ಚಿಕ್ಕಬಳ್ಳಾಪುರ | ರಕ್ತದಾನ ಮಹಾದಾನ: ಜೀವ ಉಳಿಸುವ ಕಾರ್ಯಕ್ಕೆ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ರಕ್ತಕೇಂದ್ರ ಶುಭಾರಂಭ

Date:

ರಕ್ತಕ್ಕೆ ಪರ್ಯಾಯವಿಲ್ಲ ತುರ್ತು ಸಂದರ್ಭದಲ್ಲಿ ಸಕಾಲಕ್ಕೆ ರಕ್ತ ದೊರೆತರೆ ಅಮೂಲ್ಯ ಜೀವವೊಂದನ್ನು ಉಳಿಸಬಹುದು.ಹೀಗಾಗಿ ರಕ್ತದಾನ ಮಹಾದಾನವಾಗಿದ್ದು, ಜಿಲ್ಲೆಯಲ್ಲಿ ಮತ್ತೊಂದು ರಕ್ತನಿಧಿ ಕೇಂದ್ರ ಆರಂಭವಾಗಿರುವುದು ಸಂತಸದ ವಿಚಾರ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಹಾಗೂ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಸಿಎಸ್‌ಐ ಆಸ್ಪತ್ರೆ ರಸ್ತೆಯ ಗುರುಕೃಪಾದಲ್ಲಿ ಡಾ.ರಾಮಕೃಷ್ಣ ರೆಡ್ಡಿ ಹಾಗೂ ರೇಖಾ ದಂಪತಿ ಆರಂಭಿಸಿರುವ ಚಿಕ್ಕಬಳ್ಳಾಪುರ ರಕ್ತ ಕೇಂದ್ರ ವನ್ನು ಜಿಲ್ಲಾಧಿಕಾರಿ ಪ್ರಭು ಹಾಗೂ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ,ಅಪಘಾತ,ಶಸ್ತ್ರಚಿಕಿತ್ಸೆ ಹಾಗೂ ಗರ್ಭಿಣಿಯರಿಗೆ ರಕ್ತಸ್ರಾವ ಉಂಟಾದಂತಹ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ.ಈ ಹಿಂದೆ ರಕ್ತಕ್ಕಾಗಿ ಯಲಹಂಕ ಅಥವಾ ಬೆಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ಇತ್ತು. ಇದೀಗ ಚಿಕ್ಕಬಳ್ಳಾಪುರದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಕ್ತಕೇಂದ್ರದ ಜತೆಗೆ ಮತ್ತೊಂದು ರಕ್ತನಿಧಿ ಕೇಂದ್ರ ಆರಂಭವಾಗಿರುವುದರಿಂದ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆ ರಕ್ತದಾನಿಗಳ ತವರೂರು ಎನಿಸಿಕೊಂಡಿದೆ.ಜಿಲ್ಲೆಯ ಯುವಕರು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ರಕ್ತದಾನ ಮಾಡುವ ಉತ್ತಮ ಅಭ್ಯಾಸ ಬೆಳೆಸಿಕೊಂಡಿರುವುದು ಹೆಮ್ಮೆಯ ಸಂಗತಿ. ಇಂತಹ ಮಾನವೀಯ ಕಾರ್ಯಕ್ಕೆ ಮುಂದಾಗಿರುವ ಡಾ. ರಾಮಕೃಷ್ಣ ಹಾಗೂ ಅವರ ಕುಟುಂಬವನ್ನು ಅಭಿನಂದಿಸುವುದಾಗಿ ಎಂದು ತಿಳಿಸಿದರು.

ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿ,ರಕ್ತದಾನ ಮಹಾದಾನ. ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದು,ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ಸಕಾಲದಲ್ಲಿ ರಕ್ತ ದೊರೆಯುವಂತಾಗಬೇಕು. ರಕ್ತದಾನಿಗಳಿಂದ ಸಂಗ್ರಹವಾಗುವ ರಕ್ತವನ್ನು ಅಗತ್ಯವಿರುವವರಿಗೆ ಒದಗಿಸುವ ಮಾನವೀಯ ಕಾರ್ಯವನ್ನು ಈ ಕೇಂದ್ರ ಮಾಡಲಿ ಎಂದು ಆಶಿಸಿದರು.

ಹೈಟೆಕ್ನಾಲಜಿ ಬಳಸಿ ರಕ್ತ ಸಂಗ್ರಹ ಹಾಗೂ ಅಗತ್ಯ ಸೇವೆಗಳನ್ನು ಒದಗಿಸುವ ಕೇಂದ್ರ ಜಿಲ್ಲೆಗೆ ಅಗತ್ಯವಾಗಿತ್ತು. ಒಂದೇ ರಕ್ತದ ಗುಂಪಿನಲ್ಲಿಯೂ ಹಲವು ಉಪಗುಂಪುಗಳಿರುವುದರಿಂದ ಅಗತ್ಯವಿರುವ ರಕ್ತವನ್ನು ಸೂಕ್ತ ಸಮಯದಲ್ಲಿ ಪೂರೈಸುವ ವ್ಯವಸ್ಥೆ ಮಹತ್ವದ್ದಾಗಿದೆ ಎಂದರು.ಲಾಭ-ನಷ್ಟದ ಲೆಕ್ಕಾಚಾರವಿಲ್ಲದೆ ಜೀವ ಉಳಿಸುವ ಉದ್ದೇಶದಿಂದ ಆರಂಭಿಸಿರುವ ರಕ್ತಕೇಂದ್ರ ಮಾದರಿಯಾಗಿದೆ.ಇಂತಹ ಮಾನವೀಯ ಕಾರ್ಯಕ್ಕೆ ಸಮಾಜದ ಸಂಪೂರ್ಣ ಬೆಂಬಲ ದೊರೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಡಾ.ರಾಮಕೃಷ್ಣ ರೆಡ್ಡಿ ದಂಪತಿಯ 18 ವರ್ಷದ ಪುತ್ರ ವಿಶೇಷವಾಗಿ ಗಮನ ಸೆಳೆದರು.ತಂದೆ-ತಾಯಿ ನಿರ್ಮಿಸಿರುವ ರಕ್ತಕೇಂದ್ರದ ಉದ್ಘಾಟನೆಯನ್ನು ರಕ್ತದಾನ ಮಾಡುವ ಮೂಲಕ ಆರಂಭಿಸಿ, ಜೀವ ಉಳಿಸುವ ಕಾರ್ಯಕ್ಕೆ ನನ್ನದೊಂದು ಸಣ್ಣ ಕೊಡುಗೆ ಎಂಬ ಸಂದೇಶ ಸಾರಿದರು.

ಇದನ್ನು ಓದಿದ್ದೀರಾ..? ಕೋಲಾರ | ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಮದ್ದೇರಿ ಶಾಲೆಯ ರಜತ ಮಹೋತ್ಸವ:ಶಿಕ್ಷಕರಿಗೆ ಅದ್ಧೂರಿ ಸನ್ಮಾನ

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ಕೆ.ಎಚ್.ವೆಂಕಟಪ್ಪ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಎಂ. ಜಯರಾಮ್,ವಕೀಲ ಮುನೇಗೌಡ,ಆದಿಚುಂಚನಗಿರಿ ಧರ್ಮಾಧಿಕಾರಿಗಳು,ಸಮಾಜ ಸೇವಕ ಗೋದಾನಿ ಆನೆಮಡುಗು ಹರೀಶ್. ಕೆ.ರೆಡ್ಡಿ,ಪ್ರೊ.ಲಕ್ಷ್ಮೀನಾರಾಯಣ, ಮೊಬೈಲ್ ಬಾಬು,ಅನು ಆನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿ | ಬೆಲೆ ಏರಿಕೆ, ಭ್ರಷ್ಟಾಚಾರ ಮಾತ್ರ ನಿರಂತರ ಜಾರಿಯಲ್ಲಿದೆ: ಸಿ.ಟಿ. ರವಿ ವಾಗ್ದಾಳಿ

"ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳು ಪಂಚರ್‌ ಆಗಿದ್ದು, ಬೆಲೆ ಏರಿಕೆ ಮತ್ತು...

ಕಾರವಾರ | ನೌಕಾಪಡೆಗೆ ಸ್ವದೇಶಿ ‘ಐಎನ್‌ಎಸ್ ಸಮರ್ಥಕ್’ ಸೇರ್ಪಡೆ

ಕಾರವಾರ: ಭಾರತೀಯ ನೌಕಾಪಡೆಯ ಸ್ವದೇಶಿ ನಿರ್ಮಿತ ಬಹು ಉದ್ದೇಶದ ನೌಕೆ ಐಎನ್‌ಎಸ್...

SIR ರದ್ದುಗೊಳಿಸಿ, ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಿ: ಆಗ್ರಹ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಎರಡು ದಿನದ ಕಂಬಳಕ್ಕಾಗಿ ಪರಿಸರ ಬಲಿ? ಕೆರೆಯ ಜಾಗ, ಮರಗಳ ತೆರವಿನ ಸುತ್ತ ಗಂಭೀರ ಪ್ರಶ್ನೆಗಳು!

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕಂಬಳ ಆಯೋಜಿಸುವ ನಿರ್ಧಾರ ಈಗ ಕೇವಲ...