ಸಮಕಾಲೀನ ಸಾಹಿತ್ಯಕ್ಕೆ ಗಂಭೀರ ವಿಮರ್ಶೆ ಬೇಕು : ಮಹಾಂತೇಶ ಪಾಟೀಲ

Date:

ಸಮಕಾಲೀನ ಕಾವ್ಯದ ಬರವಣಿಗೆ ದೊಡ್ಡ ಪ್ರಮಾಣದಲ್ಲಿ ಹೊಸ ಹೊಸ ಸಂವೇದನೆಗಳಿಂದ ಹೊರಬರುತ್ತಿದೆ. ಅದನ್ನು ವಿಮರ್ಶೆಗೆ ಒಳಪಡಿಸುವ ಪ್ರಮಾಣ ಗಂಭೀರವಾಗಿ ನಡೆಯುತ್ತಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಮಹಾಂತೇಶ ಪಾಟೀಲ ಹೇಳಿದರು.

- Advertisement -

ಬೀದರ್ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದ ಆವರಣದಲ್ಲಿಬಸವಕಲ್ಯಾಣದ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ 2024ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ (‘ಬೆಳಕು ಬೆಳೆಯುವ ಹೊತ್ತು’ ) ಪುರಸ್ಕೃತ ಕವಿ, ವಿಮರ್ಶಕ ಡಾ.ಮಹಾಂತೇಶ ಪಾಟೀಲ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಕಾವ್ಯ, ವಿಮರ್ಶೆ ಎರಡೂ ಕಸುಬನ್ನು ಕನ್ನಡದ ಪರಂಪರೆಯಲ್ಲಿದೆ. ಎಲ್ಲಾ ಕಾಲವೂ ವಿಮರ್ಶೆಗೆ ಬಿಕ್ಕಟ್ಟಿನದ್ದೇ ಆಗಿದೆ. ನಾವು ಸಾಹಿತ್ಯ ಸಂವಾದ ಪರಂಪರೆ ಮುಂದುವರಿಸಿದಾಗ ಸಮಸ್ಯೆಗಳು ನಿವಾರಣೆ ಆಗುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಮರ್ಶೆಗೆ ಹೆಚ್ಚು ಅವಕಾಶ ಇರುತ್ತದೆ’ ಎಂದರು.

ಕಲಬುರಗಿ ಕೆ.ಬಿ.ಎನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಕತೆಗಾರ ಡಾ.ಸಂಗನಗೌಡ ಹಿರೇಗೌಡ ಮಾತನಾಡಿ, ‘ಸಮಕಾಲೀನ ಸಾಮಾಜಿಕ ಸಂಕೀರ್ಣತೆಗಳು ಸದ್ಯದ ಹೊಸ ತಲೆಮಾರಿನವರ ಸೃಜನಶೀಲ ಪಠ್ಯಗಳಲ್ಲಿ ಹೇಗೆ ನಿರೂಪಿತವಾಗಿವೆ ಎನ್ನುವ ಕುರಿತು ಮಹಾಂತೇಶ ಪಾಟೀಲ ತಮ್ಮ ‘ಬೆಳಕು ಬೆಳೆವ ಹೊತ್ತು’ ಕೃತಿಯಲ್ಲಿ ಚರ್ಚಿಸಿದ್ದಾರೆ’ ಎಂದರು.

ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿವೇಕಾನಂದ ಸಜ್ಜನ ಮಾತನಾಡಿ, ‘ಪರಿಸರವಾದಿ ಚಿಂತನೆ, ಸಾಮಾಜಿಕ ಆಯಾಮ ಮಹಾಂತೇಶ ಪಾಟೀಲ ಅವರ ವಿಮರ್ಶೆಯ ನಿಲುವು ವಾಗಿದೆ. ಅವರು ವಿಮರ್ಶೆಯಷ್ಟೇ ಶಕ್ತ ಕವಿಯೂ ಕವಿತೆಗಳು ಬರೆದಿದ್ದಾರೆ’ ಎಂದರು.

ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿ, ‘ಕಲಬುರಗಿಯ ಸಿಯುಕೆ ಕನ್ನಡ ವಿಭಾಗದ ಗರಡಿಯಲ್ಲಿ ಸಾಹಿತ್ಯದ ಹೊಸ ಫಸಲು ಹುಲುಸಾಗಿ ಬೆಳೆಯುತ್ತಿದೆ. ಹೊಸ ತಲೆಮಾರಿನ ಬರಹಗಾರರಿಂದ ಹೊಸ ಚಿಂತನೆಗಳು ಹುಟ್ಟಲು ಕಾರಣವಾಗಿದೆ’ ಎಂದರು.

ಇದನ್ನೂ ಓದಿ : ಔರಾದ್‌ ಸೀಮೆಯ ಕನ್ನಡ | ಸುಡು ಬಿಸಲಾಗ ಭಾಳ ಓಡಾಡಬ್ಯಾಡ; ಬೇಮಾರ ಬಿದ್ದೂರ್ ಹೈರಾಣ ಅದಾ!‌

ಹಿರಿಯ ಪತ್ರಕರ್ತ ವಿಜಯಕುಮಾರ್ ಬೆಲ್ದೆ, ಪ್ರತಿಷ್ಠಾನದ ನಿರ್ದೇಶಕ ಡಾ.ಶಿವಾಜಿ ಮೇತ್ರೆ, ಡಾ.ಭೀಮಾಶಂಕರ ಬಿರಾದಾರ, ವಿಜಯಕುಮಾರ್ ಪಾಟೀಲ ಬಾಚಿಪಾಳಿ , ಬಿಕೆಇಸಿ ರೆಜಿಸ್ಟ್ರಾರ್ ಪ್ರೇಮಸಾಗರ ಪಾಟೀಲ ಮೊದಲಾದವರು ಇದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ಸ್ವಾಗತಿಸಿ, ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧಾರ : ಸಿ.ಸೋಮಶೇಖರ್‌

ನಾಡಿನ ಹಿರಿಯ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿತೈಷಿಗಳ ಒತ್ತಾಯದ...

ಹಾವೇರಿ | ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ: ಬಸವರಾಜ ಎಸ್

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ,...

ಉದ್ಯೋಗ ಮಾಹಿತಿ: SSLC, ITI ಪಾಸಾದವರಿಗೆ ಅವಕಾಶ; BHELನಲ್ಲಿ 660 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ವಲಯದ 'ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್' (BHEL) ಸಂಸ್ಥೆ ಬೃಹತ್...

ಬಾಗಲಕೋಟೆ | ಆಶಾ ಕಾರ್ಯಕರ್ತೆಯರಿಗೆ ರೂ.15000 ಮಾಸಿಕ ವೇತನ ನಿಗದಿಪಡಿಸಲು ಆಗ್ರಹ

ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ, ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ...