ದ್ವಿಚಕ್ರ ವಾಹನ ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡಿರುವ ಗುತ್ತಿಗೆ ಪೌರ ಕಾರ್ಮಿಕ ಟಿ.ನರಸಿಂಹಯ್ಯ ಅಯುತಪ್ಪಿ ಆಂದ್ರಪ್ರದೇಶದ ಸಾರಿಗೆ ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಬಾಗೇಪಲ್ಲಿ ಪಟ್ಟಣದ ಗೂಳೂರು ರಸ್ತೆಯಲ್ಲಿ ನಡೆದಿದೆ.
ಬಾಗೇಪಲ್ಲಿಯ ಪುರಸಭೆ ಕಾರ್ಯಾಲಯದಲ್ಲಿ ಗುತ್ತಿಗೆ ಆಧಾರದ ಪೌರ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿರುವ 13 ನೇ ವಾರ್ಡಿನ ನಿವಾಸಿ ನರಸಿಂಹಯ್ಯ( 32 ವರ್ಷ) ಮೃತ ದುರ್ದೈವಿ ಆಗಿದ್ದಾರೆ.
ಬಾಗೇಪಲ್ಲಿ ಪಟ್ಟಣದ ಗೂಳೂರು ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನದಂದು ಪೌರ ಕಾರ್ಮಿಕ ನರಸಿಂಹಯ್ಯ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಸಮಯದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಆಂಧ್ರಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿರುವ ಬಸ್ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಘಟನಾ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಮೃತದೇಹಕ್ಕೆ ವೈಧ್ಯರು ಶವಪರೀಕ್ಷೆ ನಡೆಸಿ ಪಾಲಕರಿಗೆ ಒಪ್ಪಿಸಿರುತ್ತಾರೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಆಸ್ಪತ್ರೆಗೆ ಬೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿ ಮೃತ ಕುಟುಂಬಕ್ಕೆ ಪುರಸಭೆ ವತಿಯಿಂದ ಅಂತ್ಯಕ್ರಿಯೆ ಗಾಗಿ 10 ಸಾವಿರ ನೀಡಿದ್ದಾರೆ.
ಇದನ್ನು ಓದಿದ್ದೀರಾ..?ಕೋಲಾರ | ಜಿಪಿಎಸ್ ನಿಯಮದ ಬಿಗಿ: ಬಡವರ ಪಡಿತರಕ್ಕೂ ಅಡ್ಡಿ
ಘಟನಾ ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಅಜೆಯ್ ಸಾರಥಿ ಬೇಟಿ ನೀಡಿ ಆಂಧ್ರಪ್ರದೇಶದ ಸಾರಿಗೆ ಸಂಸ್ಥೆ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




