ಬಸವಕಲ್ಯಾಣ | ಅರಿವಿನ ನೋಟ ನೀಡುವ ಅಧ್ಯಾಪಕ

Date:

ಮನುಷ್ಯನಲ್ಲಿ ಸಹಜವಾಗಿರುವ ಕಲಿಕೆಗಾಗಿ ಅಧ್ಯಾಪಕನಿಲ್ಲ. ಸಮಾಜವನ್ನು ಗ್ರಹಿಸಲು, ರಾಜಕಾರಣ ಅರ್ಥಮಾಡಿಕೊಳ್ಳಲು, ಸಾಂಸ್ಕೃತಿಕ ಅರಿವು ಮೂಡಿಸಲು ಅಧ್ಯಾಪಕ ಅಗತ್ಯ ಎಂದು ಶ್ರೀ ಬಸವೇಶ್ವರ ಪದವಿ ಕಾಲೇಜು ಅಧ್ಯಾಪಕ ಡಾ.ಭೀಮಾಶಂಕರ ಬಿರಾದಾರ ಹೇಳಿದರು.

- Advertisement -

ಬಸವಕಲ್ಯಾಣದ ಎಸ್ಎಸ್ ಕೆಬಿ ಕಾಲೇಜಿನಲ್ಲಿ ಶನಿವಾರ ಐಕ್ಯುಎಸಿ, ಎನ್ನೆಸ್ಸೆಸ್ ಮತ್ತು ಎನ್ ಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ಶಿಕ್ಷಕರಾದವರು ಲೋಕದ ವ್ಯವಹಾರಗಳು, ಪ್ರಕೃತಿಯ ಸಂಗತಿಗಳನ್ನು ಗ್ರಹಿಸುವ ಅರಿವಿನ ನೋಟ ನೀಡುತ್ತಾನೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ...

ತಂತ್ರಜ್ಞಾನ ನಮ್ಮ ಕೈಸೇರುವ, ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗುವ ದಶಕಗಳ ಹಿಂದೆಯೇ, ಅಂದಿನ ಕಾಲದ ಕಲಾವಿದರು ತಮ್ಮ ಗೀತೆಗಳ ಸಾಲುಗಳ ಮೂಲಕ ಮುಂದಿನ ಜಗತ್ತು ಹೀಗೇ ಇದ್ದೀತೆಂದು ಖಚಿತವಾಗಿ ಹೇಳಿದ್ದರು. ಮಾನವಕುಲವು ಮುಂದೆ...

ಕೊಪ್ಪಳ | ದಸರಾ ಪುರಾಣ ಪ್ರವಚನಕ್ಕೆ ಮುಸ್ಲಿಂ ಕಲಾವಿದನ...

ಧರ್ಮಗಳು ಬೇರೆ ಬೇರೆಯಾದರೂ ಕಲೆ, ಸಂಸ್ಕೃತಿ ಮತ್ತು ಮಾನವೀಯತೆಯ ಮುಂದೆ ಧರ್ಮದ ಗಡಿಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮ ಸಾಕ್ಷಿ. ಇಲ್ಲಿನ ಕಂಪ್ಲಿಯಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ನಡೆಯುವ ದಸರಾ ಪುರಾಣ...

“ಒಂದು ವರ್ಗ ಕೋಣೆಯಲ್ಲಿ ಪ್ರಜಾಪ್ರಭುತ್ವದ ವಾತಾವರಣವಿದ್ದರೆ ಅಲ್ಲಿಂದ ಹೊರಬಂದ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ, ಸಮಾನತೆಯ ಪರಿಕಲ್ಪನೆ ಗಟ್ಟಿಗೊಂಡಿರುತ್ತದೆ. ಒಂದು ಸಂಶೋಧನೆಯ ಹಿಂದಿನ ಶ್ರಮ, ಒಂದು ಸಿದ್ಧಾಂತದ ತಾತ್ವಿಕತೆ ಮನವರಿಕೆ ಮಾಡುವ ಹೊಣೆಗಾರಿಕೆ ಅಧ್ಯಾಪಕರ ಮೇಲಿದೆ. ಬುದ್ಧ, ಬಸವ, ಅಕ್ಕ, ಅಲ್ಲಮ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಜೆಪಿ , ಪೇರಿಯಾರ್, ಕುವೆಂಪು, ಕಾರಂತ ಮೊದಲಾದವರು ನಮ್ಮಲ್ಲಿ ಹಲವು ಬಗೆಯ ತಿಳುವಳಿಕೆ ಮತ್ತು ಪ್ರಜ್ಞೆ ಮೂಡಿಸಿದ ಚಿಂತಕರು. ಅವರೆಲ್ಲರೂ ನಮ್ಮ ದೇಶದ ಸಾಂಸ್ಕೃತಿಕ ಗುರುಗಳಾಗಿದ್ದಾರೆ” ಎಂದರು.

“ತರಗತಿಗಳಲ್ಲಿ ಸಂವಾದ ಮತ್ತು ಚರ್ಚೆಗಳು ನಡೆದರೆ ಮಾತ್ರ ಆ ಕಾಲೇಜುಗಳು ಬೌದ್ಧಿಕವಾಗಿ ಬೆಳೆಯುತ್ತದೆ. ವೈಚಾರಿಕ, ಸೃಜನಾತ್ಮಕವಾಗಿ ಹೊರ ಜಗತ್ತಿನಲ್ಲಿ ಅಸ್ಮಿತೆ ಕಂಡುಕೊಳ್ಳಲು ಸಾಧ್ಯ. ಪಠ್ಯದ ಜೊತೆಗೆ ಲೋಕವ್ಯವಹಾರದ ಬಗೆಗೆ, ಹೊಸ ಆವಿಷ್ಕಾರ, ಸಂಶೋಧನೆಗಳ ಬಗೆಗೆ ವಿದ್ಯಾರ್ಥಿಗಳು ಮಾತನಾಡುವ ಪರಿಸರ ಸೃಷ್ಟಿಸುವ ಜವಾಬ್ದಾರಿ ಮೇಷ್ಟ್ರಗಳ ಮೇಲಿದೆ. ಅದಾಗಲೇ ಅಂಥ ಕ್ಯಾಂಪಸ್ಸು ಅರಿವಿನ ಕೇಂದ್ರವಾಗಿ ರೂಪುಗೊಳ್ಳುತ್ತವೆ” ಎಂದರು.

WhatsApp Image 2026 09 05 at 5.38.35 PM 1 1

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಶಿವಕುಮಾರ್ ಪಾಟೀಲ್ ಮಾತನಾಡಿ, “ನಮ್ಮ ದೇಶ ವೈವಿಧ್ಯತೆಯಿಂದ ಕೂಡಿದೆ. ಹಲವು ಪಂಥಗಳು, ಹಲವು ತತ್ವಗಳು ಇರುವ ಈ ದೇಶ ಗುರು ಪರಂಪರೆಗೆ ಪ್ರಧಾನವಾಗಿದೆ. ಎಲ್ಲ ಸಂಗತಿಗಳನ್ನೂ ವಿಶ್ಲೇಷಣೆ ಮಾಡಿ ಒಮ್ಮತಕ್ಕೆ ಬರಲಾಗುತ್ತದೆ. ಈ ದೇಶದ ಸೌಂದರ್ಯ ಇರುವುದೇ ವೈವಿಧ್ಯತೆಯಲ್ಲಿ” ಎಂದರು.

ಭಾರತದಲ್ಲಿ ಆಕ್ರಮಣಶೀಲತೆಗಿಂತ ಶಾಂತಿ ಮತ್ತು ಸೌಹಾರ್ದತೆಗೆ ಪ್ರಾಮುಖ್ಯತೆ ಇದೆ. ಇದರ ಮೂಲ ಇಲ್ಲಿನ ಗುರು ಪರಂಪರೆಯಾಗಿದೆ. ಇಲ್ಲಿ ಯಾವ ಗುರುಗಳು ಕ್ರೌರ್ಯವನ್ನು ಪ್ರಚೋದಿಸಿಲ್ಲ. ಸಹನೆ, ಸೌಹಾರ್ದತೆ ಮತ್ತು ಸಹಬಾಳ್ವೆಗೆ ಮಾನ್ಯತೆ ಮಾಡಿದ್ದಾರೆ. ಪಾಠದೊಂದಿಗೆ ಮೌಲ್ಯವನ್ನು ತಿಳಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದರು.

ಹಕ್ಕು ನೀಡಿದ ನಮ್ಮ ಸಂವಿಧಾನ ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿದೆ. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಸ್ವತಂತ್ರ ಪೂರ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಕೆಲಸಗಳನ್ನು ಮಾಡಿದ್ದಾರೆ. ಒಂದು ಕುಟುಂಬದಲ್ಲಿ ತಾಯಿಯೇ ಮೊದಲ ಗುರುವಾಗುತ್ತಾಳೆ. ಅಧ್ಯಾಪಕ ನಂತರದ ಗುರುವಾಗುತ್ತಾನೆ ಎಂದು ಹೇಳಿದರು.

ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುರೇಶ್ ಎಚ್. ಆರ್. ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ತಾಪಮಾನ ಏರಿಕೆಗೆ ಬದುಕಿನ ಬೆಲೆ ತೆರುವವರು ಯಾರು?

ಪ್ರೊ. ವಿಠೋಬಾ ಡೊಣ್ಣೇಗೌಡರು, ಸೂರ್ಯಕಾಂತ ನಾಸೆ, ಮಹಾದೇವ ದೇಗಾಂವ, ನಾಗರಾಜ್ ನಿಂಬಾಳ್ಕರ್, ಭಾರತಿ ಮಠ, ವೈಶಾಲಿ, ಸತೀಶ್ ರಾಥೋಡ್, ಅಶ್ವಿನಿ ಮೊದಲಾದವರು ಇದ್ದರು. ಐಕ್ಯೂಎಸಿ ಸಂಯೋಜಕ ಡಾ. ವಿಜಯಕುಮಾರ ತಳವಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಭೀಮಶಂಕರ ಪೂಜಾರಿ ನಿರೂಪಿಸಿದರು. ಕಲ್ಯಾಣಪ್ಪ ನಾವದಗಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಹಿಂಪಡೆದ ಸಿಜೆಪಿ ನಾಯಕರು

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ...

ಜೆಎನ್‌ಯು ವಿದ್ಯಾರ್ಥಿಗಳ ಹೋರಾಟಕ್ಕೆ ಜಯ: ಅಮಾನತು ಆದೇಶ ವಾಪಸ್, 17 ದಿನಗಳ ಪ್ರತಿಭಟನೆ ಅಂತ್ಯ

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ (ಜೆಎನ್‌ಯುಎಸ್‌ಯು) ಪದಾಧಿಕಾರಿಗಳ ಮೇಲಿದ್ದ...