ಬೀದರ್‌ | ಯುವ ಸಮೂಹ ದುಶ್ಚಟಗಳಿಂದ ಹೊರಬನ್ನಿ : ನಿಜಗುಣಾನಂದ ಸ್ವಾಮೀಜಿ

Date:

ಯುವ ಸಮೂಹ ದುಶ್ಚಟಗಳಿಂದ ಹೊರಬಂದು ಬಸವಾದಿ ಶರಣರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದು ಬೈಲೂರು-ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರು ನುಡಿದರು.

- Advertisement -

ಬೀದರ ಬಸವ ಕೇಂದ್ರ ಬೆಳ್ಳಿ ಮಹೋತ್ಸವ ಪ್ರಯುಕ್ತ ಬೀದರ್‌ ತಾಲೂಕಿನ ಚಿಮಕೋಡ ಗ್ರಾಮದಲ್ಲಿ ಬಸವ ಸಂದೇಶ ಯಾತ್ರೆಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ʼಜೀವನದಲ್ಲಿ ಅಂತರಂಗ ಬಹಿರಂಗ ಒಂದಾಗಬೇಕು. ಶ್ರೀಮಂತಿಕೆ ಮುಖ್ಯವಲ್ಲ ಮನುಷ್ಯತ್ವ ಪ್ರಮುಖವಾಗಿದೆ. ಯುವಕರು ವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆʼ ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಸರಾಯಿ, ತಂಬಾಕು ಪ್ರಾಣಿಗಳು ಮೂಸುವುದಿಲ್ಲ. ಆದರೆ ಮನುಷ್ಯರಾದ ನಾವು ಅವುಗಳಿಗಾಗಿ ತತ್ತರಿಸಿದ್ದೇವೆ. ವ್ಯಸನದಿಂದ ವೈಯಕ್ತಿಕ ಬದುಕು ಜೊತೆಗೆ ಸಮಾಜ ಹಾಳಾಗುತ್ತದೆ. ನಮ್ಮೆಲ್ಲರ ಬದುಕು ಹಸನಾಗಬೇಕಾದರೆ ಬಸವಣ್ಣನವರ ತತ್ವಸಿದ್ಧಾಂತ ಮೈಗೂಡಿಸಿಕೊಳ್ಳಬೇಕು. ಉತ್ತಮ ಸಂಸ್ಕಾರದಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ, ಭಾವೈಕ್ಯತೆ ನೆಲೆಗೊಳ್ಳುತ್ತದೆʼ ಎಂದರು.

ಜಿಲ್ಲಾ ಯುವ ಬಸವ ಕೇಂದ್ರ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಮಾತನಾಡಿ, ʼಬಸವಣ್ಣನವರು ಎಲ್ಲ ಕಾಲಕ್ಕೂ ಬೇಕಾಗಿದವರು, ಅವರ ತತ್ವಸಿದ್ಧಾಂತ ಕಳೆದ 25 ವರ್ಷಗಳಿಂದ ಬಸವ ಕೇಂದ್ರ ಸಂಸ್ಥೆ ಧಾರ್ಮಿಕ, ಸಾಹಿತ್ಯಿಕ, ವೈಚಾರಿಕ, ಸಾಂಸ್ಕೃತಿಕ ಚಟುವಟಿಕೆಗಳ ಮುಖಾಂತರ ಇಡೀ ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದೆ. ಇಂದು 25 ವಸಂತಗಳು ಪೂರೈಸಿರುವ ಹಿನ್ನಲೆಯಲ್ಲಿ ʼಭವ್ಯ ಭಾರತದ ಬಸವಣ್ಣʼ ಪ್ರವಚನ ಹಾಗೂ ಹಳ್ಳಿಗಳಲ್ಲಿ ʼಬಸವ ಸಂದೇಶ ಯಾತ್ರೆʼ ಕೈಗೊಂಡು ಕೊನೆಗೆ ಮೂರು ದಿವಸಗಳ ಕಾಲ ʼಶರಣ ಸಂಸ್ಕೃತಿ ಉತ್ಸವʼ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ನುಡಿದರು.

Chimkod Basavsandes Yatre 01

ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ ಮುಖಾಂತರ ಪೂಜ್ಯರನ್ನು ಭವ್ಯ ಮೆರವಣಿಗೆ ಮುಖಾಂತರ ಸ್ವಾಗತಿಸಲಾಯಿತು.

ಇದನ್ನೂ ಓದಿ : ತಮಿಳುನಾಡು ಚುನಾವಣೆ | ತನ್ನ ಕಾರು ಚಾಲಕನ ಮಗನನ್ನು ಸ್ಪರ್ಧೆಗಿಳಿಸಿದ ವಿಜಯ್‌ : ಭಾವುಕ ಕ್ಷಣಕ್ಕೆ ಅಪ್ಪ ಮಗ ಸಾಕ್ಷಿ 

ಕಾರ್ಯಕ್ರಮದಲ್ಲಿ ತಾಲ್ಲೂಕು ಬಸವ ಕೇಂದ್ರದ ಅಧ್ಯಕ್ಷ ಸೋಮನಾಥ ಕಂದಗೂಳೆ ಸೇರಿದಂತೆ ಪ್ರಮುಖರಾದ ಶ್ರೀಕಾಂತ ಬಿರಾದಾರ, ನಾಗರಾಜ ಕರಪೂರ, ವೀರಶೆಟ್ಟಿ ಪಾಟೀಲ ಮರಖಲ, ವೆಂಕಟರಾವ ಬಿರಾದಾರ, ಆನಂದ ವಿಜಯಕುಮಾರ, ನಾಗಶೆಟ್ಟಿ ಬಿರಾದಾರ, ಸಂಜೀವ ಸಾಗರ, ರಘುನಾಥ್ ಬಿರಾದಾರ, ರವಿ ಚಿನ್ನಪ್ಪನ್ನೊರ,, ನಾಗಶೆಟ್ಟಿ ಸಿದ್ರಾಮಪ್ಪ, ಸೂರ್ಯಕಾಂತ ಪಾಟೀಲ, ಶಿವಕುಮಾರ ಟೊಳ್ಳೆ, ಮಲ್ಲಶೆಟ್ಟಿ ಢೆಂಪೆ, ನಾಗಶೆಟ್ಟಿ ಪೋಲೀಸ್ ಪಾಟೀಲ, ಚಂದ್ರಕಾಂತ ಚಿನ್ನಪ್ಪನ್ನೊರ, ಶಾಂತಕುಮಾರ ಅಬ್ಬೆಂದೆ, ಮಾರುತಿ ಶಿವಪುರೆ, ಮಲ್ಲಿಕಾರ್ಜುನ, ಮಾರುತಿ ಟೊಲ್ಲೆ ಉಪಸ್ಥಿತರಿದ್ದರು. ಪರಮೇಶ್ವರ ಢೆಂಪೆ, ನಿರೂಪಿಸಿದರು. ಉಮೇಶ ಪಾಟೀಲ ಸ್ವಾಗತಿಸಿದರು. ವಿಜಯಕುಮಾರ ಚೆನ್ನಪ್ಪನ್ನೋರ ವಂದಿಸಿದರು. ಸಂಜೀವಕುಮಾರ ಗಡ್ಡೆ ದಾಸೋಹಗೈದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ನೀರು, ಆರೋಗ್ಯ ಸೇವೆ ಪರಿಶೀಲನೆ; ಕಾರ್ಮಿಕರ ಸಮಸ್ಯೆ ಆಲಿಸಿದ ಸಿಇಒ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ಅಭಿವೃದ್ಧಿ...

ಭಾಲ್ಕಿ | ವಿಬಿ-ಜಿ ರಾಮ್ ಜಿ ಕಾರ್ಮಿಕರಿಗೆ ಜಾಗೃತಿ ಕಾರ್ಯಕ್ರಮ

ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ವಿಬಿ-ಜಿ ರಾಮ್ ಜಿ ಯೋಜನೆಯ ಸದುಪಯೋಗ...

ಬಸವಕಲ್ಯಾಣ | ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಬಸವತತ್ವವೇ ದಾರಿ: ಸಚಿವ ಈಶ್ವರ ಖಂಡ್ರೆ

ಜಗತ್ತಿನ ಎಲ್ಲ ಸಮಸ್ಯೆಗಳಿಗೆ ವಚನಗಳು ದಿವ್ಯೌಷಧಿಗಳಾಗಿವೆ. ಸಮ ಸಮಾಜ ನಿರ್ಮಾಣಕ್ಕಾಗಿ ಶರಣರು...

ಬೀದರ್ ದಕ್ಷಿಣ ಕ್ಷೇತ್ರದಲ್ಲಿ 1 ಜಿ.ಪಂ. ಕ್ಷೇತ್ರವನ್ನಾದರೂ ಎಸ್‌ಸಿಗೆ ಮೀಸಲಿಡಿ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಜಿಲ್ಲಾ ಪಂಚಾಯಿತಿ...