ಚಿತ್ರದುರ್ಗದ ಮುರುಘಾ ರಾಜೇಂದ್ರ ನಗರ ಶಾಲೆಯಲ್ಲಿ ವಿಶೇಷವಾಗಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸುಂದರವಾದ ಭಾರತದ ಭೂಪಟವನ್ನು ಬಿಡಿಸಲಾಗಿತ್ತು. ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್‌ಡಿಎಂ ಅಧ್ಯಕ್ಷ ಸತೀಶ್ ನೆರವೇರಿಸಿದರು. ನಂತರ ನಗರದ ಮುಖ್ಯ ಬೀದಿಯಲ್ಲಿ ಸ್ವಾತಂತ್ಯ ದಿನಾಚರಣೆಯ ಘೋಷ ವಾಕ್ಯದೊಂದಿಗೆ ಸ್ವಾತಂತ್ಯ ಗೀತೆಗಳನ್ನು ಹಾಡುತ್ತಾ ಊರಿನ ಮುಖ್ಯ ಬೀದಿಗಳಲ್ಲಿ ಪೋಷಕರು, ವಿದ್ಯಾರ್ಥಿಗಳೆಲ್ಲರೂ ಮೆರವಣಿಗೆ ನಡೆಸಿದರು.
ಬಳಿಕ ಶಾಲಾ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಯಿತು. ನಗರದ ಎಲ್ಲಾ ಸಾರ್ವಜನಿಕರು ಶಾಲೆಯ ಆವರಣದಲ್ಲಿ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು.

ಈ ವೇಳೆ ಮಾತನಾಡಿದ ಶಾಲಾ ಮೇಲುಸ್ತುವಾರಿ ಮತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷ ಸತೀಶ್, ಎರಡು ನೂರು ವರ್ಷಗಳ ಕಾಲ ಆಳಿದ ಬ್ರಿಟಿಷರು ದೇಶದಿಂದ ಹೊರಹೋಗಲು ಮತ್ತು ಭಾರತ ದೇಶಕ್ಕೆ ಸ್ವಾತಂತ್ರ್ಯ ನೀಡಲು ಅನೇಕ ಕ್ರಾಂತಿಕಾರಿ ಮತ್ತು ಅಹಿಂಸಾ ಮಾರ್ಗದ ಸ್ವತಂತ್ರ ಹೋರಾಟಗಾರರು ಕಾರಣರಾಗಿದ್ದಾರೆ. ಅವರೆಲ್ಲರ ಹೋರಾಟದ ಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಅವರಿಂದಾಗಿ ಭಾರತ ದಾಸ್ಯದ ಸಂಕೋಲೆಯಿಂದ ಹೊರಬಂದಿದ್ದು, ಇಂದು ಜಗತ್ತಿನ ಪ್ರಮುಖ ಶಕ್ತಿಯಾಗಿ ಮುಂದುವರೆದಿದೆ. ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಎಲ್ಲರೂ ಸೇರಿ ಕೈ ಜೋಡಿಸಬೇಕಿದೆ. ತಮ್ಮದೇ ಆದ ಕರ್ತವ್ಯಗಳನ್ನು ನಿಭಾಯಿಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದವರು, ಅಡುಗೆ ಸಿಬ್ಬಂದಿ ಮತ್ತು ಬೋಧನಾ ಪದವಿಯ ಪ್ರಶಿಕ್ಷಣಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಭಾಗವಹಿಸಿದ್ದರು.
ವರದಿ: ಶಂಕರ್, ಸಿಟಿಝನ್ ಜರ್ನಲಿಸ್ಟ್
