ಧಾರವಾಡ | ಮಾ.31ರಂದು ʼಮೌನವೂ ಪಿಸುಗುಟ್ಟಿದಾಗʼ ಕಾವ್ಯ ಸಂಕಲನ ಬಿಡುಗಡೆ

Date:

Advertisements

ಕವಿ ಕುಂಚ ಪ್ರಕಾಶನದಿಂದ ಕವಿಯಿತ್ರಿ ಪ್ರೇಮಾ ನಡುವಿನಮನಿ ಅವರ ಮೌನವೂ ಪಿಸುಗುಟ್ಟಿದಾಗ ಕಾವ್ಯ ಸಂಕಲನ ಬಿಡುಗಡೆ ಸಮಾರಂಭವನ್ನು ಧಾರವಾಡದ ವಿಕಾಸನಗರದ ಎಂ ಆರ್ ಬಾಳಿಕಾಯಿ ಆರ್ಟ್‌ ಗ್ಯಾಲರಿಯಲ್ಲಿ ಮಾರ್ಚ್‌ 31ರಂದು ಸಂಜೆ 4-30ಕ್ಕೆ ಎಂದು ಕವಿ ಕುಂಚ ಪ್ರಕಾಶನ ಅಧ್ಯಕ್ಷ ರಮೇಶ ಸಾಸನೂರ ಹೇಳಿದರು.

ಧಾರವಾಡ ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, “ಬೆಳಗಾವಿಯ ಕಸಾಪ ಜಿಲ್ಲಾಧ್ಯಕ್ಷ ಮಂಗಲಾ ಮೆಟಿಗುಡ್ಡ ಅವರು ಕಾವ್ಯ ಸಂಕಲನ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಚಿತ್ರ‌ ಕಲಾವಿದ ಎಂ ಆರ್ ಬಾಳಿಕಾಯಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಆಗಮಿಸಲಿದ್ದಾರೆ” ಎಂದರು.

“ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ ಜಾಜಿ ದೇವೇಂದ್ರಪ್ಪ ಅವರು ಕೃತಿ ಪರಿಚಯಿಸಲಿದ್ದು, ಕಲಾಕೃತಿಗಳ ಬಗ್ಗೆ ವಿಜಯಪುರದ ರಮೇಶ ಸಾಸನೂರ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ ಶಶಿಧರ ನರೇಂದ್ರ ಅವರನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ. ಇದಲ್ಲದೇ ಉತ್ತರ ಕರ್ನಾಟಕ‌ ಲೇಖಕಿಯರ ಸಂಘದ ಸದಸ್ಯರಿಂದ ಕವನ ವಾಚನ ಇರಲಿದೆ” ಎಂದರು.

Advertisements

ಈ ಸುದ್ದಿ ಓದಿದ್ದೀರಾ? ಧಾರವಾಡ | ನಾಲ್ಕೈದು ಮಂದಿ ಬಂದು ನನ್ನಿಂದ ಒತ್ತಾಯವಾಗಿ ಸಹಿ ಹಾಕಿಸಿಕೊಂಡರು: ಮಲ್ಲಿಕಾರ್ಜುನ ಸ್ವಾಮೀಜಿ

ಕವಿಯಿತ್ರಿ, ಲೆಖಕಿ ಪ್ರೇಮಾ ನಡುವಿನಮನಿ‌ ಮಾತನಾಡಿ, “ಕವನ ಸಂಕಲನದ ಕವಿತೆ ವಾಚನ ಮಾಡಲಿರುವ 10 ಜನರಿಗೆ ಕಾವ್ಯಶ್ರೀ ಪ್ರಶಸ್ತಿ ನೀಡಿ, ಗೌರವಿಸಲಾಗುವುದು‌‌. ಇದಲ್ಲದೇ ಮುಖ್ಯ ಅತಿಥಿಗಳಿಗೆ ಸಾಹಿತ್ಯಶ್ರೀ, ರಂಗಶ್ರೀ, ಕಲಾಶ್ರೀ ಗೌರವ ಪ್ರಶಸ್ತಿ ನೀಡಲಾಗುವುದು” ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ‘ವೇಮಗಲ್ – ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ದಲಿತರನ್ನು ಕಡೆಗಣಿಸಿಲ್ಲ’

ಇತ್ತೀಚೆಗೆ ಕೋಲಾರ ಜಿಲ್ಲೆಯ ವೇಮಗಲ್- ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ 6...

ಧಾರವಾಡ | ಬೆಣ್ಣೆಹಳ್ಳ ಸೇತುವೆ ದುರಸ್ತಿಗೆ ಮುಂದಾಗಲು ಸಚಿವ ಸಂತೋಷ್ ಲಾಡ್ ಸೂಚನೆ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಹತ್ತಿರದ ದೊಡ್ಡಹಳ್ಳ ಹಾಗೂ ಬೆಣ್ಣೆಹಳ್ಳ...

ಧರ್ಮಸ್ಥಳ ಪ್ರಕರಣ | ನನ್ನ ಬಂಧನ ರಾಜಕೀಯ ಪಿತೂರಿಯ ಭಾಗ: ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಧಾರವಾಡ | ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸುವುದು ಎಲ್ಲರ ಕರ್ತವ್ಯ: ಕೆ. ನಾಗಣ್ಣಗೌಡ

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ....

Download Eedina App Android / iOS

X