ಗದಗ | ದಾಸರ ಸಮುದಾಯಕ್ಕೆ ಎಸ್‌ಸಿ ಜಾತಿ ಪ್ರಮಾಣ ಪತ್ರ ನೀಡದಂತೆ ದಸಂಸ ಒತ್ತಾಯ

Date:

  • ಆದಿಕಾಲದಿಂದಲೂ ದಾಸರ ಜಾತಿಗೆ ಸೇರಿದವರು ಪ್ರವರ್ಗ 1ರಲ್ಲಿ ಬರುತ್ತಾರೆ
  • 1976ರಲ್ಲಿ ದಾಸರ ಎಂಬುದನ್ನು ಚೆನ್ನದಾಸರ ಎಂದು ತಿದ್ದುಪಡಿ ಮಾಡಿದ್ದಾರೆ

ಜಿಗಳೂರು ಗ್ರಾಮದ ‘ದಾಸರ’ ಎಂಬ ಜಾತಿಯವರಿಗೆ ಪರಿಶಿಷ್ಟ ಜಾತಿಯ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದರಿಂದ ನಿಜವಾದ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಹನಮಂತ ಪೂಜಾರ ಆಕ್ರೋಶ ವ್ಯಕ್ತಪಡಿಸಿದರು.

ದಾಸರ ಸಮುದಾಯಕ್ಕೆ ಎಸ್ಸಿ ಜಾತಿ ಪ್ರಮಾಣ ನೀಡಿರುವುದನ್ನು ವಿರೋಧಿಸಿ ಗದಗ ಜಿಲ್ಲೆ ರೋಣ ಪಟ್ಟಣದ ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ಮಾದಿಗ ದಂಡೋರ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಹನಮಂತ ಪೂಜಾರ ಮಾತನಾಡಿ, ಜಿಗಳೂರು ಗ್ರಾಮದಲ್ಲಿ ದಾಸರ ಕುಟುಂಬವಿದ್ದು, ಆದಿಕಾಲದಿಂದಲೂ ದಾಸರ ಜಾತಿಗೆ ಸೇರಿದವರು ಪ್ರವರ್ಗ 1 ರಲ್ಲಿ ಬರುತ್ತಾರೆ. ಅವರ ಶಾಲಾ ದಾಖಲಾತಿಯಲ್ಲಿ ‘ದಾಸರ’ ಎಂದು ಇರುವುದೇ ಇದಕ್ಕೆ ದಾಖಲೆ. 1976ರಲ್ಲಿ ದಾಸರ ಎನ್ನವುದನ್ನು ಬಿಟ್ಟು, ಚೆನ್ನದಾಸರ ಎಂದು ಶಾಲಾ ದಾಖಲಾತಿಯಲ್ಲಿ‌ ತಿದ್ದುಪಡಿ ಮಾಡಿ ಎಸ್‌ಸಿ ಜಾತಿ ಪ್ರಮಾಣ ಪತ್ರ ಪಡೆದು, ನಿಜವಾದ ಎಸ್‌ಸಿ ಜನಾಂಗದವರಿಗೆ ಅನ್ಯಾಯ ಮಾಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದಲಿತ ಸಂಘರ್ಷ ಸಮಿತಿ ಮುಖಂಡ ಪ್ರಕಾಶ ಹೊಸಳ್ಳಿ ಮಾನಾಡಿ, ಈ ವಿಷಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್‌ರಿಗೆ ಎರಡು ವರ್ಷಗಳ ಹಿಂದೆಯೇ ಎಸ್‌ಸಿ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ತಕರಾರು ಅರ್ಜಿ ಕೊಟ್ಟರೂ ಪರಿಗಣಿಸದೇ ತಹಶೀಲ್ದಾರ್‌ರು ಬೇಜವಾಬ್ದಾರಿ ಮಾತುಗಳನ್ನಾಡಿ, ವಿಳಂಬ ಧೋರಣೆ ಹಾಗೂ ಕರ್ತವ್ಯ ಲೋಪ ಎಸಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಮದ್ಯ ಸೇವಿಸಿ ಆಪರೇಷನ್ ವಾರ್ಡ್‌ನಲ್ಲಿ ಕುಸಿದು ಬಿದ್ದ ವೈದ್ಯ; ರೋಗಿಗಳ ಪರದಾಟ

ದಲಿತ ಮುಖಂಡ ವೀರಪ್ಪ ತೆಗ್ಗಿನಮನಿ ಮಾತನಾಡಿ, ಸರ್ಕಾರದ ಸುತ್ತೋಲೆಯ ಪ್ರಕಾರ ದಾಸರು ಪ್ರವರ್ಗ 1 ರಲ್ಲಿ ಬರುತ್ತಾರೆ. ಚೆನ್ನದಾಸರು ಎಸ್‌ಸಿ ಜಾತಿಗೆ ಸೇರುತ್ತಾರೆ. 2021ರಲ್ಲಿ ಕೊರ್ಟಿನಲ್ಲಿ ಅಂದಿನ ತಹಶಿಲ್ದಾರ್‌ ದಾಸರು ಎಸ್‌ಸಿ ಜಾತಿಯಲ್ಲಿ ಬರುವುದಿಲ್ಲ ಎಂದು ದಾಖಲೆಗಳನ್ನು ನೀಡಿದ್ದಾರೆ. ನಂತರ ಹೊಸದಾಗಿ ಬಂದ ತಹಶೀಲ್ದಾರ್‌ ವಾಣಿ ಉಂಕಿ ಅವರಿಗೆ ಈ ಕುರಿತು ಅರ್ಜಿ ಸಲ್ಲಿಸಿ‌ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾದಿಗ ದಂಡೋರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಂಜು ಬುರಡಿ, ಪ್ರಕಾಶ ಮಾದರ, ದುರಗಪ್ಪ ಮಾದರ, ಬಸವರಾಜ ಮಾದರ, ಶಿವಯೋಗಪ್ಪ ಮಾದರ ಹಾಗೂ ಜಿಗಳೂರು ಗ್ರಾಮದ ದಸಂಸ ಕಾರ್ಯಕರ್ತರು ಭಾಗವಹಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಅಸಮಾನತೆ ಹೋಗಲಾಡಿಸುವುದೇ ಶೋಷಿತ ಸಮುದಾಯಗಳ ಏಳಿಗೆಗೆ ಪರಿಹಾರ: ಸಿಎಂ ಸಿದ್ದರಾಮಯ್ಯ

ಜಾತಿ ವ್ಯವಸ್ಥೆ ದೇವರಿಂದ ಸೃಷ್ಟಿಯಾಗಿದ್ದಲ್ಲ. ಸ್ವಾರ್ಥ ಮನುಷ್ಯನ ಸೃಷ್ಟಿ, ಅಸಮಾನತೆ ಹೋಗಲಾಡಿಸದೆ...

ಉಡುಪಿ | ಸಾರಿಗೆ ನೌಕರರ ಒತ್ತಡದ ದುಡಿಮೆಯಿಂದ ಅನಾರೋಗ್ಯ ಹೆಚ್ಚಳ: ಸುರೇಶ್ ಕಲ್ಲಾಗರ

ಸಾರಿಗೆ ನೌಕರರ ಒತ್ತಡದ ದುಡಿಮೆಯಿಂದ ಅನಾರೋಗ್ಯ ಹೆಚ್ಚಳವಾಗುತ್ತಿದೆ. ಆಟೋರಿಕ್ಷಾ ಚಾಲಕರು ತಮ್ಮ...

ಬೀದರ್‌ | ಜೆಜೆಎಂ ಕಾಮಗಾರಿ ಅಪೂರ್ಣ: ಕೆಸರು ಗದ್ದೆಯಂತಾದ ರಸ್ತೆಗಳು

ಮಳೆಗೆ ಕೆಸರು ಗದ್ದೆಯಂತಾದ ರಸ್ತೆ, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ...

ಚಿಕ್ಕಬಳ್ಳಾಪುರ | ರೈತರ ಆತ್ಮಹತ್ಯೆ ತಡೆಗೆ ಸರ್ಕಾರ ವಿಶೇಷ ಯೋಜನೆ ರೂಪಿಸಲಿ : ಕುರುಬೂರು ಶಾಂತಕುಮಾರ್

ರಾಜ್ಯದಲ್ಲಿ 1200ಕ್ಕೂ ಹೆಚ್ಚಿನ ರೈತರು ಸಾಲಬಾಧೆ, ಬರಗಾಲದಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ....