ಕವಿ ಕುಂಚ ಪ್ರಕಾಶನದಿಂದ ಕವಿಯಿತ್ರಿ ಪ್ರೇಮಾ ನಡುವಿನಮನಿ ಅವರ ಮೌನವೂ ಪಿಸುಗುಟ್ಟಿದಾಗ ಕಾವ್ಯ ಸಂಕಲನ ಬಿಡುಗಡೆ ಸಮಾರಂಭವನ್ನು ಧಾರವಾಡದ ವಿಕಾಸನಗರದ ಎಂ ಆರ್ ಬಾಳಿಕಾಯಿ ಆರ್ಟ್ ಗ್ಯಾಲರಿಯಲ್ಲಿ ಮಾರ್ಚ್ 31ರಂದು ಸಂಜೆ 4-30ಕ್ಕೆ ಎಂದು ಕವಿ ಕುಂಚ ಪ್ರಕಾಶನ ಅಧ್ಯಕ್ಷ ರಮೇಶ ಸಾಸನೂರ ಹೇಳಿದರು.
ಧಾರವಾಡ ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, “ಬೆಳಗಾವಿಯ ಕಸಾಪ ಜಿಲ್ಲಾಧ್ಯಕ್ಷ ಮಂಗಲಾ ಮೆಟಿಗುಡ್ಡ ಅವರು ಕಾವ್ಯ ಸಂಕಲನ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಚಿತ್ರ ಕಲಾವಿದ ಎಂ ಆರ್ ಬಾಳಿಕಾಯಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಆಗಮಿಸಲಿದ್ದಾರೆ” ಎಂದರು.
“ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ ಜಾಜಿ ದೇವೇಂದ್ರಪ್ಪ ಅವರು ಕೃತಿ ಪರಿಚಯಿಸಲಿದ್ದು, ಕಲಾಕೃತಿಗಳ ಬಗ್ಗೆ ವಿಜಯಪುರದ ರಮೇಶ ಸಾಸನೂರ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ ಶಶಿಧರ ನರೇಂದ್ರ ಅವರನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ. ಇದಲ್ಲದೇ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಸದಸ್ಯರಿಂದ ಕವನ ವಾಚನ ಇರಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ನಾಲ್ಕೈದು ಮಂದಿ ಬಂದು ನನ್ನಿಂದ ಒತ್ತಾಯವಾಗಿ ಸಹಿ ಹಾಕಿಸಿಕೊಂಡರು: ಮಲ್ಲಿಕಾರ್ಜುನ ಸ್ವಾಮೀಜಿ
ಕವಿಯಿತ್ರಿ, ಲೆಖಕಿ ಪ್ರೇಮಾ ನಡುವಿನಮನಿ ಮಾತನಾಡಿ, “ಕವನ ಸಂಕಲನದ ಕವಿತೆ ವಾಚನ ಮಾಡಲಿರುವ 10 ಜನರಿಗೆ ಕಾವ್ಯಶ್ರೀ ಪ್ರಶಸ್ತಿ ನೀಡಿ, ಗೌರವಿಸಲಾಗುವುದು. ಇದಲ್ಲದೇ ಮುಖ್ಯ ಅತಿಥಿಗಳಿಗೆ ಸಾಹಿತ್ಯಶ್ರೀ, ರಂಗಶ್ರೀ, ಕಲಾಶ್ರೀ ಗೌರವ ಪ್ರಶಸ್ತಿ ನೀಡಲಾಗುವುದು” ಎಂದರು.