ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಜನ್ಮದಿನದ ಪ್ರಯುಕ್ತ ಎನ್‌ಎಸ್‌ಯುಐ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ರಕ್ತದಾನ ಶಿಬಿರ ನಡೆಸಲಾಯಿತು.
ಒಬ್ಬ ವ್ಯಕ್ತಿ ರಕ್ತ ನೀಡುವುದರಿಂದ 3 ರೋಗಿಗಳ ಜೀವ ಉಳಿಸಬಹುದು, ಹೃದಯ ಸಂಬಂಧೀ ಕಾಯಿಲೆಯಿಂದ ದೂರ ಇರಬಹುದು, ಕ್ಯಾನ್ಸರ್ ಮತ್ತು ಬಿಪಿಯನ್ನು ನಿಯಂತ್ರಣದಲ್ಲಿಡಬಹುದು, ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು, ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಸೇರಿ ಅನೇಕ ರೀತಿ ಆರೋಗ್ಯ ಪ್ರಯೋಜನ ಪಡೆಯಬಹುದೆಂದು ದಾನಿಗಳಿಗೆ ಅರಿವು ಮೂಡಿಸಲಾಯಿತು.
ದಾನಿಗಳೇ ಸ್ವಯಂಪ್ರೇರಿತರಾಗಿ ನಿಸ್ವಾರ್ಥ ಮನೋಭಾವದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಖರ್ಗೆ ಅವರ 83ನೇ ಹುಟ್ಟು ಹಬ್ಬಕ್ಕೆ ವಿಶೇಷವಾದ ಉಡುಗೊರೆಯನ್ನು ನೀಡಲಾಗಿದೆ ಎಂದು ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಗೌತಮ ಕರಿಕಲ್ ತಿಳಿಸಿದರು.

ಇದನ್ನೂ ಓದಿ: ಕಲಬುರಗಿ | ಈಶಾನ್ಯ ವಲಯಕ್ಕೆ ಚಂದ್ರಗುಪ್ತ ನೂತನ ಐಜಿಪಿ
ಈ ಸಂದರ್ಭದಲ್ಲಿ ಎನ್ಎಸ್‌ಯುಐ ಕಲಬುರಗಿ ಜಿಲ್ಲೆಯ ಅಧ್ಯಕ್ಷ ಡಾ. ಗೌತಮ ಕರಿಕಲ್, ಜಿಡಿಎ ಅಧ್ಯಕ್ಷ ಮಜರ್ ಅಲಂ ಖಾನ್, ಹೆಚ್‌ಕೆಇ ಸೊಸೈಟಿಯ ಸದಸ್ಯ ಡಾ. ಕಿರಣ್ ದೇಶಮುಖ್, ಅಭಿಷೇಕ್ ಅಲ್ಲಮಪ್ರಭು ಪಾಟೀಲ್, ಮಹಿಳಾ ಅಧ್ಯಕ್ಷರಾದ ರೇಣುಕಾ ಸಿಂಗೆ, ಕಾಂಗ್ರೆಸ್ ಮುಖಂಡರಾದ ನೀಲಕಂಠರಾಯ ಮೂಲಗೆ, ಪ್ರವೀಣ ಪಾಟೀಲ್ ಹರವಾಳ, ಮಾಜಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಈರಣ್ಣ ಜಳಕಿ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ, ಡಾ. ಸತೀಶ್ ಬೆಲಗಟ್ಟಿ, ಕಾಂಗ್ರೆಸ್ ಮುಖಂಡ ಭೀಮರಾವ್ ಮೇಳಕುಂದ, ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಸರಡಗಿ, ಕಾಂಗ್ರೆಸ್ ಯುವ ಮುಖಂಡ ಮಹೇಂದ್ರ ನಾಯ್ಡು, ಕಲಬುರಗಿ ದಕ್ಷಿಣ ಬ್ಲಾಕ್ ಯುವ ಅಧ್ಯಕ್ಷ ರಾಜು ಮಾಳಗೆ, ಎನ್‌ಎಸ್‌ಯುಐ ಉಪಾಧ್ಯಕ್ಷ ಸಂಪೂರ್ಣ ಪಾಟೀಲ್, ಕಾಂಗ್ರೇಸ್ ಮುಖಂಡ ಫಾರುಕ್ ಮನಿಯಾರ್, ಸಂಜಯ್ ಪಾಟೀಲ್, ಎನ್ಎಸ್‌ಯು ಚಿಂಚೋಳಿ ಅಧ್ಯಕ್ಷ ಅಂಕಿತಾ, ಎನ್‌ಎಸ್‌ಯುಐ ಜೇವರ್ಗಿ ಅಧ್ಯಕ್ಷ ಶ್ರೀಶೈಲ್, ಎನ್‌ಎಸ್‌ಯುಐ ಕಮಲಾಪುರ ಅಧ್ಯಕ್ಷ ನಾಗರಾಜ, ಡಾ. ಅತ್ತರ್, ಡಾ. ಐಶ್ವರ್ಯ, ಡಾ. ಅನೀಲ್, ಡಾ. ಸತೀಶ್ ಬೆಳಗಟ್ಟಿ, ಡಾ. ಅಬ್ದುಲ್ ಹಕಿಂ ಅತ್ತರ್, ಪ್ರದೀಪ್, ಹಾಗೂ ಇಎಸ್ಐಸಿ ಮೆಡಿಕಲ್ ಕಾಲೇಜಿನ ಸಿಬ್ಬಂದಿ ವರ್ಗದವರು, ಮುಖಂಡರು, ಸಮಾಜ ಸೇವಕರು, ಹೋರಾಟಗಾರರು, ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಅಭಿಮಾನಿಗಳು, ಕಾರ್ಯಕರ್ತರು, ಗುಲ್ಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಎನ್‌ಎಸ್‌ಯುಐ ಪದಾಧಿಕಾರಿಗಳು ಉಪಸ್ಥಿತರಿದ್ದರು.