ಕೋಲಾರ | ವಿದ್ಯುತ್ ಚಿತಾಗಾರ ಘಟಕ ಸ್ಥಾಪನೆಯ ವಿಚಾರದಲ್ಲಿ ಪರ – ವಿರೋಧ ನಡುವೆ ಗೊಂದಲ

Date:

ನಗರದ ಟೇಕಲ್ ರಸ್ತೆಯ ಆಗ್ರೋ ಕಚೇರಿ ಯ ಹಿಂಭಾಗದ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ಘಟಕವನ್ನು ಮಂಜೂರು ಮಾಡಲಾಗಿದ್ದು, ಸ್ಥಾಪನೆಯ ವಿಚಾರದಲ್ಲಿ ಪರ – ವಿರೋಧ ನಡುವೆ ಗೊಂದಲ ಸೃಷ್ಟಿಯಾಗಿದೆ.

ನಗರದಲ್ಲಿ ಒಂದು ಕಡೆಯ ನಿವಾಸಿಗಳು ವಿದ್ಯುತ್ ಚಿತಾಗಾರ ಸ್ಮಶಾನದಲ್ಲಿ ಬೇಡ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಮತ್ತೊಂದು ಕಡೆಯ ನಿವಾಸಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಸರಕಾರದ ವಿದ್ಯುತ್ ಚಿತಾಗಾರವನ್ನು ಮಂಜೂರು ಆಗಿದ್ದು, ಸ್ಥಾಪನೆಯನ್ನು ಜಿಲ್ಲಾಡಳಿತ ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಮನವಿಯನ್ನು ಸಲ್ಲಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರದ ವಿಚಾರದಲ್ಲಿ ಬೇಕು -ಬೇಡ ಎನ್ನುವ ಮಟ್ಟದಲ್ಲಿ ಸುದ್ದಿಯಾಗಿದೆ. ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ ಅವಶ್ಯಕತೆ ಇಲ್ಲ, ದಲಿತರಲ್ಲಿ ಸುಡುವ ಪದ್ದತಿ ಇಲ್ಲವಾಗಿದ್ದು, ಈ ನಿಟ್ಟಿನಲ್ಲಿ ಇರುವ ಜಾಗವೂ ಕಡಿಮೆ ಇರುವ ಹಿನ್ನೆಲೆ ವಿದ್ಯುತ್ ಚಿತಾಗಾರ ನಿರ್ಮಾಣ ಬೇಡ ಎಂದು ಪ್ರತಿಭಟನೆಯನ್ನು ಬಡಾವಣೆ ನಿವಾಸಿಗಿಗಳಿಂದ ಅಂಬೇಡ್ಕರ್ ಬಾವಚಿತ್ರವಿಟ್ಟುಕೊಂಡು ತಮಟೆ ಬಾರಿಸಿ ಪ್ರತಿಭಟನೆಯನ್ನು ನಡೆಸಿ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿದ್ಯುತ್ ಚಿತಾಗಾರವನ್ನು ಸ್ಥಾಪಿಸದಂತೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ನಡೆಸುತ್ತಿದ್ದು, ಶವಸಂಸ್ಕಾರ ಮಾಡಲು ಸ್ಥಳವಿಲ್ಲದೆ ತೊಂದರೆಯಾಗಿರುವ ಕಾರಣ ಮಂಜೂರುಗೊಂಡಿರುವ ವಿದ್ಯುತ್ ಚಿತಾಗಾರವನ್ನು ಈ ಕೂಡಲೇ ಅಗತ್ಯ ಕ್ರಮವಹಿಸಿ, ಸ್ಥಾಪಿಸಿ ಇಲ್ಲಿನ ನಿವಾಸಿಗಳಿಗೆ ಶವಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡಲು ಜಿಲ್ಲಾಡಳಿತದಿಂದ ವಿರೋಧ ವ್ಯಕ್ತಪಡಿಸುವರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ ಪರವಾಗಿ ಧ್ವನಿಎತ್ತಿದ್ದಾರೆ.

ಇದನ್ನು ಓದಿದ್ದೀರಾ..?ಕೋಲಾರ | ಜಿಪಿಎಸ್ ನಿಯಮದ ಬಿಗಿ: ಬಡವರ ಪಡಿತರಕ್ಕೂ ಅಡ್ಡಿ

ಈ ಕೂಡಲೇ ವಿದ್ಯುತ್ ಚಿತಾಗಾರ ಘಟಕ ಸ್ಥಾಪನೆ ಕಾಮಗಾರಿ ಸ್ಥಳಾಂತರ ಮಾಡುವಂತೆ, ವಿದ್ಯುತ್ ಚಿತಾಗಾರ ಘಟಕ ಸ್ಥಾಪನೆ ಮಾಡುವಂತೆ ಹೈ ಡ್ರಾಮಾ ಗೆ ಶುರುವಾಗಿದೆ ಮುಂದೆ ಯಾವುದಕ್ಕೆ ತೆರೆ ಬೀಳಲಿದೆ ಎಂದು ಕಾದು ನೋಡಬೇಕಿದೆ.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಜಿಲ್ಲೆಯಲ್ಲಿ ಶೇ. 10 ರಷ್ಟು ಮಾತ್ರ ಅರಣ್ಯ ಶೇ 4 ಅರಣ್ಯ ಒತ್ತುವರಿ : ಸರೀನಾ ಸಿಕ್ಕಲಿಗರ್

ಜಿಲ್ಲೆಯಲ್ಲಿ ಕೇವಲ ಶೇ.10 ರಷ್ಟು ಮಾತ್ರ ಅರಣ್ಯ ಉಳಿದಿದ್ದು, ಅದರಲೂ ಸಹ...

ಕೋಲಾರ | ಪಶು ವೈದ್ಯರ ಖಾಲಿ ಹುದ್ದೆ ಭರ್ತಿಗೆ ರೈತಸಂಘ ಆಗ್ರಹ

ಪಶು ಇಲಾಖೆಯಲ್ಲಿ ಖಾಲಿ ಇರುವ ಪಶು ವೈದ್ಯರ ಹುದ್ದೆಗಳನ್ನು ತಕ್ಷಣ ಭರ್ತಿ...

ಕೋಲಾರ | ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶರೈತರ ಹಕ್ಕುಗಳ ಅರಿವಿನಿಂದ ಅರಣ್ಯ ಅಧಿಕಾರಿಗಳಿಗೆ ನಡುಕ: ಆರ್. ಶ್ರೀನಿವಾಸನ್

ರೈತರು ನಿದ್ದೆ ಮಾಡುವ ಸಂದರ್ಭವನ್ನು ಬಳಸಿಕೊಂಡು ಬೆಳಗಿನ ಜಾವ ಪೊಲೀಸ್ ಬೆಂಗಾವಲಿನಲ್ಲಿ...

ಕೋಲಾರ | ಶಾಲೆಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಒಕ್ಕೂಟ ಅಗತ್ಯ: ಲಕ್ಷ್ಮಣಗೌಡ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ,...