ಚಿಕ್ಕಮಗಳೂರು ಜಿಲ್ಲೆಯ ಆಲೂರು ಹೋಬಳಿ ಮಗ್ಗೆ ಗ್ರಾಮದ ಯುವತಿ ಕಾವ್ಯ(22) ಹಾಗೂ ಚಿಕ್ಕಮಗಳೂರು ತಾಲೂಕಿನ ಕೂದುವಳ್ಳಿ ಗ್ರಾಮದ ಯುವಕ ಪುರುಷೋತ್ತಮ(27) ಇಬ್ಬರೂ ಕೆಲ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಕೂಡ ತಮ್ಮ ಪ್ರೀತಿಯನ್ನು ಮನೆಯವರ ಗಮನಕ್ಕೆ ತಂದಿದ್ದಾರೆ. ಯುವತಿಯ ಮನೆಯಲ್ಲಿ ಹುಡುಗ ಪರಿಶಿಷ್ಟ ಪಂಗಡಕ್ಕೆ ಸೇರಿದವನು ಎಂದು ಪ್ರೀತಿಯನ್ನು ನಿರಾಕರಿಸಿದ್ದಾರೆ.
ಮದುವೆ ಮಾಡಿಕೊಳ್ಳಲು ಜಾತಿ ಅಡ್ಡ ಬಂದ ಕಾರಣಕ್ಕೆ ತಮ್ಮ ಪ್ರೀತಿ ಬಲಿ ಕೊಡಲು ಸಾಧ್ಯವಿಲ್ಲದ ಜೋಡಿ, ಜಿಲ್ಲೆಯ ಭೀಮ್ ಆರ್ಮಿ ಸಂಘಟನೆಯವರನ್ನ ಭೇಟಿ ಮಾಡಿ, ತಮ್ಮ ಸಂಕಷ್ಟವನ್ನು ಹೇಳಿ, ಒಂದುಗೂಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರಿನ ಬೌದ್ಧ ವಿಹಾರದಲ್ಲಿ ಭಾನುವಾರ ಭೀಮ್ ಆರ್ಮಿಯ ಸಂಘಟನೆಯವರು ಸೇರಿ ಕಾವ್ಯ ಮತ್ತು ಪುರುಷೋತ್ತಮ್ ಅವರ ಸಂಪೂರ್ಣ ಒಪ್ಪಿಗೆ ನಂತರ ವಿವಾಹ ಮಾಡಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಮುಮ್ತಾಝ್ ಅಲಿ ಬ್ಲ್ಯಾಕ್‌ಮೇಲ್ ಪ್ರಕರಣ : ಸಮಗ್ರ ತನಿಖೆಗೆ ಹೋರಾಟ ಸಮಿತಿ ಆಗ್ರಹ
ಈ ಸರಳ ಕಾರ್ಯಕ್ರಮದಲ್ಲಿ ಭೀಮ್ ಆರ್ಮಿಯ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಗಿರೀಶ್ ಆಲ್ದೂರು, ಜಿಲ್ಲಾ ಗೌರವಾಧ್ಯಕ್ಷರಾದ ಹೊನ್ನೇಶ್, ಜಿಲ್ಲಾ ಉಪಾಧ್ಯಕ್ಷ ಸತೀಶ್ ಹೆಚ್ ಆರ್, ಯುವ ಘಟಕದ ಜಿಲ್ಲಾಧ್ಯಕ್ಷರಾದ ಪ್ರವೀಣ್, ಪ,ಜಾತಿ ಪ,ಪಂಗಡದ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ಲಕ್ಷ್ಮಣ್ ಹುಣಸೇಮಕ್ಕಿ, ರವಿ ಗೋವಿನಹಳ್ಳಿ, ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ದಿಲೀಪ್, ಕುಮಾರ್, ನಂದನ್, ಕೀರ್ತಿ, ಭೀಮ್ ಆರ್ಮಿಯ ಸದಸ್ಯರೆಲ್ಲರೂ ಉಪಸ್ಥಿತರಿದ್ದು, ಯುವ ಜೋಡಿಗೆ ಶುಭಕೋರಿದರು.

Good work aadru nivu hudagi parents oppisalikke try madbekittu
ಒಳ್ಳೆ ಕೆಲಸ ಆದರೂ ಪೇರೆಂಟ್ಸ್ ,ಒಪ್ಪಿಗೆ ಪಡಿಸಬೇಕ್ಕಾಗಿತ್ತು.ಹೆತ್ತವರ ಹೊಟ್ಟೆ ಉರಿ ಬಿಟ್ಟು ಹೋಗುದಿಲ್ಲ.ಇನ್ನಾದರೂ ಪೇರೆಂಟ್ಸ್ ಒಪ್ಪಿಸಿ.
ಮದುವೆ ಮಾಡಿಸಿದ ಹಿರಿಯರು ತಮ್ಮ ಸಂಬಂಧಿ ಗಳು ಆದರೆ ಹೀಗೆ ಮದುವೆ ಮಾಡಿಸ್ತಿದ್ದೀರಾ?
Not ok
Preeti prema antha nale nimma makale bidige bidre appa amma adavru nivu hortira mankri..
ನಿಮ್ಮ ಮನೆ ಮಕ್ಕಳನ್ನ ಮದುವೆ ಮಾಡಿಸಿದ್ರೆ ಅವಾಗ ಗೊತ್ತಾಗುತ್ತೆ ಹೆತ್ತವರ ನೋವು ಇಂತ ತೆವಲಿಗೆ ಬಿದ್ದು ಪ್ರೀತಿ ಮಾಡಿ 6 ತಿಂಗಳು ಆದ್ಮೇಲೆ ಕಿತ್ತಾಡಿ ಅವಳು ಮನೆಗೇ ಹೋದ್ರೆ ನಿಮ್ಮ ಭೀಮ್ ಆರ್ಮಿ ಏನ್ ಮಾಡ್ತೀರಿ ಹೇಳಿ ಅವರ ತಂದೆ ತಾಯಿ ಯ ಮರ್ಯಾದೆ ನೆಮ್ಮದಿ ತಂದು ಕೊಡ್ತಿರ?