ಕರ್ಕಶ ಶಬ್ದ ಉಂಟು ಮಾಡುವ 100 ಮೊಡಿಫೈಡ್ ಸೈಲೆನ್ಸರ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರ ನೇತೃತ್ವದಲ್ಲಿ ಶುಕ್ರವಾರ ಟ್ರಾಫಿಕ್ ಪೊಲೀಸರು ನಾಶಪಡಿಸಿದರು.
ಕಳೆದ ಮೂರು ತಿಂಗಳಿಂದ ದ್ವಿಚಕ್ರ ವಾಹನಗಳಿಗೆ ಅಳವಡಿಸಲಾಗಿದ್ದ ಕರ್ಕಶ ಶಬ್ದ ಉಂಟು ಮಾಡುವ ಮೊಡಿಫೈಡ್ ಸೈಲೆನ್ಸರ್‌ಗಳ ವಿರುದ್ಧ ಸಂಚಾರ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ 100 ಸೈಲೆನ್ಸರ್‌ಗಳನ್ನು ಇಂದು ನಾಶಪಡಿಸಲಾಯಿತು. ಮೊಡಿಫೈಡ್ ಸೈಲೆನ್ಸರ್‌ಗಳನ್ನು ಅಳವಡಿಸಿಕೊಳ್ಳಲು ಅವಕಾಶವಿಲ್ಲ ಎಂಬುದರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಶಬ್ದ ಮಾಲಿನ್ಯ ಉಂಟು ಮಾಡುವ ಮೊಡಿಫೈಡ್ ಸೈಲೆನ್ಸರ್‌ಗಳ ಬಳಕೆಗೆ ಅವಕಾಶವಿಲ್ಲ. ದ್ವಿಚಕ್ರ ವಾಹನಗಳಿಗೆ ಇಂತಹ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡಿರುವವರು ಅವುಗಳನ್ನು ತೆರವುಗೊಳಿಸಬೇಕು. ಕಳೆದ ಮೂರು ತಿಂಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ 100 ಮೊಡಿಫೈಡ್ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ಇಂದು ನಾಶಪಡಿಸಲಾಗಿದೆ. ಇದು ಮೂರನೇ ಹಂತದ ನಾಶಪಡಿಸುವ ಕಾರ್ಯಾಚರಣೆಯಾಗಿದ್ದು, ಇದುವರೆಗೆ ಒಟ್ಟು 600 ಮೊಡಿಫೈಡ್ ಸೈಲೆನ್ಸರ್‌ಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಜಂತರ್ ಮಂತರ್‌ನಲ್ಲಿ ಹಲ್ಲೆ ಖಂಡಿಸಿ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಿಂದ ನಗರದಲ್ಲಿ ಪಂಜಿನ ಮೆರವಣಿಗೆ
ಟ್ರಾಫಿಕ್ ಸಬ್‌ಇನ್ಸ್‌ಪೆಕ್ಟರ್ ವಿದ್ಯಾಶ್ರೀ ಮಾತನಾಡಿ, ನಗರದಲ್ಲಿ ಆಲ್ಟರ್ಡ್ ಸೈಲೆನ್ಸರ್‌ಗಳ ಹಾವಳಿ ಹೆಚ್ಚಾಗಿತ್ತು. ನಗರದ ಪ್ರಮುಖ ರಸ್ತೆಯಲ್ಲಿ ಆಸ್ಪತ್ರೆ ಇರುವುದರಿಂದ ಕರ್ಕಶ ಶಬ್ದದಿಂದ ರೋಗಿಗಳಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಪ್ರತಿದಿನ ಕರ್ಕಶ ಶಬ್ದ ಉಂಟು ಮಾಡುವ ಮೊಡಿಫೈಡ್ ಸೈಲೆನ್ಸರ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಅವುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಜತೆಗೆ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಪಾಲನೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಚಿಕ್ಕಬಳ್ಳಾಪುರ | ಕರ್ಕಶ ಶಬ್ದ ಉಂಟು ಮಾಡುವ 100 ಮೊಡಿಫೈಡ್ ಸೈಲೆನ್ಸರ್‌ಗಳ ನಾಶ
ಪೋಸ್ಟ್ ಹಂಚಿಕೊಳ್ಳಿ:





