ಮಂಗಳೂರು | ಭಂಡಾರಮನೆ ಧ್ವಂಸ ಪ್ರಕರಣದ ಆರೋಪಿಗಳಿಗೆ ಜಾಮೀನು; ಧಾರ್ಮಿಕ ಮುಖಂಡರ ಆಕ್ರೋಶ

Date:

ಕೊಂಡಾಣ ಕ್ಷೇತ್ರದ ಭಂಡಾರಮನೆಯನ್ನು ನೆಲಸಮಗೊಳಿಸಿದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಳಿಸಿರುವುದು ಖಂಡನೀಯ ಎಂದು ಧಾರ್ಮಿಕ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟೆಕಾರು ಪಟ್ಟಣದ ಕೊಂಡಾಣದ ಭಂಡಾರಮನೆಯ ಕಟ್ಟಡ ಧ್ವಂಸ ಪ್ರಕರಣದ ಆರೋಪಿಗಳ ವಿರುದ್ಧ ಹಾಗೂ ಕ್ಷೇತ್ರದ ಭಂಡಾರಮನೆ ರಕ್ಷಣೆ, ಒಡವೆಗಳ ರಕ್ಷಣೆ ಕುರಿತಾಗಿ ಆಗ್ರಹಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

“ತಮಗೆ ಬೇಕಾದಷ್ಟು ಸ್ವಾಹಾ ಮಾಡಲು ಅಸ್ತ್ರವಾಗಿ ಬಳಸಿದ ಕ್ಷೇತ್ರದ ಆಡಳಿತ ತಮ್ಮ ಅಧೀನದಲ್ಲಿ ಇಲ್ಲವೆಂಬ ಸ್ವಾರ್ಥಕ್ಕೆ ಭಂಡಾರ ಮನೆಯನ್ನೇ ಪುಡಿಗೈದಿರುವ ಮುತ್ತಣ್ಣ ಶೆಟ್ಟಿ ಮತ್ತು ಕಿಡಿಗೇಡಿಗಳ ಕೃತ್ಯ ತೀವ್ರ ಖಂಡನೀಯ. ಇಂತಹ ರಾಕ್ಷಸರನ್ನು ರಾತ್ರೋ ರಾತ್ರಿ ಜಾಮೀನಿನಲ್ಲಿ ಬಿಡುಗಡೆಗೊಳಿಸಿರುವುದು ಸರಿಯಲ್ಲ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನ್ಯಾಯವಾದಿ ಜಗದೀಶ ಶೇಣವ ಮಾತನಾಡಿ, “ಹಿಂದೂ ಆಗಿ ಕೊಂಡಾಣ ಕ್ಷೇತ್ರದ ಅನ್ನ ತಿಂದು ಭಂಡಾರ ಮನೆಯನ್ನೇ ಕೆಡವಿದ ಮುತ್ತಣ್ಣ ಶೆಟ್ಟಿ ವಿರುದ್ಧ ಕ್ರಮ ಆಗಬೇಕು. ಕೊಂಡಾಣ ಕ್ಷೇತ್ರ ಮುತ್ತಣ್ಣ ಶೆಟ್ಟಿಯ ಕುಟುಂಬದ ಆಸ್ತಿ ಅಲ್ಲ. ಹಿಂದೂ ಸಮಾಜದ ಯಾರೂ ಕೂಡಾ ಮುತ್ತಣ್ಣ ಶೆಟ್ಟಿಯನ್ನು ಯಾವುದೇ ಕಾರ್ಯಕ್ರಮಕ್ಕೆ ಆಮಂತ್ರಿಸಬಾರದು. ಧರ್ಮ ದ್ರೋಹಿಯಾಗಿರುವ ಅವರಿಂದಲೇ ₹30 ಲಕ್ಷ ಕಟ್ಟಡ ನಿರ್ಮಾಣ ವೆಚ್ಚವನ್ನು ಭರಿಸುವಂತೆ ಮುಜರಾಯಿ ಇಲಾಖೆ ಕ್ರಮ ಜರಗಿಸಬೇಕು” ಎಂದು ಆಗ್ರಹಿಸಿದರು.

ಕೊಂಡಾಣದ ಭಂಡಾರ ಮನೆಯನ್ನು ಭಾನುವಾರ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ನೀಡಿದ ದೂರಿನ ಆಧಾರದ ಮೇಲೆ ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಕ್ಷೇತ್ರದ ಗುರಿಕಾರ ಮುತ್ತಣ್ಣ ಶೆಟ್ಟಿ, ಧೀರಜ್ ಮತ್ತು ಶಿವರಾಜ್ ಎಂಬುವವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಕೆಲವೇ ಗಂಟೆಗಳಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು.

ಬಳಿಕ ಅವರಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಜೆಸಿಬಿಯನ್ನು ಪೊಲೀಸರು ಇನ್ನೂ ವಶಪಡಿಸಿಕೊಂಡಿರದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಪಿಲಿಚಾಮುಂಡಿ ದೇವಸ್ಥಾನದ ಭಂಡಾರ ಮನೆ ಧ್ವಂಸ; ಮೂವರ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ ಅವಿನಾಶ್ ಎಂಬಾತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು, ಮಾಜಿ ಸದಸ್ಯೆ ದಿನಮಣಿ ರಾವ್, ವಿ ಹಿಂ ಪ ಮುಖಂಡ ಗೋಪಾಲ‌ ಕುತ್ತಾರು, ಬಜರಂಗದಳ ಪ್ರಮುಖ ಅರ್ಜುನ್ ಮಾಡೂರು ಸೇರಿದಂತೆ ಬಹುತೇಕರು ಪ್ರತಿಭಟನೆಯಲ್ಲಿ ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....

ರಾಯಚೂರು | ಅಬಕಾರಿ ಇಲಾಖೆ ದಾಳಿ; ₹500 ಮುಖಬೆಲೆಯ ನೋಟಿನ 62 ಬಂಡಲ್ ಪತ್ತೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಳಿಗಲ್ಲಿಯ ಗೌಳಿಯೊಬ್ಬರ ಮನೆಯಲ್ಲಿ ಗೋಣಿ ಚೀಲದ...