ದಾವಣಗೆರೆ | ಲೈಂಗಿಕ ದೌರ್ಜನ್ಯಗಳನ್ನು ಕಂಡೂ ಹೇಳದವರೂ ಆರೋಪಿಗಳೇ: ನ್ಯಾ. ಶ್ರೀಪಾದ

Date:

Advertisements

ಲೈಂಗಿಕ ದೌರ್ಜನದಂತಹ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಗೌಪ್ಯ ವಿಚಾರಣೆ ನಡೆಸಲಾಗುತ್ತದೆ. ಹೀಗಾಗಿ, ಯಾವುದೇ ಹಿಂಜರಿಕೆ, ಭಯ ಇಲ್ಲದೆ ಲೈಂಗಿಕ ದೌರ್ಜನ್ಯಗಳ ವಿರುದ್ಧ ದೂರು ನೀಡಬೇಕು ಎಂದು ದಾವಣಗೆರೆಯ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್‌. ಶ್ರೀಪಾದ ತಿಳಿಸಿದರು.

ದಾವಣಗೆರೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪೋಕ್ಸೋ ಕಾನೂನಿನ ಅರಿವು, ಬಾಲ್ಯವಿವಾಹ ತಡೆ, ಬಾಲಕಾರ್ಮಿಕ, ಮಾದಕ ವಸುಗಳ ಸೇವನೆಯಿಂದ ಆಗುವ ಹಾನಿ ಹಾಗೂ ಮಕ್ಕಳ ಸುರಕ್ಷತೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನದ ಅಪರಾಧಗಳೆಂದರೆ ಕೇವಲ ಬಾಲಕಿಯರ ಮೇಲಷ್ಟೇ ಅಲ್ಲ, 18 ವರ್ಷದೊಳಗಿನ ಬಾಲಕ-ಬಾಲಕಿಯರ ಎನ್ನದೆ, ಲಿಂಗ ಭೇದವಿಲ್ಲದೆ ಯಾವುದೇ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳೇ ಆಗಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಲೆಯ ಮತ್ತು ಕಾಲೇಜುಗಳ ಶಿಕ್ಷಕರು ಮತ್ತು ಪ್ರಾಧ್ಯಾಪಕರು ಈ ನಿಟ್ಟಿನಲ್ಲಿ ಮಕ್ಕಳ ಮೇಲೆ ಸದಾ ಕಾಳಜಿ ವಹಿಸುವ ಮೂಲಕ ಅವರ ಚಲನ ವಲನಗಳನ್ನು ಗಮನಿಸಬೇಕು” ಎಂದು ಕಿವಿಮಾತು ಹೇಳಿದರು.

“ಲೈಂಗಿಕ ಅತ್ಯಾಚಾರಗಳು ಕೇವಲ ಅಪರಿಚಿತರಂದಲೇ ಆಗುತ್ತವೆ ಎನ್ನುವುದು ಸಹಜ. ಆದರೆ, ಅದೆಷ್ಟೋ ಪ್ರಕರಣಗಳು ಪೋಷಕರು, ಶಿಕ್ಷಕರು, ನೆರೆಹೊರೆಯವರು ಮತ್ತು ಸಂಬಂಧಿಕರಿಂದಲೇ ಇತ್ತೀಚಿನ ದಿನಗಳಲ್ಲಿ ಲೈಂಗಿಕ ಪ್ರಕರಣಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ಯಾವುದೇ ಮುಚ್ಚುಮರೆ ಇಲ್ಲದೆ ಸಂತ್ರಸ್ತರು ತಮ್ಮ ದೂರುಗಳನ್ನು ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಅಥವಾ ನ್ಯಾಯಾಲಯಕ್ಕೆ ನೀಡಿದಾಗ ತಪ್ಪಿತಸ್ಥರಿಗೆ ತಕ್ಷಣ ತಕ್ಕ ಶಿಕ್ಷೆ ನೀಡುವಲ್ಲಿ ನ್ಯಾಯಾಲಯ ಮುಂದಾಗಲಿದೆ, ಅಲ್ಲದೆ ಸಂತ್ರಸ್ತರಿಗೆ ಪರಿಹಾರ ನೀಡಲಿದೆ” ಎಂದು ಹೇಳಿದರು.

“ಯಾವುದೇ ಸ್ಥಳದಲ್ಲಾಗಲಿ ಲೈಂಗಿಕ – ದೌರ್ಜನ್ಯಗಳು ನಡೆದಾಗ ಅದನ್ನು ನೋಡಿದ ಅಥವಾ ಅದರ ಬಗ್ಗೆ ತಿಳಿದಿದ್ದರೂ ಸಹ ಅದರ ಈ ಬಗ್ಗೆ ಹೇಳದವರೂ ಸಹ ಆರೋಪಿಗಳ ಸ್ಥಾನದಲ್ಲಿ ಈ ನಿಲ್ಲುತ್ತಾರೆ. ಸಾರ್ವಜನಿಕರಾಗಲಿ ಅಥವಾ ಇನ್ನಿತರೆ ಯಾವುದೇ ಕ್ಷೇತ್ರದ ವ್ಯಕ್ತಿಗಳಾಗಲಿ ಇಂತಹ ತಪ್ಪುಗಳು ಕಂಡು ಬಂದಾಗ, ತಕ್ಷಣವೇ ಈ ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಿಳಿಸುವ ಮೂಲಕ ಮಾಡಬೇಕು” ಎಂದು ಸಲಹೆ ನೀಡಿದರು.

Advertisements

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್‌ ಮಾತನಾಡಿ, “ದೇಶಕ್ಕೆ ಸ್ವತಂತ್ರ ಬಂದು 76 ವರ್ಷಗಳು ಕಳೆದಿವೆ. ನಾವುಗಳು ಸಂವಿಧಾನವನ್ನು ಒಪ್ಪಿಕೊಂಡು ಅದರ ಅಡಿಯಲ್ಲಿ ಬಾಳುತ್ತಿದ್ದೇವೆ. ಅನೇಕ ಕಾನೂನುಗಳು ಇವೆ. ಎಲ್ಲ ಕಾನೂನುಗಳ ತಾಯಿ ನಮ್ಮ ಸಂವಿಧಾನ, ಸಮಾನತೆ, ಸಹಬಾಳ್ವೆ, ಸಮಾಜದ ಅಭಿವೃದ್ಧಿಗೆ ಹಲವು ಕಾನೂನುಗಳನ್ನು ನಮ್ಮ ಸಂವಿಧಾನ ರಚಿಸಿದೆ. ಆದರೆ, ಇಂದಿಗೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿವೆ. ಹಲವಾರು ಸಮಸ್ಯೆಗಳು ಈಗಲೂ ನಮ್ಮ ಮುಂದೆ ಇವೆ. ಸಮಾನತೆಯ ಯುಗ ಬಂದಿದ್ದರೂ ಸಹ ಹಿಂದಿನಷ್ಟು ಶೋಷಣೆ ಈಗ ಕಾಣುತ್ತಿಲ್ಲ” ಎಂದು ಹೇಳಿದರು.

Advertisements
Bose Military School

“ಸಾರ್ವಜನಿಕರಲ್ಲಿ ಕಾನೂನಿನ ಅರಿವಿನ ಬಗ್ಗೆ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆ ಮುಂದಾಗಬೇಕಾಗಿದೆ. ಎಲ್ಲಾ ಹಂತದ ವ್ಯಕ್ತಿಗಳ ನಿರ್ಮಾಣದಲ್ಲಿ ಶಿಕ್ಷಣ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ. ಕಾರಣ ಸಮಾಜವನ್ನು ತಿದ್ದುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಶಿಕ್ಷಣ ಇಲಾಖೆ ನೀಡಬೇಕಾಗಿದೆ” ಎಂದು ಹೇಳಿದರು.

ಡಿಡಿಪಿಐ ಜಿ.ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ.ಕರೆಣ್ಣವರ, ಬಿಇಓ ಡಾ.ಪುಷ್ಪಾಲತ, ಕ್ಷೇತ್ರ ಸಮನ್ವಯ ಅಧಿಕಾರಿ ಬಿ.ಎಂ. ಚೌಡಪ್ಪ, ವಕೀಲರ ಸಂಘದ ಎ.ಎಸ್.ಮಂಜುನಾಥ್, ಎಸ್‌. ಬಸವರಾಜ್‌ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಗೌರವಾನ್ವಿತ ನ್ಯಾಯಾಧೀಶರು ನೀಡಿರುವ ದಿಟ್ಟ ಹೇಳಿಕೆ ಪ್ರಶಂಸನೀಯ. ನ್ಯಾಯಾಲಯಗಳಲ್ಲಿ ತೀರ್ಪುಗಳು ಇದೇ ರೀತಿ ಪ್ರಕಟ ವಾಗಬೇಕಿದೆ. ಆಗ ಸಮಾಜದ ನಾಗರಿಕರು ಇಂತಹ ಹೇಯ ಕೃತ್ಯವನ್ನು ಕಂಡೂ ಕಾಣದಂತೆ ನಿರ್ಲಿಪ್ತತೆ ತೋರದೆ ಇಂತಹ ಅನ್ಯಾಯ ಅತ್ಯಾಚಾರ ಗಳನ್ನು ಸಾಧ್ಯವಾದಷ್ಟು ತಡೆಯಲು ಪ್ರಯತ್ನಿಸುವುದು, ನಂತರ ಇದರ ವಿರುದ್ಧ ಪ್ರತಿಭಟಿಸುವುದು, ಹಾಗೂ ಅವಶ್ಯಕತೆ ಇದ್ದಾಗ ಕಾನೂನು ಕ್ರಮ ಕ್ಕಾಗಿ ಪೋಲೀಸ್ ಇಲಾಖೆಗೆ ದೂರು ನೀಡುವುದು ಮುಂತಾದ ಕ್ರಮಗಳು ಜಾರಿಯಾಗಬಹುದು.. ಇಸ್ಲಾಮಿನ ಪ್ರವಾದಿಗಳು ತಮ್ಮ ಅನುಯಾಯಿಗಳಿಗೆ, ಕೆಡುಕು ಕಂಡಾಗ ಇದೇ ರೀತಿ ಕ್ರಮವಹಿಸ ಬೇಕೆಂದು ಇಸ್ಲಾಂನ ಅನುಯಾಯಿಗಳಿಗೆ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements
Advertisements
Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇವನಹಳ್ಳಿ ರೈತ ಹೋರಾಟ: ಹತ್ತು ದಿನಗಳ ಗಡುವು ಪಡೆಯುವುದೇ ಸರ್ಕಾರ?

ದೇವನಹಳ್ಳಿ ಭೂಸ್ವಾಧೀನ ಕುರಿತು ಚನ್ನರಾಯಪಟ್ಟಣ ರೈತರ ಹೋರಾಟ ಮತ್ತು ಬೇಡಿಕೆಗಳ ಕುರಿತಂತೆ...

ಉಡುಪಿ | “ಸರ್ವರಿಗೂ ಸೂರು” ಮನೆ ನಿರ್ಮಾಣಕ್ಕೆ ಸಹಾಯಧನ – ಅರ್ಜಿ ಆಹ್ವಾನ

ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಯೋಜನೆಯಡಿ “ಸರ್ವರಿಗೂ...

ಉಡುಪಿ | ಮಹಿಳೆಯರನ್ನು ಮಾತೆ ಎಂದು ಸಂಭೋಧಿಸುವ ಬಿಜೆಪಿಗರ ನಿಜ ಬಣ್ಣ ಪದೇ ಪದೇ ಬಯಲಾಗುತ್ತಿದೆ

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ...

ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿ ಆಗ್ರಹಿಸಿ ಕಲಬುರಗಿ, ಯಾದಗಿರಿಯಲ್ಲಿ ಪ್ರತಿಭಟನೆ

ಸರ್ಕಾರಿ ಶಾಲೆಗಳಿಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ, ಮೂಲಸೌಕರ್ಯ ಸೇರಿದಂತೆ...

Download Eedina App Android / iOS

X