ರಾಯಚೂರು ನಗರದ ಸಿಯಾತಲಾಬ್ 31ನೇ ವಾರ್ಡ್‌ನಲ್ಲಿ ಅಂಬೇಡ್ಕರ್ ಭವನ ಹಾಗೂ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮೀಸಲಿರಿಸಿದ ನಿವೇಶನವನ್ನು ಅತಿಕ್ರಮಣ ಮಾಡುತ್ತಿರುವ ನಾರಾಯಣ ಎಂಬುವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಕುರಿತು ಬಿ.ಆರ್.ಅಂಬೇಡ್ಕರ್ ಭವನ ಮತ್ತು ಕಲ್ಯಾಣ ಮಂಟಪ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ವಾರ್ಡ್ 31ರ ವ್ಯಾಪ್ತಿಯಲ್ಲಿ ಬರುವ 12-10-61/ಬಿ ಸಂಖ್ಯೆಯ ನಿವೇಶನವನ್ನು ಸ್ಥಳೀಯ ನಿವಾಸಿ ನಾರಾಯಣ ಎನ್ನುವ ವ್ಯಕ್ತಿ ಏಕಾಏಕಿ ಅತಿಕ್ರಮಣಗೊಳಿಸಿ ಜೆಸಿಬಿ ಮೂಲಕ ಗುಂಡಿ ತೋಡಿದ್ದಾರೆʼ ಎಂದು ಆರೋಪಿಸಿದರು.
ನಗರಸಭೆ ಕಚೇರಿಯಲ್ಲಿ ಭವನ ನಿವೇಶನದ ಕುರಿತಾದ ಅಧಿಕೃತ ದಾಖಲೆಗಳು ಕಾನೂನಾತ್ಮಕವಾಗಿವೆ. ಇದನ್ನು ಸೂಕ್ತ ಪರಿಶೀಲಿಸಿ ಅತಿಕ್ರಮಗೊಳಿಸಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ‘ಅಮ್ಮ’ ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ, ಸಂಪೂರ್ಣ ಸಮಿತಿ ವಿಸರ್ಜನೆ
ಈ ವೇಳೆ ಕುಮಾರ್, ಮಾರೆಪ್ಪ ಎಮ್. ನರಸಪ್ಪ, ನರಸಿಂಹ, ಹಣಮಂತ ಇದ್ದರು.
