡಕಟ್ಟು ಸಂಶೋಧನಾ ಸಂಸ್ಥೆ’ಯ ನಿರ್ದೇಶಕನ ಬಿಡುಗಡೆ ಒತ್ತಾಯ

ʼಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆʼಯನ್ನು ಅಮಾಯಕ ಆದಿವಾಸಿಗಳಿಗಾಗಿ ಉಳಿಸಬೇಕು. ಆದರೆ,...