ಚಿಕ್ಕಬಳ್ಳಾಪುರ | ‘ನಮ್ಮ ಭೂಮಿ ಕೊಡಲು ನಾವು ಸಿದ್ಧ’ ಎಂದ ಗ್ರಾಮಸ್ಥರು; ಭೂ ಮಾಲೀಕರಿಂದ ಅಡ್ಡಿ?

Date:

Advertisements

“ಭೂಸ್ವಾಧೀನಕ್ಕೆ ಭೂಮಿ ಬಿಟ್ಟುಕೊಡಲು ನಾವು ರೆಡಿ. ಎಷ್ಟು ದಿನ ಅಂತ ಕೂಲಿ ಕೆಲಸ ಮಾಡ್ಕೊಂಡ್‌ ಇರ್ಲಿ ನಾವು?… ನಮ್ಮದೇ ಭೂಮಿಗಳನ್ನ ನಮ್ಮ ತಾತ ಮುತ್ತಾತಂದಿರು ಅನ್ನಕ್ಕಾಗಿ ಅತೀ ಕಡಿಮೆ ದುಡ್ಡಿಗೆ ಮಾರಿಕೊಂಡಿದ್ದಾರೆ. ಆ ಭೂಮಿ ಪ್ರಸ್ತುತ ಮೇಲ್ಜಾತಿಯವರ ಕೈಸೇರಿದೆ. ನಮ್ದು ಬರಡು ಭೂಮಿ ಅಲ್ಲಿ ಯಾವ ಬೆಳೆ ಬೆಳೆಯೋದು? ನಮಗೆ ಕೂಲಿಯೇ ಗತಿ.”

“ಇದುವರೆಗೆ ನಮ್ಮೂರಿನ ದಲಿತರು, ಹಿಂದುಳಿದವರು ಕೂಲಿ ಮಾಡ್ಕೊಂಡೇ ಜೀವನ ಮಾಡಿರೋದು. ಕೈಗಾರಿಕೆಗಳಾದರೆ ನಮ್ಮ ಜನರಿಗೆ ಸ್ಥಳೀಯವಾಗಿ ಕೆಲ್ಸ ಸಿಗುತ್ತೆ. ಆರ್ಥಿಕವಾಗಿ ನಮ್‌ ಜನ ಸುಧಾರಣೆ ಆಗ್ತಾರೆ. ಹೆಚ್ಚು ಭೂಮಿ ಇರೋರಿಗೆ ಹಣ ಬೇಕಿಲ್ಲ. ಹಾಗಾಗಿ ಅವರು ಭೂಸ್ವಾಧೀನಕ್ಕೆ ಒಪ್ಪುತ್ತಿಲ್ಲ”

“ಕೇವಲ 10% ಜನರ ಅಭಿಪ್ರಾಯವನ್ನ 100% ಜನರ ಅಭಿಪ್ರಾಯವೆಂಬಂತೆ ಬಿಂಬಿಸುತ್ತಿದ್ದಾರೆ. ಹಣ ಇರೋರು ಜನರನ್ನ ಸೇರಿಸಿಕೊಂಡು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಟಿವಿ ಹಾಗೂ ಪತ್ರಿಕೆಗಳಲ್ಲಿ ಸುದ್ದಿ ಮಾಡಿಸುತ್ತಿದ್ದಾರೆ. ಆದರೆ, ಎಸ್ಸಿ-ಎಸ್ಟಿ, ಹಿಂದುಳಿದ ಸಮುದಾಯದವರಿಗೆ ದುಡ್ಡಿಲ್ಲ. ನಮ್‌ ಅಭಿಪ್ರಾಯ ಸರಕಾರಕ್ಕೆ ತಿಳೀತಿಲ್ಲ. ದಲಿತರು, ಹಿಂದುಳಿದವರು ಭೂಸ್ವಾಧೀನಕ್ಕೆ ಭೂಮಿ ಕೊಡಲು ಸಿದ್ಧರಿದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮದವರಿಗೆ ಉದ್ಯೋಗ ಸಿಗುತ್ತೆ”…ಹಿಂಗಂದಿದ್ದು ಜಂಗಮಕೋಟೆ ಕ್ರಾಸ್‌ ಬಳಿಯ ಯಣ್ಣಂಗೂರು ಗ್ರಾಮದ ರವಿ, ವಿನಯ್ ಮತ್ತು ತಂಡ.

Advertisements

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ, ಹೊಸಪೇಟೆ, ಚೀಮಂಗಲ ಗ್ರಾಪಂ ವ್ಯಾಪ್ತಿಯ ಯಣ್ಣಂಗೂರು, ಬಸವಾಪಟ್ಟಣ, ನಡಿಪಿನಾಯಕನಹಳ್ಳಿ, ತಾದೂರು ಹತ್ತಿಗಾನಹಳ್ಳಿ, ಕೃಷ್ಣಹಳ್ಳಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆ.ಐ.ಎ.ಡಿ.ಬಿ ಭೂಸ್ವಾಧೀನಕ್ಕೆ ಮುಂದಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಇದಕ್ಕಾಗಿ ಪಣ ತೊಟ್ಟಿದ್ದಾರೆ. ಈಗಾಗಲೇ ಡ್ರೋನ್‌ ಸರ್ವೆ ಕಾರ್ಯವನ್ನು ಮುಗಿಸಿ, ಗ್ರಾ.ಪಂ.ಗಳಿಂದ ಆಸ್ತಿಗಳ ವಿವರಗಳನ್ನು ಪ್ರಕಟಿಸಿದ್ದು, ಇದೇ ತಿಂಗಳ ಆ.14ರೊಳಗೆ ರೈತರು ಮತ್ತು ಸಾರ್ವಜನಿಕರಿಂದ ತಂಟೆ ತಗಾದೆಗಳಿಗೆ ಅರ್ಜಿ ಸಲ್ಲಿಸಲು ಸಮಯ ನಿಗದಿಗೊಳಿಸಿದೆ.

ಹೊಸಪೇಟೆ ಗ್ರಾಪಂ ಪ್ರಕಟಣೆ 1
ಶಿಡ್ಲಘಟ್ಟ ತಾಲೂಕು ಹೊಸಪೇಟೆ ಗ್ರಾಪಂ ಪ್ರಕಟಣೆಯ ಪ್ರತಿ

“ನಮ್ಮದು 8 ಎಕರೆ ಭೂಮಿ ಇದೆ. ಆ ಜಾಗದಲ್ಲಿ ಬೆಳೆ ಬೆಳೆಯಲಾಗುತ್ತಿಲ್ಲ. ಸರಕಾರ ಭೂಸ್ವಾಧೀನಪಡಿಸಿಕೊಂಡರೆ ನಮಗೂ ಸ್ವಲ್ಪ ಹಣ ಬರುತ್ತೆ. ಊರಿನ ಸಮೀಪ ಕೈಗಾರಿಕೆಗಳಾದರೆ ಸುತ್ತಮುತ್ತಲಿನವರಿಗೆ ಅನುಕೂಲವಾಗುತ್ತೆ. ಕೆಲವರು ಮಾತ್ರ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಹಿಂದುಳಿದವರಿಗೆ ಅನಾನುಕೂಲವಾಗುತ್ತಿದೆ” ಎನ್ನುತ್ತಾರೆ ಯಣ್ಣಂಗೂರು ಗ್ರಾಮದ ಹರೀಶ್.‌

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಹೆಚ್ಚು ಭೂಮಿಯನ್ನು ಹೊಂದಿರುವ ಕೆಲ ಭೂ ಮಾಲೀಕರು ಭೂಸ್ವಾಧೀನಕ್ಕೆ ಅಡ್ಡಿಪಡಿಸುತ್ತಿದ್ದು, ಭೂಸ್ವಾಧೀನ ಕೈಬಿಡುವಂತೆ ಸಚಿವರ ಮೊರೆ ಹೋಗುತ್ತಿದ್ದಾರೆ.‌ ನಡಿಪಿನಾಯಕನಹಳ್ಳಿ ಭಾಗದ ಕೆಲ ರೈತರು ಪ್ರಾಣ ಕೊಡುತ್ತೇವೆ ಭೂಮಿ ಕೊಡುವುದಿಲ್ಲ ಎಂದು ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಜಿಲ್ಲೆಯ ಶಿಡ್ಲಘಟ್ಟ, ಕೈವಾರ ಬಳಿಯ ಮಸ್ತೇನಹಳ್ಳಿ, ಗೌರಿಬಿದನೂರು ಸೇರಿದಂತೆ ಹಲವೆಡೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಇದುವರೆಗೆ ಆ ಭೂಮಿ ಖಾಲಿಯೇ ಉಳಿದಿದೆ. ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಖಾಲಿ ಭೂಮಿಯನ್ನು ಇಟ್ಟುಕೊಂಡು ರೈತರ ಕೃಷಿ ಭೂಮಿಯನ್ನು ಕಬಳಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂಬುದು ಕೆಲ ಮಂದಿ ರೈತರ ಅಭಿಪ್ರಾಯವಾಗಿದೆ.

ಶೇ.70ರಷ್ಟು ರೈತರು ಬೇಡ ಎಂದರೆ ಕೈ ಬಿಡುತ್ತೇವೆ : ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಇತ್ತೀಚೆಗಷ್ಟೇ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಂಗಮಕೋಟೆ ಬೆಂಗಳೂರಿಗೆ ಹತ್ತಿರವಾಗಿದ್ದು, ದೇವನಹಳ್ಳಿ ವಿಮಾನ ನಿಲ್ದಾಣಕ್ಕೂ ಸಮೀಪದಲ್ಲಿದೆ. ಇಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಪ್ರಶಸ್ತವಾಗಿದೆಯೆಂದು 2238 ಎಕರೆ ಜಾಗವನ್ನು ಗುರುತಿಸಲಾಗಿದೆ. ಶೇ.70 ರಷ್ಟು ರೈತರು ಬೇಡವೆಂದರೆ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲಾಗುವುದು ಎಂದು ಈಗಾಗಲೇ ತಿಳಿಸಿದ್ದಾರೆ.

ಕೆ.ಐ.ಎ.ಡಿ.ಬಿ ಕಳ್ಳರ ಸಂತೆ : ಕೆ.ಐ.ಎ.ಡಿ.ಬಿ ಭೂಸ್ವಾಧೀನ ಪ್ರಕ್ರಿಯೆ ಒಂದು ರೀತಿ ಕಳ್ಳರ ಸಂತೆ ಇದ್ದಂತೆ. ಇದು ರೈತವಿರೋಧಿ ಪ್ರಕ್ರಿಯೆ. ಭೂಮಿಯನ್ನ ಕದಿಯಲಿಕ್ಕೆ ಬರುವ ಖದೀಮರು ಅವರು. ಜಂಗಮಕೋಟೆ ವ್ಯಾಪ್ತಿಯ ಭೂಸ್ವಾಧೀನವನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆ ತಾತ್ಕಾಲಿಕವಾಗಿ ತಡೆಹಿಡಿಯುತ್ತೇವೆ. ರೈತರೊಂದಿಗೆ ಸಭೆ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆ.ಐ.ಎ.ಡಿ.ಬಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ರೈತ ಮುಖಂಡ ಭಕ್ತರಹಳ್ಳಿ ಭೈರೇಗೌಡ ತಿಳಿಸಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭರ್ಜಿಯ ಕೊನೆಗೆ ಪ್ರೀತಿಯ ಮುಳ್ಳು ಚುಚ್ಚಿದ ತಾಯಂದಿರು – ಆಲಿಸಲಿ ‘ಮಕ್ಕಳು’

ಒಟ್ಟಾರೆಯಾಗಿ, ಜಂಗಮಕೋಟೆ ಭೂಸ್ವಾಧೀನ ಪ್ರಕ್ರಿಯೆಗೆ ರೈತರಲ್ಲೇ ಭಿನ್ನಸ್ವರ ಕೇಳಿಬರುತ್ತಿದ್ದು, ಕೆಲ ಮಂದಿ ಭೂಮಾಲೀಕರ ಹಿತಕ್ಕಾಗಿ, ಹಲವು ಮಂದಿ ರೈತರ ಅಹಿತ ಬಯಸುತ್ತಿರುವುದು ಸುಳ್ಳಾಗಿ ಉಳಿದಿಲ್ಲ. ಈ ನಿಟ್ಟಿನಲ್ಲಿ ಸರಕಾರ ಕೆಲ ಪ್ರಭಾವಿಗಳ ಮಾತನ್ನಷ್ಟೇ ಕೇಳದೇ, ಸಂಬಂಧಪಟ್ಟ ಎಲ್ಲ ರೈತರಿಂದಲೂ ಅಭಿಪ್ರಾಯ ಸಂಗ್ರಹಿಸಿ, ಭೂಮಿ ಕೊಡಲು ಸಿದ್ಧರಿರುವ ರೈತರಿಂದ ಭೂಮಿ ಪಡೆದು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿದೆ.

ವಿಜಯಕುಮಾರ್
ವಿಜಯ ಕುಮಾರ್ ಗಜ್ಜರಹಳ್ಳಿ
+ posts

ಪತ್ರಕರ್ತ, ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿಜಯ ಕುಮಾರ್ ಗಜ್ಜರಹಳ್ಳಿ
ವಿಜಯ ಕುಮಾರ್ ಗಜ್ಜರಹಳ್ಳಿ
ಪತ್ರಕರ್ತ, ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

Download Eedina App Android / iOS

X