ಧಾರವಾಡ | ಬಿರುಕು ಬಿಟ್ಟು ಸೋರುತ್ತಿರುವ ರೈಲ್ವೆ ಮೇಲ್ಸೇತುವೆ; ಸರಿ ಪಡಿಸುವರೇ ಅಧಿಕಾರಿಗಳು?

Date:

Advertisements

ಮಳೆಗಾಲ‌ ಶುರುವಾದರೆ ಸಾಕು, ಈ ರೈಲ್ವೆ ಮೇಲ್ಸೇತುವೆ ಥಟ್ ಥಟ್ ಎಂದು ನೀರು ಸೋರತೊಡಗುತ್ತದೆ. ಈ ಸೇತುವೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಯಾಕಪ್ಪಾ ಮಳೆ ಬರುತ್ತದೆ ಎಂದು ತಲೆ ಬಿಸಿಯಾಗುತ್ತದೆ. ಇತ್ತ ರೈಲ್ವೆ ಅಧಿಕಾರಿಗಳಿಗೂ ಗಮನವಿಲ್ಲ, ಅತ್ತ ಗ್ರಾಮ ಪಂಚಾಯತಿಗೂ ಎಚ್ಚರವಿಲ್ಲ.

ಅಷ್ಟಕ್ಕೂ ಈ ಸೇತುವೆ ಯಾವುದು ಗೊತ್ತಾ? ಧಾರವಾಡ ಮತ್ತು ಅಳ್ನಾವರ ಮಾರ್ಗ ಮಧ್ಯದಲ್ಲಿ ಇರುವ ಧಾರವಾಡ ತಾಲೂಕಿನ ಮಂಡಿಹಾಳ, ನಾಗಲಾವಿ, ರಾಮಾಪುರ ಗ್ರಾಮಗಳಿಗೆ ಹೋಗುವ ರೈಲ್ವೆ ಮೇಲ್ಸೇತುವೆ.

ಸೇತುವೆ 5

ಈ ಸೇತುವೆ ಬಿರುಕು ಬಿಟ್ಟಿದ್ದು, ಮಳೆ ಬಂದಾಗ ನೀರು ಸೇತುವೆಯಿಂದ ಸೋರಲು ಶುರುವಾಗುತ್ತದೆ. ಒಂದುವೇಳೆ ಜೋರಾಗಿ ಮಳೆ ಬಂದಾಗ ವಾಹನ ಸವಾರರು ಸ್ವಲ್ಪ ಹೊತ್ತು ನಿಂತುಕೊಂಡು ಹೋಗಲೂ ಈ ಸೇತುವೆ ಕೆಳಗೆ ಅವಕಾಶವಿಲ್ಲ. ಅತ್ತ ಮೇಲಿನಿಂದಲೂ ಸೋರುವುದಲ್ಲದೇ, ಅಡಿಭಾಗದಲ್ಲಿರುವ ರಸ್ತೆಯಲ್ಲಿಯೂ ನೀರು ನಿಲ್ಲುತ್ತದೆ. ಹೀಗಾಗಿ ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ.

Advertisements

ಇನ್ನು ರಸ್ತೆಯುದ್ದಕ್ಕೂ ತೆಗ್ಗು ದಿನ್ನೆಗಳು, ನೀರಿನ ಗುಂಡಿಗಳಲ್ಲಿ ವಾಹನ ಸಂಚಾರ ಮಾಡುವ ವಾತಾವರಣ ನಿರ್ಮಾಣವಾಗಿದೆ. ಮತ್ತು ಈ ಸೇತುವೆ ಮುಗದ ರೈಲು ನಿಲ್ದಾಣಕ್ಕೆ ಸಂಬಂಧಪಟ್ಟಿರುವುದರಿಂದ ಮಂಡಿಹಾಳ ಗ್ರಾಮ ಪಂಚಾಯತಿ ವತಿಯಿಂದ ಸಮಸ್ಯೆ ಬಗೆಹರಿಸಲು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಈ ದಿನ. ಕಾಮ್ ಜೊತೆಗೆ ಮಂಡಿಹಾಳ ಗ್ರಾಮ ಪಂಚಾಯತ್ ಪಿಡಿಓ ನೀರಜ್ ಜಾಧವ್ ಮಾತನಾಡಿ, “ಈ ಸಮಸ್ಯೆ ಬಗ್ಗೆ ಮುಗದ ರೈಲ್ವೆ ನಿಲ್ದಾಣಾಧಿಕಾರಿಗಳಿಗೆ ಸಂಬಂಧಿಸಿರುವುದರಿಂ, ಕೂಡಲೇ ಸರಿಪಡಿಸುವಂತೆ ಮನವಿ ಸಲ್ಲಿಸಿ ವಿನಂತಿಸಿದ್ದೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯುವಂತೆ ನೋಡಿಕೊಳ್ಳುತ್ತೇವೆ. ಮತ್ತು ರಸ್ತೆ ದುರಸ್ತಿ ಕಾರ್ಯವನ್ನು ಸರಿಪಡಿಸುತ್ತೇವೆ” ಎಂದು ತಿಳಿಸಿದರು.

ರಸ್ತೆ 6

ಇನ್ನು ರಸ್ತೆ ಹಾಳಾಗಿ ವರ್ಷಗಳೇ ಕಳೆದರೂ ಲೋಕೋಪಯೋಗಿ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಸ್ತೆ ದುರಸ್ತಿ ಮಾಡದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ವಾಹನ ಸವಾರರು ಬಿದ್ದು ಪರದಾಡುವಂತಾಗಿದ್ದು. ರಾತ್ರಿ ವೇಳೆ ಹಲವಾರು ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೋರ್ವರು ಮಾಹಿತಿ ನೀಡಿದರು.

ಕ್ಷೇತ್ರದ ಶಾಸಕ, ಮಂತ್ರಿಗಳು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವರೇ ಎಂದು ಗ್ರಾಮಸ್ಥರು ಕಾದು ನೋಡುತ್ತಿದ್ದಾರೆ.

ರಸ್ತೆ1 1
IMG 20240805 WA0207
ಶರಣಪ್ಪ ಗೊಲ್ಲರ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X