ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಗಿದರೆ ಜ್ಞಾನ ಹಾಗೂ ಗೌರವಿತ ಜೀವನ ಸಾಗಿಸಬಹುದು ಎಂದು ಸಂತಪೂರ ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿ ಬಾಲಾಜಿ ಪಾಟೀಲ ಹೇಳಿದರು.
ಔರಾದ್ ತಾಲೂಕಿನ ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸನ್ಮಾನಿಸಿ ಅವರು ಮಾತನಾಡಿ, “ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಗಬೇಕು. ವಿದ್ಯಾರ್ಥಿಗಳು ಗುರುಗಳಿಗೆ ವಿನಯ ಭಕ್ತಿಯಿಂದ ಗೌರವದಿಂದ ಕಾಣಬೇಕು” ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಮಾತನಾಡಿ, “ಪ್ರತಿಯೊಬ್ಬರ ಜೀವನದಲ್ಲಿ ತಾಯಿ ಮತ್ತು ಗುರುವಿನ ಅವಶ್ಯಕತೆಯಿಂದ ಪೂರ್ಣ ಜೀವನವಾಗುತ್ತದೆ. ಶಿಕ್ಷಕರನ್ನು ಭಕ್ತಿಯಿಂದ ಅನುಸರಿಸಿ,ಪಾಠ ಬೋಧನೆಗಳನ್ನು ಭಕ್ತಿಯಿಂದ ಆಲಿಸಿ ವಿದ್ಯಾರ್ಥಿಗಳು ಪ್ರಗತಿ ಹೊಂದಬಹುದು” ಎಂದರು.
ಇದನ್ನೂ ಓದಿ : ಬಸವಕಲ್ಯಾಣ | ಅರಿವಿನ ನೋಟ ನೀಡುವ ಅಧ್ಯಾಪಕ
ಸಂತಪೂರ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಕಿರಣಕುಮಾರ ಬಿರಾದಾರ, ಉಪನ್ಯಾಸಕರಾದ ಶಿವಪುತ್ರ ಧರಣಿ, ಮಹಾಂತೇಶ್ ಪಾಂಚಳ, ಸುಧೀರ ಆಲೂರೇ, ಚಂದ್ರರೆಡ್ಡಿ, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ವನದೇವಿ ಎಕ್ಕಳೆ, ಅಶ್ವಿನಿ ಹಿಂದೊಡ್ಡಿ, ಪ್ರಿಯಾಂಕಾ ಗೊನ್ನಳ್ಳಿಕರ್, ಶಿಲಾದಾರ ಕುಚ್ಚಬಾಳ, ರಾಜಕುಮಾರ ಹಳ್ಳಿಕರ, ಶೃತಿ ಶಂಕ್ರಪ್ಪ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.





