ಬಾಗೇಪಲ್ಲಿ:ಚುನಾವಣೆ ಆಯೋಗವು ಮತದಾರರ ಪಟ್ಟಿಯಲ್ಲಿ ಒಂದೇ ವ್ಯಕ್ತಿಯ ಎರಡು ಕಡೆ ಮತದಾರರ ಪಟ್ಟಿಯಲ್ಲಿರುವುದು, ಮೃತಪಟ್ಟು ಹಲವು ವರ್ಷಗಳೇ ಕಳೆದರೂ ಇನ್ನು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಪರಿಷ್ಕರಣೆ ಮಾಡುವ ಉದ್ದೇಶದಿಂದ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೇ ನೂನ್ಯತೆಗಳಿಂದ ಕೂಡಿದೆ ಎಂದು ತಾಲೂಕು ಸಿಪಿಐ(ಎಂ) ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಆರೋಪಿಸಿದರು.
ಅವರು ಮಂಗಳವಾರ ಪಟ್ಟಣದ ಸುಂದರಯ್ಯ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಎಸ್‌ಐಆರ್ ಪ್ರಕ್ರಿಯೆಗೆ 6ತಿಂಗಳ ಕಾಲಾವಕಾಶ ನೀಡಬೇಕೆಂದು ರಾಜಕೀಯ ಪಕ್ಷಗಳು ಆಗ್ರಹಿಸುತ್ತಿದ್ದರೂ ಚುನಾವಣಾ ಆಯೋಗವು ತರಾತುರಿಯಲ್ಲಿ ಒಂದೇ ತಿಂಗಳಲ್ಲಿ ಮತದಾರರ ಕರಡು ಮತದಾರರ ಪಟ್ಟಿ ಪ್ರಕಟಿಸಿದೆ.ಈ ಕರಡು ಮತದಾರರ ಪಟ್ಟಿಯಲ್ಲಿ ಹಲವರು ಮೃತಪಟ್ಟು ಹಲವು ವರ್ಷಗಳ ಕಳೆದಿದೆ.ಕೆಲವು ಮತದಾರರು ಊರುಬಿಟ್ಟು ಹಲವು ವರ್ಷಗಳೇ ಕಳೆದಿದೆ.
ಕೆಲವು ಮತದಾರರ ಹೆಸರುಗಳು ಹಲವು ಮತದಾನ ಕೇಂದ್ರಗಳಲ್ಲಿ ಇವೆ.ಕೆಲವು ಬಿಎಲ್‌ಓಗಳು ಮನೆ ಮನೆಗೂ ಹೋಗಿ ಪರಿಶೀಲಿಸಿ ಮತದಾರರ ಪಟ್ಟಿಯನ್ನು ತಯಾರು ಮಾಡದೆ ಕುಳಿತ್ತಲೇ ಮತದಾರರ ಪಟ್ಟಿ ತಯಾರು ಮಾಡಿವುದರಿಂದ ಈ ಲೋಪಧೋಷಗಳು ಕಾಣಿಸಿಕೊಂಡಿವೆ ಆದರೆ ಚುನಾವಣಾ ಆಯೋಗುವು ಎಲ್ಲಾ ಕ್ರಮಬದ್ದವಾಗಿ ಮಾಡುತ್ತಿದ್ದೇವೆ ಎಂದು ಹೇಳುವುದನ್ನು ರೂಢಿಸಿಕೊಂಡಿದೆ ಉದಾಹರಣೆಗೆ ಪಟ್ಟಣದಲ್ಲಿ ನಾಗಮಲ್ಲಿರೆಡ್ಡಿ,ಮಂಜುಳಮ್ಮ,ಜೆ.ಎನ್.ಶಿವಕುಮಾರ್,ಪ್ರಿಯಾಂಕ ಅವರ ಹೆಸರುಗಳು ಒಂದಕ್ಕಿಂತ ಹೆಚ್ಚು ಮತದಾನ ಕೇಂದ್ರಗಳಲ್ಲಿ ನಮೂದಿಸಲಾಗಿದೆ.ಅಶ್ವತ್ಥಪ್ಪ,ವೆಂಕಟರಾಮರೆಡ್ಡಿ,ರಾಮಪ್ಪ ಎಂಬುವರು ಮೃತಪಟ್ಟು ಹಲವು ವರ್ಷಗಳು ಕಳೆದಿದೆ ಆದರೂ ಇನ್ನು ಮತದಾರರ ಪಟ್ಟಿಯಲ್ಲಿ ಪ್ರಕಟವಾಗುತ್ತಲೇ ಇದೆ.ಪಿ.ವಿ.ವೆಂಕಟರಾಮ್,ಹೆಚ್.ವಿ.ಶಿವಕುಮಾರ್,ಎನ್.ಆರ್.ವಾಣಿ ಬಾಗೇಪಲ್ಲಿ ಪಟ್ಟಣ ಬಿಟ್ಟು ಅನೇಕ ವರ್ಷಗಳಾಗಿದ್ದರೂ ಅವರು ಹೆಸರುಗಳನ್ನು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗಿದೆ.ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗುವು ಕರ್ನಾಟಕದಲ್ಲಿ 1ಕೋಟಿ7ಲಕ್ಷ ಮತದಾರರು ಡೀಲಿಟ್ ಆಗುವುದಾಗಿ ಸೂಚನೆ ನೀಡಿದೆ ಚುನಾವಣೆ ಆಯೋಗವು ಈ ರೀತಿ ಯಾವ ಆಧಾರದಲ್ಲಿ ಡೀಲಿಟ್ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿರುವ ಅವರು ಸಾಮಾನ್ಯವಾಗಿ ಅಲ್ಪಸಂಖ್ಯಾತರು,ಬುಡಕಟ್ಟು,ಹಿಂದುಳಿದ ವರ್ಗದ ಜನರು ಮತದಾರರ ಪಟ್ಟಿಯಿಂದ ಹೊರಗಿಡುವ ಸಂಚು ನಡೆಯುತ್ತಿದೆ.
ಕೆಲವು ಮತದಾನ ಕೇಂದ್ರಗಳಿಗೆ ಅಪರಿಪಕ್ಕ ಬಿಎಲ್‌ಓಗಳನ್ನು ನೇಮಕ ಮಾಡಿರುವುದು ಇನ್ನು ಕೆಲವು ಬಿಎಲ್‌ಓಗಳು ತಮ್ಮಗೆ ನಿಗದಿಪಡಿಸಿದ ಮತದಾರರ ಕೇಂದ್ರಗಳ ಎಲ್ಲಾ ಮತದಾರರ ಮನೆಗಳಿಗೆ ಹೋಗದೆ ದೇವಸ್ಥಾನ,ಶಾಲೆ,ಸಮುದಾಯ ಭವನ ಹಾಗೂ ಪಟ್ಟಭದ್ರರ ಮನೆಗಳಲ್ಲಿ ಕುಳಿತು ಅರ್ಜಿ ಫಾರಂಗಳನ್ನು ಹಂಚಿಕೆ ಮಾಡಿ ಖಾಲಿ ಫಾರಂಗಳಿಗೆ ಸಹಿ ಹಾಕಿಸಿಕೊಂಡು ಮೂರನೇ ವ್ಯಕ್ತಿಯಿಂದ ಭರ್ತಿ ಮಾಡಿಸಿರುವ ಉದಾಹರಣೆಗಳು ನಡೆದಿವೆ.ಕೆಲವು ಪಟ್ಟಭದ್ರರು ಯಾವುದೇ ಸಮಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ತಮಗೆ ಬೇಕಾದ ಮತದಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳಲು ಕುತಂತ್ರ ನಡೆಸುತ್ತಿದ್ದಾರೆ ಎಂದರು.
ಇದನ್ನು ಓದಿದ್ದೀರಾ..? ಚಿಂತಾಮಣಿ | ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಹಾಗೂ ಸಾಲ ಮನ್ನಾಗೆ ಆಗ್ರಹಿಸಿ ರೈತರಿಂದ ತಹಸೀಲ್ದಾರ್‌ಗೆ ಮನವಿ
ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಡಿ.ಟಿ.ಮುನಿಸ್ವಾಮಿ,ಸಿಪಿಐ(ಎಂ) ನಗರ ಘಟಕದ ಅಧ್ಯಕ್ಷ ವಾಲ್ಮೀಕಿ ನಗರದ ಅಶ್ವತ್ಥಪ್ಪ,ಚನ್ನರಾಯಪ್ಪ,ಜಿ.ಕೃಷ್ಣಪ್ಪ ಮತ್ತಿತರರು ಇದ್ದರು.





