ಶೇವಿಂಗ್ ಹಾಗೂ ಕಟ್ಟಿಂಗ್ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ.
ಕಳಸ ತಾಲೂಕಿನ ಹೊಸಮಠ ಬಾಲ್ಗಲ್ ಸಂಸೆ ಗ್ರಾಮದ ಕೃಷ್ಣೇಗೌಡ (74) ವರ್ಷದವರಾಗಿದ್ದು, ಕಳೆದ ಆಗಸ್ಟ್ 15ರಿಂದ ಕಾಣೆಯಾಗಿದ್ದಾರೆ.
ಇವರಿಗೆ 4 ಜನ ಮಕ್ಕಳಿದ್ದು, ಎಲ್ಲರೂ ಬೇರೆ ಬೇರೆ ಮನೆ ಮಾಡಿಕೊಂಡು ವಾಸವಿದ್ದಾರೆ. ಕೃಷ್ಣೇಗೌಡರ ಮಗನಾದ ರಘುನಾಥರವರ ಜೊತೆಯಲ್ಲಿ ವಾಸವಿದ್ದರು. ಆಗಸ್ಟ್ 15ರಂದು ಬೆಳಗ್ಗೆ 09.30 ಗಂಟೆಗೆ ಸಂಸೆಗೆ ಹೋಗಿ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿಕೊಂಡು ಬರುತ್ತೇನೆ ಎಂದು ಮನೆಯಲ್ಲಿ ತಿಳಿಸಿ ಹೊರಗೆ ಹೋಗಿದ್ದರು. ಆದರೆ ಈವರೆಗೆ ಮನೆಗೆ ಹಿಂದಿರುಗಿ ಬಂದಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ರಸ್ತೆಯಲ್ಲಿ ಓಡಾಡಿರುವು ದೃಶ್ಯವು ಸ್ಥಳೀಯ ಅಂಗಡಿಗಳಲ್ಲಿ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂಸೆಯಲ್ಲಿ ಕ್ಷೌರ ಮಾಡಿಸಿಕೊಂಡು ನಂತರ ಮಹಾವೀರ (ಬಾಳೆಕಾಯಿ) ರವರ ಜೀಪಿನಲ್ಲಿ ಕಳಸಕ್ಕೆ ಹೋಗಿ ಅರುಣ ಕೂಲ್ ಡ್ರಿಂಕ್ಸ್ ಹತ್ತಿರ ಇಳಿದುಕೊಂಡಿದ್ದಾಗಿ ಆಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಾಪಸ್ಸು ಮನೆಗೆ ಬಾರದ ಕಾರಣ ಕೃಷ್ಣೇಗೌಡರ ಸಂಬಂಧಿಕರ ಮನೆಗಳಲ್ಲಿ ಹಾಗೂ ಕಳಸ, ಹೊರನಾಡು, ಕಾರ್‌ಗದ್ದೆ, ಕೆಳಕೋಡುಗಳಲ್ಲಿ ಹುಡುಕಾಡಿದರು ಎಲ್ಲಿಯೂ ಸಿಗದ ಕಾರಣ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಣೆಯಾದ ಕೃಷ್ಣೇಗೌಡರು ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಮತ್ತು ಮೀಸೆ ಹೊಂದಿದ್ದಾರೆ. ಸುಮಾರು 5.2 ಅಡಿ ಎತ್ತರ ಇರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಇವರು ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಅಂಗಿ ಮತ್ತು ಪಂಚೆ ಧರಿಸಿರುತ್ತಾರೆ ಎಂದು ಕುದುರೆಮುಖ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಪ್ರಸನ್ನವರ ಜೊತೆ ಗೂಡಿ ಮರಸಣಿಗೆ, ಹೀರೆಬೈಲ್ ಕಡೆಗಳಲ್ಲಿ ಹುಡುಕಾಡಿದರೂ ಎಲ್ಲಿಯೂ ಯಾವುದು ಸುಳಿವು ಸಿಕ್ಕಿಲ್ಲ. ಯಾರಾದರೂ ಕೃಷ್ಣೇಗೌಡರನ್ನು ನೋಡಿದರೆ ಕೂಡಲೇ ಮಾಹಿತಿ ತಿಳಿಸಿ ಅಥವಾ ಕುದುರೆಮುಖ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಎಂದು ನಾಪತ್ತೆಯಾಗಿರುವ ಕೃಷ್ಣೇಗೌಡ ಮಗ ಅರುಣ್ ಮಾಧ್ಯಮಗಳ ಮೂಲಕ ಕೇಳಿಕೊಂಡಿದ್ದಾರೆ.
ಒಂದು ವೇಳೆ ಕಂಡಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
ಅರುಣ್ 6360711815
ಅಶೋಕ್ 8660779327
