ಬಾಗೇಪಲ್ಲಿ:-ಮಹಿಳಾ ಅರ್ಥಿಕ ಸಬಲೀಕರಣಕ್ಕೆ ಹೊಲಿಗೆ ಯಂತ್ರ ತರಬೇತಿ ಸ್ವಾವಲಂಬಿ ಬದುಕು ಕಟ್ಟಿಕೊಡಲಿದೆ ಎಂದು ಬಾಗೇಪಲ್ಲಿ ಆಶಾಲಯ ಟ್ರಸ್ಟ್ ಅದ್ಯಕ್ಷೆ ಶಾರ್ಲೆನ್ ಹೇಳಿದರು.
ಅವರು ಪಟ್ಟಣದ ಪಾತಬಾಗೇಪಲ್ಲಿ ರಸ್ತೆಯಲ್ಲಿರುವ ತಮ್ಮ ಆಶಾಲಯ ಟ್ರಸ್ಟ್ ವತಿಯಿಂದ 2025-26 ನೇ ಸಾಲಿನ ಸುಮಾರು 75 ಮಹಿಳೆಯರಿಗೆ ಮೂರು ತಿಂಗಳು ಕಾಲ ತರಬೇತಿ ನೀಡಿ ಉಚಿತ ಹೊಲಿಗೆಯ ಯಂತ್ರಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಹೊಲಿಗೆ ಯಂತ್ರ ಪಡೆದ ಫಲಾನುಭವಿಗಳಿಗೆ ಶುಭ ಹಾರೈಸಿದ ಮಾತನಾಡಿ ಮಹಿಳೆಯರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಇದು ಪೂರಕವಾಗಲಿದೆ ಎಂದರು. ಮನೆಯಲ್ಲೇ ಇದ್ದುಕೊಂಡು ಹೊಲಿಗೆ ಕೆಲಸ ಮಾಡುವ ಮೂಲಕ ಕುಟುಂಬ ನಿರ್ವಹಣೆಗೆ ನೆರವಾಗಬಹುದು ಹಾಗೂ ಗೌರವಯುತ ಸ್ವಾವಲಂಬಿ ಜೀವನ ನಡೆಸಬಹುದು. ಈ ಉಪಕ್ರಮವು ಹೆಚ್ಚಿನ ಮಹಿಳೆಯರಿಗೆ ಸ್ಫೂರ್ತಿಯಾಗಲಿ ಎಂದು ಅವರು ಹಾರೈಸಿದರು.
ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತ್ಯನಾರಾಯಣ ರೆಡ್ಡಿ ಮಾತನಾಡಿ ಮಹಿಳೆಯರ ಸ್ವಾವಲಂಬಿ ಜೀವನ ನಿರ್ವಹಣೆಗೆ ಮಹಿಳಾ ಸಬಲೀಕರಣಗಳದಂತಹ ಕಾರ್ಯಕ್ರಮಗಳು ಅವಶ್ಯವಾಗಿದ್ದು ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂತಹ ಕೌಶಲ್ಯ ತರಬೇತಿಗಳು ಮುಖ್ಯ ಪಾತ್ರವಹಿಸುತ್ತವೆ. ಆದ್ದರಿಂದ ಇಂತಹ ಅವಕಾಶಗಳನ್ನು ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಉಪಯೋಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ, ಉತ್ತಮ ಜೀವನ ಶೈಲಿ, ಹಾಗೂ ಎಲ್ಲರ ಆರೋಗ್ಯ ಗುಟ್ಟು ಪ್ರತಿ ದಿನ ಯೋಗ ಹಾಗೂ ಪ್ರಾಣಾಯಾಮ ಮಾಡಿ ಆರೋಗ್ಯ ಉತ್ತಮ ಪಡಿಸಿಕೊಳ್ಳಲಬಹುದು ಎಂದು ಹೇಳಿದರು.
ಪೋಲೀಸ್ ಇನ್ಸ್‌ಪೆಕ್ಟರ್ ಅಜಯ್ ಸಾರಥಿ ಮಾತನಾಡಿ ಬಾಗೇಪಲ್ಲಿ ಪಟ್ಟಣದ ಅಶಾಲಯ ಟ್ರಸ್ಟ್ ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ಹೇಳಿ ಕೊಡುವ ಜೊತೆಗೆ ಕಂಪ್ಯೂಟರ್ ಶಿಕ್ಷಣವನ್ನೂ ನೀಡುತ್ತಿದೆ. ಈ ಸಂಸ್ಥೆ ಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಬದುಕು ನಿರ್ವಹಣೆ ಕಷ್ಟವಿದೆ. ಮಹಿಳೆಗೆ ಮುಖ್ಯವಾಹಿನಿಗೆ ತರಲು ಈ ಟ್ರಸ್ಟ್ ಈ ಯೋಜನೆ ರೂಪಿಸಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗಲು ಪ್ರಯತ್ನಿಸಬೇಕು.ಮಹಿಳೆಯರಿಗೆ ಹೊಲಿಗೆ ಯಂತ್ರವು ಕೇವಲ ಉಪಕರಣವಲ್ಲ ಅದು ಒಂದು ಕುಟುಂಬದ ಭವಿಷ್ಯವನ್ನು ಕಟ್ಟುವ ಸಾಧನ ಎಂದು ಹೇಳಿದರು.
ಬಾಗೇಪಲ್ಲಿ ತಾಲೂಕಿನಾದ್ಯಂತ ಮಹಿಳೆಯರ ರಕ್ಷಣೆ ಗೆ ನಮ್ಮ ಪೋಲೀಸ್ ಇಲಾಖೆ ಬದ್ದವಾಗಿದೆ ನೀವು ಯಾವಾಗ ಬೇಕಾದರೆ 112 ದೂರವಾಣಿ ಗೆ ಪೋನ್ ಮಾಡಿದರೆ ನಿಮ್ಮ ರಕ್ಷಣೆ ಗೆ ಬರುತ್ತೇವೆ ಎಂದು ಹೇಳಿದರು.
ಇದನ್ನು ಓದಿದ್ದೀರಾ…?ವ್ಯವಹಾರ ಸುಲಭಿಕರಣ ಹೆಸರಲ್ಲಿ ಕಾರ್ಮಿಕರ ಕಾನೂನಿಗೆ ಧಕ್ಕೆ ಸಿಐಟಿಯು ವತಿಯಿಂದ ಪ್ರತಿಭಟನೆ
ಈ ಸಂದರ್ಭದಲ್ಲಿ ಆಶಾಲಯ ಟ್ರಸ್ಟ್ ಅಧಿಕಾರಿಗಳಾದ ಸಿಲ್ವಿಯಾ,ಅನೂಷಾ,ಧನ್ಯಾ ಹಾಗೂ ಪಾಚೇನಹಳ್ಳಿ ನಾಗರಾಜ ರೆಡ್ಡಿ ಮಂಜುನಾಥ್,ನರಸಿಂಹ ಮೂರ್ತಿ, ಹಾಗೂ ಮಹಿಳೆಯರು ಹಾಜರಿದ್ದರು.




