ಕಲಬುರಗಿ ಈಶಾನ್ಯ ವಲಯದ ನೂತನ ಐಜಿಪಿಯಾಗಿ ಡಾ.ಚಂದ್ರಗುಪ್ತ ಅವರನ್ನು ವರ್ಗಾವಣೆ ಮಾಡಿ ಆಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ವಿ.ಅಶೋಕ ಸೋಮವಾರ ಆದೇಶ ಹೊರಡಿಸಿದ್ದಾರೆ.
- Advertisement -
2008ರ ಬ್ಯಾಚಿನ ಅಜಯ್ ಹಿಲೋರಿ ಅವರು ಈಶಾನ್ಯ ವಲಯದ ಐಜಿಪಿ ಆಗಿದ್ದರು. ಇದೀಗ ಬೆಂಗಳೂರು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರನ್ನಾಗಿ ಮಾಡಿ ವರ್ಗಾವಣೆ ಮಾಡಲಾಗಿದೆ.
2006ರ ಬ್ಯಾಚಿನ ಐಪಿಎಸ್ ಅಧಿಕಾರಿ ಚಂದ್ರಗುಪ್ತ ಅವರು ಈ ಹಿಂದೆ ಬೆಂಗಳೂರಿನ ಅಪರಾಧ ವಿಭಾಗದ ಐಜಿಪಿ ಆಗಿದ್ದರು.
ಇದನ್ನೂ ಓದಿ : ತಮಿಳು ಚಿತ್ರರಸಿಕರು ಮೆಚ್ಚಿದ ‘ಕನ್ನಡತ್ತು ಪೈಂಕಿಳಿ’ ಬಿ. ಸರೋಜಾದೇವಿ





