ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ – ಬದಲಾಗುತ್ತಿರುವ ಜಗತ್ತಿನಲ್ಲಿ ಭವಿಷ್ಯ ಕಟ್ಟಿಕೊಳ್ಳುವ ದಾರಿ

Date:

ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ಎನ್ನುವುದು ಕೇವಲ ಒಂದು ಕೋರ್ಸ್ ಅಲ್ಲ. ಬದಲಾಗುತ್ತಿರುವ ಮಾಧ್ಯಮ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಒಂದು ಅವಕಾಶ. ಈ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ತಂತ್ರಜ್ಞಾನ ಕಲಿಯಬೇಕು, ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು, ಸಂವಹನ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು, ಕನ್ನಡ ಸೇರಿದಂತೆ ಭಾಷಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಮತ್ತು ನಿರಂತರವಾಗಿ ಹೊಸದನ್ನು ಕಲಿಯುವ ಮನೋಭಾವ ಹೊಂದಬೇಕು.

- Advertisement -

ಮಾಧ್ಯಮ ಕ್ಷೇತ್ರ ಬದಲಾಗುತ್ತಿದೆ. ಅದರೊಂದಿಗೆ ಉದ್ಯೋಗದ ಸ್ವರೂಪವೂ ಬದಲಾಗುತ್ತಿದೆ. ಈ ಬದಲಾವಣೆಯನ್ನು ಅರ್ಥಮಾಡಿಕೊಂಡು ಕೌಶಲ್ಯ ಬೆಳೆಸಿಕೊಳ್ಳುವವರಿಗೆ ಎಲೆಕ್ಟ್ರಾನಿಕ್ ಮೀಡಿಯಾ ಕ್ಷೇತ್ರದಲ್ಲಿ ಅವಕಾಶಗಳ ಕೊರತೆಯಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ಆಯ್ಕೆ ಎನ್ನುವುದು ಅತ್ಯಂತ ಮಹತ್ವದ ನಿರ್ಧಾರ. ಯಾವ ಕೋರ್ಸ್ ಓದಬೇಕು? ಓದಿದ ನಂತರ ಉದ್ಯೋಗ ಸಿಗುತ್ತದೆಯೇ? ಭವಿಷ್ಯದಲ್ಲಿ ಆ ಕ್ಷೇತ್ರಕ್ಕೆ ಬೇಡಿಕೆ ಇರುತ್ತದೆಯೇ? ಉದ್ಯೋಗ ಭದ್ರತೆ ಹೇಗಿರುತ್ತದೆ? ಇಂತಹ ಹಲವು ಪ್ರಶ್ನೆಗಳು ವಿದ್ಯಾರ್ಥಿಗಳು ಮತ್ತು ಪೋಷಕರ ಮನಸ್ಸಿನಲ್ಲಿ ಸಹಜವಾಗಿಯೇ ಮೂಡುತ್ತವೆ.

ಈ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ಇಂದು ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ಒಂದು ಗಮನಾರ್ಹ ಆಯ್ಕೆಯಾಗಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಇದು ಕೇವಲ ಒಂದು ಪದವಿ ಅಲ್ಲ. ತಂತ್ರಜ್ಞಾನ, ಸೃಜನಶೀಲತೆ, ಸಂವಹನ ಮತ್ತು ಉದ್ಯೋಗ ಕೌಶಲ್ಯಗಳನ್ನು ಒಂದೇ ವೇದಿಕೆಯಲ್ಲಿ ಬೆಳೆಸುವ ಶಿಕ್ಷಣ.

ಒಂದು ಕಾಲದಲ್ಲಿ ಮಾಧ್ಯಮ ಎಂದರೆ ಪತ್ರಿಕೆ, ರೇಡಿಯೋ ಮತ್ತು ದೂರದರ್ಶನ. ಆದರೆ ಇಂದು ಮಾಧ್ಯಮದ ವ್ಯಾಪ್ತಿ ಬಹಳ ವಿಸ್ತಾರವಾಗಿದೆ.
ಸ್ಮಾರ್ಟ್‌ಫೋನ್ ನಮ್ಮ ಕೈಯಲ್ಲೇ ಕ್ಯಾಮೆರಾವನ್ನು ತಂದಿದೆ. ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬರನ್ನೂ ಒಂದು ರೀತಿಯಲ್ಲಿ ಕಂಟೆಂಟ್ ಕ್ರಿಯೇಟರ್‌ಗಳನ್ನಾಗಿ ಮಾಡಿವೆ. ಯೂಟ್ಯೂಬ್, ಓಟಿಟಿ, ಪಾಡ್‌ಕಾಸ್ಟ್, ಡಿಜಿಟಲ್ ನ್ಯೂಸ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಶಾರ್ಟ್ ವಿಡಿಯೋ ವೇದಿಕೆಗಳು, ಡಿಜಿಟಲ್ ಜಾಹೀರಾತು ಹಾಗೂ ಕಾರ್ಪೊರೇಟ್ ಕಮ್ಯುನಿಕೇಷನ್‌ಗಳು ಮಾಧ್ಯಮ ಕ್ಷೇತ್ರದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿವೆ. ಈ ಬದಲಾವಣೆಯ ಪರಿಣಾಮವಾಗಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಆದ್ದರಿಂದ ಎಲೆಕ್ಟ್ರಾನಿಕ್ ಮೀಡಿಯಾ ಓದುವ ವಿದ್ಯಾರ್ಥಿಗಳಿಗೆ ಭವಿಷ್ಯ ಕೇವಲ ಟಿವಿ ಚಾನೆಲ್‌ಗಳಲ್ಲಿ ಕೆಲಸ ಮಾಡುವುದಕ್ಕೆ ಸೀಮಿತವಾಗಿಲ್ಲ.

ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ಆಯ್ಕೆ ಮಾಡಿಕೊಳ್ಳಲು ಮೊದಲ ಕಾರಣವೆಂದರೆ ಇದು ಬಹುಮುಖ ಕೌಶಲ್ಯಗಳನ್ನು ಕಲಿಸುವ ಕ್ಷೇತ್ರ.
ಕ್ಯಾಮೆರಾ ನಿರ್ವಹಣೆ, ವಿಡಿಯೋ ಎಡಿಟಿಂಗ್, ಸ್ಕ್ರಿಪ್ಟ್ ರೈಟಿಂಗ್, ನ್ಯೂಸ್ ಪ್ರೊಡಕ್ಷನ್, ಆಡಿಯೋ-ವಿಜುವಲ್ ಪ್ರೊಡಕ್ಷನ್, ಡಿಜಿಟಲ್ ಕಂಟೆಂಟ್, ಗ್ರಾಫಿಕ್ ಡಿಸೈನ್, ಪಾಡ್‌ಕಾಸ್ಟ್, ಮೊಬೈಲ್ ಜರ್ನಲಿಸಂ, ಸಾಮಾಜಿಕ ಮಾಧ್ಯಮ ನಿರ್ವಹಣೆ, ಡಿಜಿಟಲ್ ಮಾರ್ಕೆಟಿಂಗ್, ಡಾಕ್ಯುಮೆಂಟರಿ ನಿರ್ಮಾಣ ಮುಂತಾದ ಹಲವು ಕ್ಷೇತ್ರಗಳ ಪರಿಚಯ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ಅಂದರೆ ಒಂದು ಕೌಶಲ್ಯಕ್ಕೆ ಸೀಮಿತವಾಗದೆ ಮಾಧ್ಯಮದ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬಹುದು.

ಯಾವುದೇ ಒಂದು ಕೋರ್ಸ್‌ನ ಉದ್ಯೋಗಾವಕಾಶವನ್ನು ಅಳೆಯುವಾಗ, “ಈ ಪದವಿ ಪಡೆದರೆ ಯಾವ ಒಂದು ಕೆಲಸ ಸಿಗುತ್ತದೆ?” ಎಂಬ ಪ್ರಶ್ನೆಗಿಂತ, “ಈ ಪದವಿ ನನ್ನ ಮುಂದೆ ಎಷ್ಟು ವೃತ್ತಿ ದಾರಿಗಳನ್ನು ತೆರೆದಿಡುತ್ತದೆ?” ಎಂಬ ಪ್ರಶ್ನೆ ಮುಖ್ಯ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವಿದ್ಯಾರ್ಥಿಗಳ ಮುಂದೆ ಹಲವು ದಾರಿಗಳಿವೆ. ಮಾಧ್ಯಮ ಸಂಸ್ಥೆಗಳಲ್ಲಿ ವಿಡಿಯೋ ಜರ್ನಲಿಸ್ಟ್, ಕ್ಯಾಮೆರಾ ಪರ್ಸನ್, ವಿಡಿಯೋ ಎಡಿಟರ್, ಪ್ರೊಡಕ್ಷನ್ ಎಕ್ಸಿಕ್ಯೂಟಿವ್, ನ್ಯೂಸ್ ಪ್ರೊಡ್ಯೂಸರ್, ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಬಹುದು. ಡಿಜಿಟಲ್ ಕ್ಷೇತ್ರದಲ್ಲಿ ಕಂಟೆಂಟ್ ಕ್ರಿಯೇಟರ್, ಸೋಶಿಯಲ್ ಮೀಡಿಯಾ ಮ್ಯಾನೇಜರ್, ಡಿಜಿಟಲ್ ಕಂಟೆಂಟ್ ಎಡಿಟರ್, ವಿಡಿಯೋ ಕಂಟೆಂಟ್ ಸ್ಪೆಷಲಿಸ್ಟ್, ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಬಹುದು.

msc media journalism landscape

ಕಾರ್ಪೊರೇಟ್ ಕ್ಷೇತ್ರದಲ್ಲಿ ಕಾರ್ಪೊರೇಟ್ ಕಮ್ಯುನಿಕೇಷನ್, ಬ್ರ್ಯಾಂಡ್ ಕಂಟೆಂಟ್, ಆಂತರಿಕ ಸಂವಹನ ಮತ್ತು ಡಿಜಿಟಲ್ ಕಮ್ಯುನಿಕೇಷನ್ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಹುಡುಕಬಹುದು. ಇದರ ಜೊತೆಗೆ ಜಾಹೀರಾತು ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಮಾಧ್ಯಮ ವಿಭಾಗಗಳು, ಎನ್‌ಜಿಒಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಸ್ವತಂತ್ರ ಮಾಧ್ಯಮ ಸಂಸ್ಥೆಗಳಲ್ಲಿಯೂ ಅವಕಾಶಗಳಿವೆ

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಹಜವಾಗಿ ಬರುವ ಪ್ರಶ್ನೆ—“ಈ ಕ್ಷೇತ್ರದಲ್ಲಿ ಉದ್ಯೋಗ ಭದ್ರತೆ ಇದೆಯೇ?” ಇದಕ್ಕೆ ನೇರವಾದ ಉತ್ತರವೆಂದರೆ, ಇಂದಿನ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಯಾವುದೇ ಒಂದು ಪದವಿ ಶಾಶ್ವತ ಉದ್ಯೋಗದ ಖಾತರಿ ನೀಡುವುದಿಲ್ಲ. ಆದರೆ ಬಹುಮುಖ ಕೌಶಲ್ಯ ಹೊಂದಿರುವವರಿಗೆ ಉದ್ಯೋಗದ ಅವಕಾಶಗಳನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಹೆಚ್ಚು. ಇಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಶಿಕ್ಷಣದ ಮಹತ್ವ ಬರುತ್ತದೆ. ಒಬ್ಬ ವಿದ್ಯಾರ್ಥಿಗೆ ಕ್ಯಾಮೆರಾ ಮಾತ್ರ ಗೊತ್ತಿದ್ದರೆ ಅವನ ಅವಕಾಶಗಳು ಒಂದು ಹಂತದವರೆಗೆ ಸೀಮಿತವಾಗಬಹುದು. ಆದರೆ ಕ್ಯಾಮೆರಾ ಜೊತೆಗೆ ಎಡಿಟಿಂಗ್, ಸ್ಕ್ರಿಪ್ಟ್, ಸೋಶಿಯಲ್ ಮೀಡಿಯಾ, ಡಿಜಿಟಲ್ ಕಂಟೆಂಟ್, ಗ್ರಾಫಿಕ್ಸ್ ಮತ್ತು ಎಐ ಸಾಧನಗಳ ಬಳಕೆಯ ಜ್ಞಾನವಿದ್ದರೆ ಆತ ಹಲವು ವಿಭಾಗಗಳಲ್ಲಿ ಕೆಲಸ ಮಾಡಬಲ್ಲ. ಒಂದು ಉದ್ಯೋಗ ಕಳೆದುಕೊಂಡರೂ ಮತ್ತೊಂದು ಕೌಶಲ್ಯದ ಮೂಲಕ ಹೊಸ ಅವಕಾಶ ಹುಡುಕುವ ಸಾಮರ್ಥ್ಯವೇ ಇಂದಿನ ಉದ್ಯೋಗ ಭದ್ರತೆಯ ನಿಜವಾದ ರೂಪ. ಹೀಗಾಗಿ ಎಲೆಕ್ಟ್ರಾನಿಕ್ ಮೀಡಿಯಾ ವಿದ್ಯಾರ್ಥಿಗಳು ʼಒಂದು ಕೆಲಸʼಕ್ಕಾಗಿ ಸಿದ್ಧರಾಗಬಾರದು. ʼಹಲವು ಕೆಲಸಗಳಿಗೆ ಅಗತ್ಯವಾಗುವ ಕೌಶಲ್ಯʼಕ್ಕಾಗಿ ಸಿದ್ಧರಾಗಬೇಕು.

ಇಂದು ವಿದ್ಯಾರ್ಥಿಗಳಲ್ಲಿ ಮತ್ತೊಂದು ಆತಂಕವಿದೆ—ಕೃತಕ ಬುದ್ಧಿಮತ್ತೆ ಮಾಧ್ಯಮ ಕ್ಷೇತ್ರದ ಉದ್ಯೋಗಗಳನ್ನು ಕಡಿಮೆ ಮಾಡಬಹುದೇ? ತಂತ್ರಜ್ಞಾನ ಕೆಲವು ಕೆಲಸಗಳ ಸ್ವರೂಪವನ್ನು ಬದಲಾಯಿಸಬಹುದು. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಮಾನವೀಯ ಸೃಜನಶೀಲತೆ, ಕಥೆ ಹೇಳುವ ಸಾಮರ್ಥ್ಯ, ಸಂದರ್ಶನ ಕೌಶಲ್ಯ, ಸ್ಥಳೀಯ ಅರಿವು, ನೈತಿಕ ನಿರ್ಧಾರ ಮತ್ತು ಪ್ರೇಕ್ಷಕರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಸದಾ ಮಹತ್ವವಿರುತ್ತದೆ. ಹೀಗಾಗಿ ಎಐಯೊಂದಿಗೆ ಸ್ಪರ್ಧಿಸುವ ಬದಲು ಎಐಯನ್ನು ಬಳಸಬಲ್ಲ ಮಾಧ್ಯಮ ವೃತ್ತಿಪರರಾಗುವುದು ಇಂದಿನ ಅಗತ್ಯ.

1200x628.jpg 11zon 2
ಜಾಹಿರಾತು

ಎಐ ಬಳಸಿ ಸಂಶೋಧನೆ, ಸ್ಕ್ರಿಪ್ಟ್‌ನ ಪ್ರಾಥಮಿಕ ಕೆಲಸ, ಉಪಶೀರ್ಷಿಕೆ, ಭಾಷಾಂತರ, ಗ್ರಾಫಿಕ್ಸ್, ಕಂಟೆಂಟ್ ವಿಶ್ಲೇಷಣೆ ಮತ್ತು ಎಡಿಟಿಂಗ್‌ನ ಕೆಲವು ಹಂತಗಳನ್ನು ವೇಗಗೊಳಿಸಬಹುದು. ಆದರೆ ಅಂತಿಮವಾಗಿ ಯಾವ ಕಥೆ ಹೇಳಬೇಕು, ಹೇಗೆ ಹೇಳಬೇಕು ಮತ್ತು ಅದರ ಸಾಮಾಜಿಕ ಪರಿಣಾಮವೇನು ಎಂಬುದನ್ನು ನಿರ್ಧರಿಸುವ ಮಾನವೀಯ ಬುದ್ಧಿವಂತಿಕೆಯೇ ಮುಖ್ಯ.

ಎಂಎಸ್ಸಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತೊಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೋರ್ಸ್ ಮುಗಿದ ನಂತರ ಕೆಲಸ ಹುಡುಕುವುದನ್ನು ಆರಂಭಿಸುವ ಬದಲು, ಕೋರ್ಸ್‌ನ ಮೊದಲ ದಿನದಿಂದಲೇ ಕೆಲಸಕ್ಕೆ ಸಿದ್ಧರಾಗಬೇಕು. ಕಾಲೇಜಿನಲ್ಲಿರುವಾಗಲೇ ತಮ್ಮದೇ ಪೋರ್ಟ್‌ಫೋಲಿಯೊ ನಿರ್ಮಿಸಿಕೊಳ್ಳಬೇಕು.

Course image 130720

ಒಂದು ಡಾಕ್ಯುಮೆಂಟರಿ ಮಾಡಿ. ಒಂದು ಶಾರ್ಟ್ ಫಿಲ್ಮ್ ನಿರ್ಮಿಸಿ. ಸಂದರ್ಶನಗಳ ಸರಣಿ ಮಾಡಿ. ಪಿಡ್‌ಕಾಸ್ಟ್ ಆರಂಭಿಸಿ. ಸಾಮಾಜಿಕ ಸಮಸ್ಯೆಯ ಕುರಿತು ರೀಲ್ಸ್ ಮಾಡಿ. ಯೂಟ್ಯೂಬ್ ಚಾನೆಲ್ ನಡೆಸಿ.ಸ್ಥಳೀಯ ಕಥೆಗಳನ್ನು ದಾಖಲಿಸಿ. ನೀವು ಮಾಡಿದ ಕೆಲಸಗಳೇ ನಾಳೆ ನಿಮ್ಮ ರೆಸ್ಯೂಮೆಗಿಂತ ದೊಡ್ಡ ಪರಿಚಯವಾಗಬಹುದು. ಸಂಸ್ಥೆಗಳು “ನೀವು ಏನು ಓದಿದ್ದೀರಿ?” ಎನ್ನುವುದರ ಜೊತೆಗೆ “ನೀವು ಏನು ಮಾಡಬಲ್ಲಿರಿ?” ಎನ್ನುವುದನ್ನೂ ನೋಡುತ್ತವೆ.

ಕನ್ನಡ ಭಾಷೆಯಲ್ಲಿರುವ ಅಪಾರ ಡಿಜಿಟಲ್ ಅವಕಾಶಗಳನ್ನು ವಿದ್ಯಾರ್ಥಿಗಳು ಗುರುತಿಸಬೇಕಾಗಿದೆ. ಸ್ಥಳೀಯ ಸುದ್ದಿ, ಸಂಸ್ಕೃತಿ, ಕಲೆ, ಸಾಹಿತ್ಯ, ಗ್ರಾಮೀಣ ಬದುಕು, ಪ್ರವಾಸೋದ್ಯಮ, ಕೃಷಿ, ಯುವಜನರ ಸಮಸ್ಯೆಗಳು, ಶಿಕ್ಷಣ, ಉದ್ಯೋಗ, ಸಾಮಾಜಿಕ ವಿಷಯಗಳು—ಇವೆಲ್ಲವೂ ಉತ್ತಮ ಡಿಜಿಟಲ್ ಕಂಟೆಂಟ್‌ಗೆ ದೊಡ್ಡ ಅವಕಾಶಗಳಾಗಿವೆ. ಕನ್ನಡದಲ್ಲಿ ಉತ್ತಮವಾಗಿ ಬರೆಯಬಲ್ಲ, ಮಾತನಾಡಬಲ್ಲ ಮತ್ತು ದೃಶ್ಯ ರೂಪದಲ್ಲಿ ಕಥೆ ಹೇಳಬಲ್ಲ ಯುವಜನರಿಗೆ ಡಿಜಿಟಲ್ ಯುಗದಲ್ಲಿ ವಿಶಿಷ್ಟ ಗುರುತು ನಿರ್ಮಿಸಿಕೊಳ್ಳುವ ಅವಕಾಶವಿದೆ.

ಎಲೆಕ್ಟ್ರಾನಿಕ್ ಮೀಡಿಯಾ ಕ್ಷೇತ್ರದ ಮತ್ತೊಂದು ವಿಶೇಷತೆ ಉದ್ಯಮಶೀಲತೆ. ಒಂದು ಕ್ಯಾಮೆರಾ, ಲ್ಯಾಪ್‌ಟಾಪ್ ಮತ್ತು ಸೃಜನಶೀಲ ತಂಡದೊಂದಿಗೆ ಸಣ್ಣ ಮಟ್ಟದಲ್ಲಿ ವಿಡಿಯೋ ಪ್ರೊಡಕ್ಷನ್ ಆರಂಭಿಸಬಹುದು.
ಡಿಜಿಟಲ್ ಕಂಟೆಂಟ್ ಸಂಸ್ಥೆ ಆರಂಭಿಸಬಹುದು.
ಸೋಶಿಯಲ್ ಮೀಡಿಯಾ ಏಜೆನ್ಸಿ ನಡೆಸಬಹುದು.
ಪಾಡ್‌ಕಾಸ್ಟ್ ಸ್ಟುಡಿಯೋ ಆರಂಭಿಸಬಹುದು.
ಯೂಟ್ಯೂಬ್ ಮಾಧ್ಯಮ ನಿರ್ಮಿಸಬಹುದು.
ಡಾಕ್ಯುಮೆಂಟರಿ ನಿರ್ಮಾಣ ಮಾಡಬಹುದು.
ಹೀಗಾಗಿ ಈ ಕ್ಷೇತ್ರದ ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕಾಗಿ ಕಾಯದೆ ಉದ್ಯೋಗ ಸೃಷ್ಟಿಸುವ ಕನಸನ್ನೂ ಕಾಣಬೇಕು.

ವಿದ್ಯಾರ್ಥಿಗಳ ಭವಿಷ್ಯವನ್ನು ಕೇವಲ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಬಿಟ್ಟುಕೊಡಲಾಗುವುದಿಲ್ಲ. ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯೂ ಅಷ್ಟೇ ಮುಖ್ಯ.
ಪಠ್ಯಕ್ರಮದ ಜೊತೆಗೆ ಪ್ರಾಯೋಗಿಕ ತರಬೇತಿ, ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್, ಲೈವ್ ಪ್ರಾಜೆಕ್ಟ್‌ಗಳು, ಸ್ಟುಡಿಯೋ ಅನುಭವ, ಡಿಜಿಟಲ್ ಮೀಡಿಯಾ ಲ್ಯಾಬ್, ಎಐ ಆಧಾರಿತ ಮಾಧ್ಯಮ ತರಬೇತಿ ಮತ್ತು ಉದ್ಯಮ ತಜ್ಞರೊಂದಿಗೆ ಸಂವಾದಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ವಿದ್ಯಾರ್ಥಿ ಕಾಲೇಜಿನಿಂದ ಹೊರಬರುವಾಗ ಪದವಿ ಪತ್ರದ ಜೊತೆಗೆ ಕನಿಷ್ಠ ಕೆಲವು ಉತ್ತಮ ಮಾಧ್ಯಮ ಪ್ರಾಜೆಕ್ಟ್‌ಗಳನ್ನೂ ಕೈಯಲ್ಲಿ ಹಿಡಿದುಕೊಂಡು ಹೊರಬರಬೇಕು.

ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ಎನ್ನುವುದು ಕೇವಲ ಒಂದು ಕೋರ್ಸ್ ಅಲ್ಲ. ಬದಲಾಗುತ್ತಿರುವ ಮಾಧ್ಯಮ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಒಂದು ಅವಕಾಶ. ಈ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ತಂತ್ರಜ್ಞಾನ ಕಲಿಯಬೇಕು, ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು, ಸಂವಹನ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು, ಕನ್ನಡ ಸೇರಿದಂತೆ ಭಾಷಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಮತ್ತು ನಿರಂತರವಾಗಿ ಹೊಸದನ್ನು ಕಲಿಯುವ ಮನೋಭಾವ ಹೊಂದಬೇಕು.

ಏಕೆಂದರೆ ಭವಿಷ್ಯದಲ್ಲಿ ಒಂದೇ ಕೌಶಲ್ಯ ಹೊಂದಿರುವವರಿಗಿಂತ ಹಲವು ಕೌಶಲ್ಯಗಳನ್ನು ಒಟ್ಟಿಗೆ ಬಳಸಬಲ್ಲ ಮಾಧ್ಯಮ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇರಲಿದೆ. ಮಾಧ್ಯಮ ಬದಲಾಗುತ್ತಿದೆ. ತಂತ್ರಜ್ಞಾನ ಬದಲಾಗುತ್ತಿದೆ. ಉದ್ಯೋಗದ ಸ್ವರೂಪ ಬದಲಾಗುತ್ತಿದೆ. ಆದರೆ ಕಥೆ ಹೇಳುವ ಮಾನವೀಯ ಅಗತ್ಯ ಮಾತ್ರ ಬದಲಾಗುವುದಿಲ್ಲ. ಆ ಕಥೆಯನ್ನು ಸತ್ಯವಾಗಿ, ಸೃಜನಶೀಲವಾಗಿ ಮತ್ತು ತಂತ್ರಜ್ಞಾನದ ನೆರವಿನಿಂದ ಜಗತ್ತಿಗೆ ಹೇಳಬಲ್ಲ ಯುವಜನರೇ ನಾಳೆಯ ಮಾಧ್ಯಮವನ್ನು ಮುನ್ನಡೆಸಲಿದ್ದಾರೆ.

ಆದ್ದರಿಂದ ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾವನ್ನು ಕೇವಲ ಪದವಿ ಪಡೆಯುವ ಕೋರ್ಸ್ ಎಂದು ನೋಡಬೇಡಿ. ನಿಮ್ಮ ಕೌಶಲ್ಯ, ಸೃಜನಶೀಲತೆ ಮತ್ತು ಭವಿಷ್ಯದ ವೃತ್ತಿಜೀವನವನ್ನು ಕಟ್ಟಿಕೊಳ್ಳುವ ವೇದಿಕೆಯಾಗಿ ನೋಡಿ

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...