“ಇಂದು ಗುಂಡುಗಳು ಸಿಡಿಯಲಿವೆ!” ಸೆಕ್ರೆಟರಿ ಮುಂದಾಗಿಯೇ ಹೇಳಿದ್ದು ಹೇಗೆ?

Date:

ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಡೊನಾಲ್ಡ್ ಟ್ರಂಪ್ ಅವರಂತಹ ವಿವಾದಿತ ಮತ್ತು ಪ್ರಭಾವಿ ವ್ಯಕ್ತಿ ಮತ್ತೊಬ್ಬರಿಲ್ಲ. ಶನಿವಾರ ತಡರಾತ್ರಿ ನಡೆದ ಭೋಜನಕೂಟದಲ್ಲಿ ಟ್ರಂಪ್ ಅವರ ಮೇಲೆ ನಡೆದ ದಾಳಿಯ ಯತ್ನವು ಅವರ ಭದ್ರತೆ ಮತ್ತು ಅಮೆರಿಕದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭದ್ರತಾ ಏಜೆಂಟ್‌ಗಳ ಸಮಯಪ್ರಜ್ಞೆಯಿಂದ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದರೂ, ಈ ಘಟನೆಯ ಹಿಂದೆ ದೊಡ್ಡದೊಂದು “ಮಾಸ್ಟರ್ ಪ್ಲಾನ್” ಇದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.

- Advertisement -

ಘಟನೆ ನಡೆದಿದ್ದು ಹೇಗೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು...

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಕುಟುಂಬದ ಕುಲಕಸುಬನ್ನೇ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆಯಿಟ್ಟಿದ್ದಾರೆ. ಸಂಜೀವಿನಿ...

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ...

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ 'ಉಸಿರುಗಟ್ಟಿಸುವ ನರಕಯಾತನೆ'ಯಾಗಿ ಬದಲಾಗುತ್ತಿರುವುದು ಕಟು ಸತ್ಯ....

NCPಯನ್ನು ಒಡೆದಿದ್ದ ಬಿಜೆಪಿಯೇ ಅದನ್ನು ಕೂಡಿಸಲು ಹೊರಟಿದೆ; ರಾಜಕೀಯ...

ವಿರೋಧ ಪಕ್ಷಗಳ ಸಾಲಿನಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್ ಪವಾರ್ ನಡುವಿನ ಸೌಹಾರ್ದ ಸಂಬಂಧ ಮುಂದುವರಿದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವಾರ್ ಅವರ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ ಮತ್ತು ದೆಹಲಿಯಲ್ಲಿ...

ಶನಿವಾರ ರಾತ್ರಿ ಅಮೆರಿಕದಲ್ಲಿ ನಡೆದ ಒಂದು ಔಪಚಾರಿಕ ಭೋಜನ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಿದ್ದರು. ಈ ವೇಳೆ ಬಂದೂಕುಧಾರಿಯೊಬ್ಬ ಬಾಲ್‌ರೂಮ್‌ನತ್ತ ನುಗ್ಗಲು ಪ್ರಯತ್ನಿಸಿ ಗುಂಡು ಹಾರಿಸಿದನು. ತಕ್ಷಣ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಟ್ರಂಪ್ ಅವರನ್ನು ಸುತ್ತುವರಿದು ಸುರಕ್ಷಿತವಾಗಿ ಹೊರಗೆ ಕರೆತಂದರು. ದಾಳಿಕೋರನನ್ನು ಹಿಡಿಯುವ ಪ್ರಯತ್ನದಲ್ಲಿ ಒಬ್ಬ ಭದ್ರತಾ ಸಿಬ್ಬಂದಿಗೆ ಗುಂಡು ತಗುಲಿತು. ಅದೃಷ್ಟವಶಾತ್, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಇದು ಹೈ-ಪ್ರೊಫೈಲ್ ಕಾರ್ಯಕ್ರಮವಾಗಿದ್ದರಿಂದ ಭದ್ರತೆ ಬಹಳ ಸ್ಟ್ರಾಂಗ್‌ ಇರಬೇಕಿತ್ತು. ಅಷ್ಟೇ ಅಲ್ಲ ಅಮೆರಿಕದ ಅಧ್ಯಕ್ಷರಿಗೆ ‘ಸೀಕ್ರೆಟ್ ಸರ್ವಿಸ್’ ಭದ್ರತೆ ಇರುತ್ತದೆ. ಈ ತಂಡವು ಜಗತ್ತಿನಲ್ಲೇ ಅತ್ಯುತ್ತಮ ಭದ್ರತಾ ವ್ಯವಸ್ಥೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. 

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯ “ಭವಿಷ್ಯ”ದ ಹಿಂದಿನ ಮರ್ಮವೇನು?

ಈ ದಾಳಿಯ ನಂತರ ಎಲ್ಲರ ಗಮನ ಸೆಳೆಯುತ್ತಿರುವುದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯ ಹೇಳಿಕೆ. “ಇಂದು ರಾತ್ರಿ ಕೆಲವು ಗುಂಡುಗಳು ಸಿಡಿಯಲಿವೆ” (Some shots will be fired tonight) ಎಂದು ಅವರು ಮೊದಲೇ ಹೇಳಿರುವುದು ಕಾಡ್ಗಿಚ್ಚಿನಂತೆ ಹಬ್ಬಿವೆ.

ಒಬ್ಬ ಅಧಿಕೃತ ವ್ಯಕ್ತಿ ಇಂತಹ ಮಾತನ್ನು ಆಡಲು ಹೇಗೆ ಸಾಧ್ಯ? ಅವರಿಗೆ ಮೊದಲೇ ಮಾಹಿತಿ ಇತ್ತೇ? ಅಥವಾ ಇದು ಕೇವಲ ಕಾಕತಾಳೀಯವೇ? ಒಂದು ವೇಳೆ ಇದು ಮೊದಲೇ ಗೊತ್ತಿದ್ದ ವಿಷಯವಾಗಿದ್ದರೆ, ಭದ್ರತೆಯಲ್ಲಿ ಅಷ್ಟೊಂದು ಲೋಪವಾಗಿದ್ದು ಹೇಗೆ? ಈ ಹೇಳಿಕೆಯು ಈಗ ಟ್ರಂಪ್ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ದೊಡ್ಡ ಮಟ್ಟದ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ಅಮೆರಿಕದ ಅಧ್ಯಕ್ಷರಿಗೆ ಇರುವ ಭದ್ರತೆ ಸಾಮಾನ್ಯವಾದುದಲ್ಲ. ಪ್ರತಿಯೊಬ್ಬ ವ್ಯಕ್ತಿಯನ್ನೂ ಹತ್ತಾರು ಬಾರಿ ತಪಾಸಣೆ ಮಾಡಿದ ನಂತರವೇ ಒಳಗೆ ಬಿಡಲಾಗುತ್ತದೆ. ಹೀಗಿರುವಾಗ, ಶಂಕಿತ ವ್ಯಕ್ತಿಯೊಬ್ಬ “ಉದ್ದನೆಯ ಆಯುಧ”ವನ್ನು (Long weapon) ಹೊತ್ತುಕೊಂಡು ಹೋಟೆಲ್ ಒಳಗೆ ಬಂದಿದ್ದಾದರೂ ಹೇಗೆ? ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಕೋರ ಸ್ಥಳದಲ್ಲೇ ಆಯುಧವನ್ನು ಜೋಡಿಸಿದ್ದಾನೆ. ಹೋಟೆಲ್‌ನಂತಹ ಕಿಕ್ಕಿರಿದ ಜಾಗದಲ್ಲಿ, ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಆಯುಧ ಜೋಡಿಸುವುದು ಅಸಾಧ್ಯದ ಮಾತು.

ಹೋಟೆಲ್‌ಗೆ ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶ ಸಿಕ್ಕಿದ್ದು ಹೇಗೆ ಎಂಬುದು ತನಿಖಾ ಸಂಸ್ಥೆಗಳಿಗೂ ತಲೆನೋವಾಗಿ ಪರಿಣಮಿಸಿದೆ. ಇದು ಭದ್ರತಾ ಲೋಪವೋ ಅಥವಾ ಒಳಗಿನವರೇ ಯಾರಾದರೂ ಸಹಾಯ ಮಾಡಿದ್ದಾರೋ ಅಥವಾ ತನ್ನ ಬಗ್ಗೆ ಒಂದು ಮರುಕ ಹುಟ್ಟಿಸುವ ಸಲುವಾಗಿ ಟ್ರಂಪ್‌ ಆಡಿದ ಆಟವೋ ಎಂಬ ಶಂಕೆ ಮೂಡಿದೆ. 

ಇದು ಟ್ರಂಪ್ ಅವರದ್ದೇ ‘ಮಾಸ್ಟರ್ ಪ್ಲಾನ್’ ಇರಬಹುದೇ?

ಈ ಅನುಮಾನ ಮೂಡಲು ಬಲವಾದ ಕಾರಣಗಳಿವೆ. ಈ ಹಿಂದೆಯೂ ಚುನಾವಣಾ ರ್ಯಾಲಿಯೊಂದರಲ್ಲಿ ಟ್ರಂಪ್ ಮೇಲೆ ದಾಳಿ ನಡೆದಿತ್ತು. ಆಗ ಗುಂಡು ಅವರ ಕಿವಿಯನ್ನು ಸವರಿಕೊಂಡು ಹೋಗಿತ್ತು. ಆ ಘಟನೆಯ ನಂತರ ಟ್ರಂಪ್ ಅವರ ಜನಪ್ರಿಯತೆ ದಿಢೀರ್ ಎಂದು ಏರಿಕೆಯಾಗಿತ್ತು. ಹಾಗಾಗಿ  ಈ ಘಟನೆಗಳನ್ನು ಟ್ರಂಪ್ ಅವರ ‘ಪಬ್ಲಿಸಿಟಿ ಸ್ಟಂಟ್’ ಎಂದು ಕೂಡ ಶಂಕಿಸುವ ಅಗತ್ಯತೆ ಇದೆ. ಅವರ ರಾಜಕೀಯ ಶೈಲಿ, ಗಮನ ಸೆಳೆಯುವ ವಿಧಾನಗಳು ಮತ್ತು ವಿವಾದಗಳನ್ನು ತಮ್ಮ ಪರವಾಗಿ ಬಳಸಿಕೊಳ್ಳುವ ಗುಣವನ್ನು ಗಮನದಲ್ಲಿಟ್ಟುಕೊಂಡರೆ, ಈ ರೀತಿಯ ಸಂಶಯಗಳು ಹುಟ್ಟುವುದು ಸಹಜ. ರಾಜಕೀಯದಲ್ಲಿ ‘ಸಿಂಪಥಿ ವೋಟ್’ ಅಥವಾ ಜನರ ಸಹಾನುಭೂತಿ ಪಡೆಯುವುದು ಬಹಳ ಪ್ರಮುಖ ಅಂಶ. ಜೀವಾಪಾಯದಿಂದ ಪಾರಾದ ನಾಯಕನಾಗಿ ಚಿತ್ರಸಿದರೆ, ಅದು ಜನರಲ್ಲಿ ಭಾವನಾತ್ಮಕವಾಗಿ ಸಹಾಯ ಮಾಡಬಹುದು ಎಂಬುದು ಟ್ರಂಪ್‌ ಪ್ಲಾನ್‌ ಆಗಿರಬಹುದು. 

 ಈಗ ಮತ್ತೆ ಅಂತಹದ್ದೇ ದಾಳಿ ನಡೆದಿರುವುದು ಜನರ ಸಹಾನುಭೂತಿ ಗಳಿಸುವ ತಂತ್ರವಿರಬಹುದೇ ಎಂದು ವಿಶ್ಲೇಷಕರು ಪ್ರಶ್ನಿಸುತ್ತಿದ್ದಾರೆ. ಹಾಗೆಯೇ ಜನರ ಮನಸ್ಸಿನಲ್ಲಿರುವ ಕೆಲವು ಪ್ರಶ್ನೆಗಳಿವೆ. 

  • ಯಾವಾಗಲೂ ಟ್ರಂಪ್ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗುವುದು ಹೇಗೆ?
  • ದಾಳಿಗಳು ನಡೆದಾಗಲೆಲ್ಲ ಟ್ರಂಪ್ ಹೆಚ್ಚು ಬಲಿಷ್ಠವಾಗಿ ಮತ್ತು ಜನಪ್ರಿಯರಾಗಿ ಹೊರಹೊಮ್ಮುತ್ತಿರುವುದು ಏಕೆ?
  • ಇದು ಮತದಾರರ ಗಮನ ಸೆಳೆಯಲು ರೂಪಿಸಿದ ಪ್ರಹಸನವೇ?

ಇನ್ನು ದಾಳಿಕೋರ ಬಳಸಿದ ಆಯುಧದ ಬಗ್ಗೆ ಪೊಲೀಸರು ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ. “ಉದ್ದನೆಯ ಆಯುಧ” ಎಂದರೆ ಅದು ಸ್ನೈಪರ್ ರೈಫಲ್ ಆಗಿರಬಹುದು ಅಥವಾ ಬೇರೆ ಯಾವುದಾದರೂ ಸುಧಾರಿತ ಆಯುಧವಿರಬಹುದು. ಈ ಆಯುಧವನ್ನು ಬಿಡಿಭಾಗಗಳಾಗಿ ತಂದು ಹೋಟೆಲ್ ಒಳಗೆ ಜೋಡಿಸಲಾಗಿದೆ ಎಂಬ ಮಾಹಿತಿ, ಇದು ಎಷ್ಟು ವ್ಯವಸ್ಥಿತವಾಗಿ ನಡೆದಿದೆ ಎಂಬುದನ್ನು ತೋರಿಸುತ್ತದೆ.

ಸದ್ಯಕ್ಕೆ ದಾಳಿಕೋರನ ಹಿನ್ನೆಲೆಯ ಬಗ್ಗೆ ತನಿಖೆ ನಡೆಯುತ್ತಿದೆ. ಗಾಯಗೊಂಡ ಭದ್ರತಾ ಸಿಬ್ಬಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಘಟನೆಯು ಟ್ರಂಪ್‌ ಜನಪ್ರಿಯತೆಯನ್ನ ಸಂಪೂರ್ಣವಾಗಿ ಬದಲಿಸಬಹುದು. ಈ ದಾಳಿಯಿಂದ ಟ್ರಂಪ್ ಅವರಿಗೆ ರಾಜಕೀಯವಾಗಿ ಲಾಭವಾಗುತ್ತದೆಯೇ ಅಥವಾ ಇದು ಅವರ ವಿರುದ್ಧ ನಡೆದ ನಿಜವಾದ ಸಂಚೇ ಎಂಬುದು ತನಿಖೆಯಿಂದ ಹೊರಬರಬೇಕಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಅಮೆರಿಕದಂತಹ ದೊಡ್ಡ ದೇಶದ ಅಧ್ಯಕ್ಷನ ಮೇಲೆ ಪದೇ ಪದೇ ಇಂತಹ ದಾಳಿಗಳು ನಡೆಯುವುದು ಸಾಮಾನ್ಯ ವಿಚಾರ ಅಲ್ಲ. ಶ್ವೇತಭವನದ ಕಾರ್ಯದರ್ಶಿಯ ಹೇಳಿಕೆ ಮತ್ತು ಭದ್ರತಾ ಲೋಪಗಳ ಬಗ್ಗೆ ನ್ಯಾಯಾಂಗ ತನಿಖೆಯಾದಾಗ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ. ಅಲ್ಲಿಯವರೆಗೂ, ಈ ಘಟನೆಯು ಕೇವಲ ಒಂದು ದಾಳಿಯ ಯತ್ನವಾಗಿ ಉಳಿಯದೆ, ಅಮೆರಿಕ ರಾಜಕೀಯದ ಅತಿದೊಡ್ಡ ನಿಗೂಢಗಳಲ್ಲಿ ಒಂದಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.

WhatsApp Image 2025 09 25 at 3.16.47 PM e1758793879498
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಪ್ರದೇಶ | ದಲಿತ ಬಾಲಕಿ ಮೇಲೆ ಭೀಕರ ಸಾಮೂಹಿಕ ಅತ್ಯಾಚಾರ; ಸಂತ್ರಸ್ತೆ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ದೈಹಿಕ...

ಬೀದರ್‌ | ಸತ್ಯಶುದ್ಧ ಕಾಯಕ, ಪ್ರಾಮಾಣಿಕತೆಯಿಂದ ಜೀವನದಲ್ಲಿ ಯಶಸ್ಸು: ಬಸವಲಿಂಗ ಪಟ್ಟದ್ದೇವರು

ಭಾಲ್ಕಿ: ಸತ್ಯಶುದ್ಧ ಕಾಯಕ, ಕಾಯಕನಿಷ್ಠೆ, ಪ್ರಾಮಾಣಿಕ ನಡೆ ಹಾಗೂ ನಿರಂತರ ಪರಿಶ್ರಮದಿಂದ...

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ ಕಲಿಯುವುದು ಯಾವಾಗ?

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ...

ಬೀದರ್‌ | ಹುಬ್ಬಳಿಯಲ್ಲಿ ನ.17ರಂದು ಖಾಸಗಿ ಶಾಲೆಗಳ ಪ್ರತಿಭಟನೆ

ರಾಜ್ಯ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಅನುದಾನರಹಿತ ಖಾಸಗಿ ಶಾಲೆಗಳ ಬೇಡಿಕೆಗಳ...