ಎರಡು ಸಾವಿರ ವರ್ಷಗಳ ಹಿಂದೆಯೇ ಛಂದಸ್ಸು ರಚನೆ : ರಾಘವೇಂದ್ರ ಪ್ರಸಾದ್‌ ಲಕ್ಷ್ಮಣ್

Date:

Advertisements

ಎರಡು ಸಾವಿರ ವರ್ಷಗಳ ಹಿಂದೆ ನಮ್ಮ ಶಾಸ್ತ್ರಜ್ಞರು1 ಮತ್ತು0 ಅಂಕಿಗಳನ್ನು ಬಳಸಿಕೊಂಡು ಎಡದಿಂದ ಬಲಕ್ಕೆ ಗುಣಾತ್ಮಕತೆ ಮಾಡುವ ಮೂಲಕ ಛಂದಸ್ಸನ್ನು ರಚಿಸಿದರು ಎಂದು ಜರ್ಮನಿಯ ಮ್ಯೂನಿಚ್‌ ನಸ್ಟೆ ಸ್‌ ಅಥಾರಿಟಿಯ ಏರೋಸ್ಪೇಸ್ ಪ್ರೊಫೆಷನಲ್‌ ರಾಘವೇಂದ್ರ ಪ್ರಸಾದ್‌ ಲಕ್ಷ್ಮಣ್ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನಕೇಂದ್ರವು ಮಂಗಳವಾರ ಆಯೋಜಿಸಿದ್ದ ‘ಶಾಸ್ತ್ರ ಜ್ಞಾನಕ್ಕೆ ತಂತ್ರಜ್ಞಾನದ ಚೌಕಟ್ಟು: ತಂತ್ರಾಂಶದಿಂದ ಕನ್ನಡ ವ್ಯಾಕರಣ ಹಾಗೂ ಛಂದಸ್ಸಿನ ವಿಶ್ಲೇಷಣೆ’ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬ್ರಾಹ್ಮಿತಂತ್ರಾಂಶವನ್ನು’ ಬಳಸಿಕೊಂಡು ‘ವ್ಯಾಕರಣತಂತ್ರಾಃಶ’ ಮತ್ತು ‘ಕವನ’ ಎಂಬ ಎರಡುತಂತ್ರಾಂಶವನ್ನು ಕನ್ನಡ ಭಾಷೆಯಲ್ಲಿಯೇ ಸೃಷ್ಟಿಮಾಡಲಾಗಿದೆ. ಈ ಎರಡುತಂತ್ರಾಂಶಗಳನ್ನು ಬಳಸಿಕೊಂಡು ಕನ್ನಡದಲ್ಲಿ ಛಂದಸ್ಸು, ಸಂಧಿ, ವ್ಯಾಕರಣ, ಅಲಂಕಾರಗಳನ್ನು ಹಾಗೂ ಕರ್ಣಾಟಕ ಸಂಗೀತದರಾಗವನ್ನು ಸೃಷ್ಟಿ ಮಾಡಬಹುದಾಗಿದೆ ಎಂದು ಹೇಳಿದರು.

ಕವನ ತಂತ್ರಾಂಶವನ್ನು ಬಳಸಿಕೊಂಡು ತತ್ಸಮ, ವೈದಿಕ ಹಾಗೂ ಮಾತ್ರೆ ಛಂದಸ್ಸುಗಳ ಜೊತೆಗೆ ಹೊಸ ಛಂದಸ್ಸುಗಳನ್ನು ಸೃಷ್ಟಿಸಬಹುದಾಗಿದೆ.ಛಂದಸ್ಸುಗಳ ಲಕ್ಷಣಗಳಿಗೆ ಅನುಗುಣವಾಗಿರಚನೆಯನ್ನು ಮಾಡಬಹುದು.ಕವನ ತಂತ್ರಾಂಶವು ಆದಿ ಮತ್ತುಅಂತ್ಯ ಪ್ರಾಸಗಳೊಂದಿಗೆ ಸಗಣ, ಜಗಣಗಳ ಲಕ್ಷಣಗಳನ್ನು ಗುರುತಿಸುತ್ತದೆ. ನಾವು ಬರೆದ ಪದ್ಯಕ್ಕೆ,ಪದ್ಯದ ಲಕ್ಷಣ ಹಾಗೂ ಛಂದಸ್ಸಿನ ಗುಂಪನ್ನು ಗುರುತಿಸಿ,ಅದರ ಶಿಥಿಲದ್ವಿತ್ವವನ್ನು ತೋರಿಸುತ್ತದೆ. ಈ ತಂತ್ರಾಂಶದಲ್ಲಿ 8193 ಬೇರೆ ಬೇರೆಯ ಛಂದಸ್ಸನ್ನು ಸೃಷ್ಟಿ ಮಾಡಬಹುದು ಎಂದರು.

Advertisements

ಈ ತಂತ್ರಾಂಶದಲ್ಲಿ 32 ಸಾವಿರ ಛಂದಸ್ಸುಗಳು ಇದ್ದು, ಛಂದಸ್ಸಿಗೆ ಅನ್ವಯವಾಗುವಂತೆ ಪದ್ಯಗಳನ್ನು ರಚನೆ ಮಾಡಬಹುದಾಗಿದೆ.ಪದವನ್ನು ಬಿಡಿಸಿ ಸಂಧಿಗಳನ್ನು ವಿಭಾಗಿಸಿ ಸಂಧಿಯ ಹೆಸರನ್ನು ಗುರುತಿಸಬಹುದು. ಈ ತಂತ್ರಾಂಶದಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತ ಪದ ಪುಂಜಗಳನ್ನು ಸೇರಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ನಮ್ಮಲ್ಲಿ ನಡೆಯುವ ಆಂತರಿಕ ಕಲಹಗಳೇ ನಮ್ಮಅವನತಿಗೆ ಕಾರಣವಾಗುತ್ತಿವೆ. ಭಾರತದಲ್ಲಿದ್ದಾಗ ನಾವು ಭಾರತೀಯರಾಗಿರುವುದಿಲ್ಲ. ಭಾರತ ಬಿಟ್ಟು ಹೊರ ದೇಶಗಳಿಗೆ ಹೋದ ಮೇಲೆ ನಿಜವಾದ ಭಾರತೀಯಾರಗುತ್ತೇವೆ. ಆಗ ನಮ್ಮಲ್ಲಿ ದೇಶದ ಪ್ರಜ್ಞೆ ಮೂಡುತ್ತದೆಎಂದರು.

ವಿವಿಗಳಲ್ಲಿ ಅಂರಾರಾಷ್ಟ್ರೀಯ ಮಟ್ಟದ ಸಂಶೋಧನೆಗಳು ನಡೆಯಬೇಕು.ಕನ್ನಡದಲ್ಲಿತಂತ್ರಜ್ಞಾನ ಅಭಿವೃದ್ಧಿಯಾಗಬೇಕು. ತುಮಕೂರುವಿವಿಯಲ್ಲಿ ಶೀಘ್ರದಲ್ಲೇ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್ ಪದವಿ ಹಾಗೂ ಸಂಶೋಧನ ಕೇಂದ್ರವನ್ನು ಶುರುಮಾಡಲಿದ್ದೇವೆ ಎಂದುತಿಳಿಸಿದರು.

ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ತಂತ್ರಜ್ಞಾನಯುಗದಲ್ಲಿ ಡೀಪ್ ಫೇಕ್, ಹ್ಯಾಕಿಂಗ್, ಸಮಸ್ಯೆಗಳು ಹೆಚ್ಚುತ್ತಿವೆ. ಎಐ ಬಳಕೆ ಮಾಡಿಕೊಂಡು ಇವುಗಳನ್ನು ಪತ್ತೆ ಹಚ್ಚುವ ಪ್ಯಾಕ್ಟ್ ಚೆಕ್ಕಿಂಗ್‌ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕು ಎಂದರು.

ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿ, ಭಾರತಕ್ಕೆ ಬಂದ ಕಂಪ್ಯೂಟರ್‌ಗೆ ಕನ್ನಡ ಭಾಷೆಯನ್ನು ಒಗ್ಗಿಸುವ ಕೆಲಸ ಸಾಕಷ್ಟು ವರ್ಷಗಳು ನಡೆದವು.ಹಾಗೇ ಎಐಗೆ ಸಹ ಕನ್ನಡವನ್ನು ಒಗ್ಗಿಸುವ ಕೆಲಸ ನಡೆಯುತ್ತಿದೆ.ಇದರಿಂದಾಗಿ ಕನ್ನಡ ಭಾಷೆಯು ಉನ್ನತ ಮಟ್ಟಕ್ಕೆ ತಲುಪಲಿದೆ.ಎಐ ಅನ್ನು ಕಂಪ್ಯೂಟರ್‌ನಲ್ಲಿ ಅನ್ವಯಿಸಿಕೊಂಡ ಮೊದಲ ವಿಶ್ವವಿದ್ಯಾನಿಲಯ ಎಂಬ ಕೀರ್ತಿಗೆ ತುಮಕೂರು ವಿವಿ ಭಾಜನವಾಗಲಿದೆ ಎಂದು ಹೇಳಿದರು.

ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕಿ ಡಾ. ಗೀತಾ ವಸಂತ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X