ಮಂಗಳೂರು | ತನ್ನ ವರ್ಗಾವಣೆ ಆದೇಶಕ್ಕೂ ಮುನ್ನ ಏಳು ಪೊಲೀಸರನ್ನು ಬೇರೆ ಠಾಣೆಗಳಿಗೆ ವರ್ಗಾಯಿಸಿದ್ದ ಕಮಿಷನರ್ ಅಗರ್ವಾಲ್!

Date:

Advertisements

ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆ, ಇತ್ತೀಚಿನ ಬೆಳವಣಿಗೆ ಮತ್ತು ರಾಜ್ಯ ಸರ್ಕಾರದ ಗೃಹ ಇಲಾಖೆಯ ವೈಫಲ್ಯದ ಬಗ್ಗೆ ತೀವ್ರ ಚರ್ಚೆಯಾದ ನಂತರ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ರಾಜ್ಯ ಸರ್ಕಾರವು ಗುರುವಾರ ವರ್ಗಾವಣೆಗೊಳಿಸಿ, ಆದೇಶ ಹೊರಡಿಸಿತ್ತು.

ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್‌ ಆಗಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಅರುಣ್ ಕೆ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿತ್ತು.

ಈ ಬೆಳವಣಿಗೆಯ ನಡುವೆಯೇ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಏಳು ಮಂದಿ ಹೆಡ್ ಕಾನ್‌ಸ್ಟೇಬಲ್‌ಗಳನ್ನು ನಿರ್ಗಮನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗುರುವಾರ ರಾತ್ರಿ ವರ್ಗಾವಣೆಗೊಳಿಸಿರುವ ಸಂಗತಿ ಬೆಳಕಿಗೆ ಬಂದಿದೆ.

Advertisements

ಕಂಕನಾಡಿ ನಗರ ಠಾಣೆಯ ಪ್ರೀತೇಶ್‌ರನ್ನು ಸಂಚಾರ ದಕ್ಷಿಣ ಠಾಣೆಗೆ, ಕೊಣಾಜೆ ಠಾಣೆಯ ರಾಜೇಶ್ ಕೆ.ಎನ್.ರನ್ನು ಕಂಕನಾಡಿ ನಗರ ಠಾಣೆಗೆ, ಸೆನ್ ಠಾಣೆಯ ಸತೀಶ್ ಎಂ ಮತ್ತು ರಾಜಾರಾಂ ಅವರನ್ನು ಸಿಸಿಬಿ ಠಾಣೆಗೆ, ಸಂಚಾರ ದಕ್ಷಿಣ ಠಾಣೆಯ ನಾಗರಾಜ ಮಲ್ಲಿಕಟ್ಟ ಅವರನ್ನು ಸಂಚಾರ ಪೂರ್ವ ಠಾಣೆಗೆ, ಸಿಸಿಬಿ ಠಾಣೆಯಲ್ಲಿದ್ದ ಸುಧೀರ್ ಕುಮಾರ್ ಮತ್ತು ಭೀಮಪ್ಪ ಸಿದ್ದಪ್ಪ ಉಪ್ಪರ್ ಅವರನ್ನು ಸೆನ್ ಠಾಣೆಗೆ ವರ್ಗಾಯಿಸಲಾಗಿದೆ.

ಈ ವರ್ಗಾವಣೆ ಆದೇಶವು ಕಮಿಷನರ್ ಅನುಪಮ್ ಅಗರ್ವಾಲ್ ಅವರು ತನ್ನ ವರ್ಗಾವಣೆ ಆದೇಶ ಬರುವುದಕ್ಕೂ ಮುನ್ನ ಮಾಡಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿರುವ ಕಾಂಗ್ರೆಸ್ ಕಾರ್ಯಕರ್ತ ಸುನಿಲ್ ಕುಮಾರ್ ಬಜಿಲಕೇರಿ, “ತರಾತುರಿಯಲ್ಲಿ ಯಾಕಾಗಿ 7 ಜನರನ್ನ ವರ್ಗಾವಣೆ ಮಾಡಿದ್ದಾರೆ. ಯಾವುದೇ ಕೌನ್ಸೆಲಿಂಗ್ ಇಲ್ಲದೆ ವರ್ಗಾವಣೆ ಮಾಡಲು ಮೂಲ ಕಾರಣ ಏನು?” ಎಂದು ಪ್ರಶ್ನಿಸಿದ್ದಾರೆ.

“ರಾಜೇಶ್ ಎಂಬ ವ್ಯಕ್ತಿ ಮಂಗಳೂರು ಕಂಕನಾಡಿನ ಠಾಣೆಯಲ್ಲಿ ಆರು ವರ್ಷ ಕೆಲಸ ಮಾಡಿ ಅಲ್ಲಿಂದ ಕೊಣಾಜೆ ಠಾಣೆಗೆ ವರ್ಗಾವಣೆಗೊಂಡ ದಿನವೇ ಓಡಿಡಿಯಲ್ಲಿ ಕಂಕನಾಡಿಗೆ ಬಂದು, ಅಲ್ಲಿಂದ ಈಗ ಮತ್ತೆ ಅದೇ ಠಾಣೆಗೆ ಕಮಿಷನರ್ ಅವರಿಂದ ಪಕ್ಕಾ ಆರ್ಡರ್ ಮಾಡಿಸಿದ್ದಾರೆ, ಅಕ್ರಮ ವ್ಯವಹಾರ ಮಾಡುವವರ ಜೊತೆ ಒಳ್ಳೆಯ ಸಂಬಂಧದಿಂದ ಇದ್ದಾರೆಂಬ ಕಾರಣದಿಂದ ಕಮಿಷನರ್ ಇವರಿಗೆ ಉಪಕಾರ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

city police mangalore
ಅನುಪಮ್ ಅಗರ್ವಾಲ್ ಅವರಿಂದ ಅಧಿಕಾರ ಸ್ವೀಕರಿಸಿದ ಸುಧೀರ್ ಕುಮಾರ್ ರೆಡ್ಡಿ

“ಕೇವಲ ಏಳು ಜನರನ್ನು, ಇದೆಲ್ಲ ಬಿಜೆಪಿ ನಾಯಕರ ಸೂಚನೆಯಲ್ಲಿ ಮಾಡಿರುವಂತದ್ದು ಎಂಬುದು ನಮಗೆ ಕಾಣುತ್ತಿದೆ. ಹೊಸ ಕಮಿಷನರ್ ಅವರು ಈ ಆದೇಶವನ್ನು ರದ್ದು ಮಾಡುತ್ತಾರೆಂಬ ಭರವಸೆ ಇದೆ. ನ್ಯಾಯಯುತವಾಗಿ ಸುಮಾರು 250 ಜನರಲ್ ಲಿಸ್ಟ್‌ ನಲ್ಲಿ ಕೌನ್ಸಿಲಿಂಗ್ ಮಾಡಿ ಕಾನೂನು ಬದ್ಧವಾಗಿ ವರ್ಗಾವಣೆ ಮಾಡುತ್ತಾರೆಂಬ ನಂಬಿಕೆ ಇದೆ. ರಾತ್ರಿ 8 ಗಂಟೆ 11 ನಿಮಿಷಕ್ಕೆ ವರ್ಗಾವಣೆಗೊಂಡು ಹೋಗುವಾಗ ಆರ್ಡರ್ ಮಾಡಿದ್ದರ ಉದ್ದೇಶ ಏನಿರಬಹುದು? ಸುಧೀರ್ ಕುಮಾರ್ ರೆಡ್ಡಿ ಅಂತಹ ಖಡಕ್ ಅಧಿಕಾರಿ ಖಂಡಿತವಾಗಿಯೂ ಇಂತ ಆರ್ಡರ್ ರದ್ದು ಮಾಡುತ್ತಾರೆ ಎಂಬ ಭರವಸೆ ಇದೆ. ಅನೇಕ ಜನ ಇದರ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

order copy
ಕಮಿಷನರ್ ಆದೇಶದ ಪ್ರತಿ & ಸುನಿಲ್ ಕುಮಾರ್ ಬಜಿಲಕೇರಿ(ಒಳಚಿತ್ರದಲ್ಲಿ)

ಮುಂದುವರಿದರು, “ಏಕಾಏಕಿಯಾಗಿ ಈ ರೀತಿ ಮಾಡಿರುವುದು ತಪ್ಪು. ಇದನ್ನು ಮಾಡಿಸಿದ ವ್ಯಕ್ತಿ ಪಕ್ಕಾ ಬಿಜೆಪಿಯವರು ಎಂಬ ಮಾಹಿತಿ ನಮಗಿದೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಸರ್ಕಾರದ ಗಮನಕ್ಕೆ ತರದೇ ಬಿಜೆಪಿ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಕೊನೆಯ ಘಳಿಗೆಯಲ್ಲಿ ಮಾಡಿದ ವರ್ಗಾವಣೆಯನ್ನು ರದ್ದು ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸುನಿಲ್ ಕುಮಾರ್ ಬಜಿಲಕೇರಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದುನೋಡಬೇಕಿದೆ.

ಅಧಿಕಾರ ಸ್ವೀಕರಿಸಿಕೊಂಡ ನೂತನ ಕಮಿಷನರ್ ಹಾಗೂ ಎಸ್‌ಪಿ

ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್‌ ಆಗಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಅಧೀಕ್ಷಕರಾಗಿ ಡಾ. ಅರುಣ್‌ ಕೆ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

arun
ನಿರ್ಗಮನ ಎಸ್‌ಪಿ ಯತೀಶ್ ಅವರಿಂದ ಅಧಿಕಾರ ಸ್ವೀಕರಿಸಿದ ಡಾ. ಅರುಣ್ ಕೆ
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X