ದಾವಣಗೆರೆ | ಕೃಷಿಗಾಗಿ ಪ್ರತ್ಯೇಕವಾದ ಕೇಂದ್ರ ಬಜೆಟ್ ಮಂಡಿಸಲು ರೈತ, ಕಾರ್ಮಿಕ ಮುಖಂಡರ ಆಗ್ರಹ

Date:

Advertisements

ಕೃಷಿಗಾಗಿ ಪ್ರತ್ಯೇಕವಾದ ಕೇಂದ್ರ ಬಜೆಟ್, ಕೃಷಿ ಕಾರ್ಪೊರೇಟೀಕರಣ ನಿಲ್ಲಿಸುವುದು ಸೇರಿದಂತೆ ಇನ್ನಿತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಮತ್ತು ಕಾರ್ಮಿಕ ಸಂಘಟನೆಗಳ ಸಂಯುಕ್ತ ಹೋರಾಟ ಸಮಿತಿ ದಾವಣಗೆರೆ ಘಟಕದ ವತಿಯಿಂದ ಸಂಸದರಿಗೆ ಮನವಿ ಸಲ್ಲಿಸಲಾಯಿತು.

ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಿದ ಮುಖಂಡರು, ರೈತ ಹೋರಾಟ ಪ್ರಬಲವಾಗಿರುವ ಸುಮಾರು 39 ಕ್ಷೇತ್ರಗಳಲ್ಲಿ ಆಳುವ ಮೈತ್ರಿಕೂಟ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಅಲ್ಲಿ ಹೀನಾಯವಾಗಿ ಸೋತಿದೆ. ಇದು ಅವರ ಪರಿಸ್ಥಿತಿಯನ್ನು ಮತ್ತು ಅವರ ರೈತ ವಿರೋಧಿ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಸಕಾಲವಾಗಿದ್ದು, ಇನ್ನು ಮುಂದಾದರು ಆಳುವ ಸರ್ಕಾರಗಳು ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ರೈತರನ್ನು ಪ್ರಸ್ತುತ ಬಿಕಟ್ಟಿನಿಂದ ಹೊರ ತರಲು ಕ್ರಮ ಕೈಗೊಳ್ಳಬೇಕು ಮತ್ತು ರೈತ ವಿರೋಧಿ ಕಾಯ್ದೆಗಳನ್ನು ರಚಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ದಾವಣಗೆರೆ 1 2

ಈ ಹಿಂದೆ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರಚಿಸಿದ ಪರಿಣಾಮ ಸ್ವತಂತ್ರವಾಗಿ ಸರ್ಕಾರ ರಚಿಸಿದ್ದ ಮೈತ್ರಿಕೂಟ ಈಗ ಬೇರೆ ಪಕ್ಷಗಳ ಸಹಾಯದಿಂದ ಆಡಳಿತ ಕೇಂದ್ರದಲ್ಲಿ ಆಡಳಿತ ನಡೆಸುವ ಸ್ಥಿತಿ ಉಂಟಾಗಿದೆ. ಇದನ್ನು ಅರಿತು ಇನ್ನು ಮುಂದಾದರೂ ರೈತ ಸ್ನೇಹಿ ಕಾಯ್ದೆಗಳನ್ನು ರಚಿಸಿ ರೈತರ ಹಿತ ಕಾಪಾಡುವ ಕಾರ್ಯವನ್ನು ಮಾಡಬೇಕಿದೆ. ಅದಕ್ಕಾಗಿ ರೈತರ ಹಕ್ಕೊತ್ತಾಯಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಮನವಿಯಲ್ಲಿ ಉಲ್ಲೇಖೀಸಲಾಯಿತು.

Advertisements

ಮನವಿ ಸಲ್ಲಿಸುವ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರ್ ಮುನಿಯಪ್ಪ, ಜಿಲ್ಲಾಧ್ಯಕ್ಷರಾದ ಮರುಳಸಿದ್ದಯ್ಯ, ಬುಳ್ಳಾಪುರ ಹನುಮಂತಪ್ಪ, ಹೊನ್ನೂರು ರಾಜು, ಕಾರ್ಮಿಕ ಸಂಘಟನೆಗಳ ಮುಖಂಡರಾದ ಉಮೇಶ್ ಅವರೆಗೆರೆ, ಚಂದ್ರು, ಮಧು ತೊಗಲೇರಿ, ಶೇಖರಪ್ಪ ಜನಶಕ್ತಿಯ ಸತೀಶ್ ಅರವಿಂದ್, ಇದರ ಮುಖಂಡರು ಹಾಜರಿದ್ದರು.

ರೈತರ ಹಕ್ಕೊತ್ತಾಯಗಳು

  1. ಎಲ್ಲಾ ಬೆಳೆಗಳ C2+50% ದರದಲ್ಲಿ ಕಾಯ್ದೆಬದ್ಧ ಕನಿಷ್ಠ ಬೆಂಬಲ ಬೆಲೆ ಮತ್ತು ಸಂಪೂರ್ಣ ಉತ್ಪನ್ನದ ಸಂಗ್ರಹಣೆಯ ಖಾತರಿ ಜಾರಿಗೊಳಿಸಬೇಕು.
  2. ರೈತರು ಮತ್ತು ಕೃಷಿ ಕಾರ್ಮಿಕರನ್ನು ಸಾಲದ ಶೂಲದಿಂದ, ಆತ್ಮಹತ್ಯೆಗಳಿಂದ ಹಾಗೂ ಸಂಕಷ್ಟದ ವಲಸೆಯಿಂದ ರಕ್ಷಿಸಲು ಸಮಗ್ರ ‘ಸಾಲ ಮನ್ನಾ’ ಜಾರಿ ಮಾಡಬೇಕು.
  3. ವಿದ್ಯುಚ್ಛಕ್ತಿ ವಲಯದ ಖಾಸಗೀಕರಣ ಮತ್ತು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ಪ್ರಸ್ತಾಪ ಕೈಬಿಡಬೇಕು.
  4. ರಸಗೊಬ್ಬರ, ಕ್ರಿಮಿನಾಶಕಗಳು, ವಿದ್ಯುತ್, ನೀರಾವರಿಯ ಯಂತ್ರೋಪಕರಣಗಳು, ಬಿಡಿ ಭಾಗಗಳು, ಟ್ರಾಕ್ಟರ್‌ಗಳಂತಹ ಕೃಷಿ ಒಳಸುರಿಗಳ ಮೇಲೆ ಜಿಎಸ್‌ಟಿ ಹಾಕಬಾರದು. ಕೃಷಿ ಒಳಸುರಿಗಳಿಗೆ ಸಬ್ಸಿಡಿ ಪುನಃ ಜಾರಿ ಮಾಡಬೇಕು. ಸರ್ಕಾರಿ ಯೋಜನೆಗಳ ಲಾಭವನ್ನು ಪಾಲು ಬೆಳೆಗಾರರು ಮತ್ತು ಗೇಣಿದಾರರಿಗೂ ವಿಸ್ತರಿಸಬೇಕು.
  5. ಎಲ್ಲ ಕೃಷಿ ಮತ್ತು ಪಶುಸಂಗೋಪನೆ ವ್ಯವಸ್ಥೆಗಳಿಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೊರೇಟ್ ಪರವಾದ PMFBY ಯೋಜನೆಯನ್ನು ರದ್ದುಪಡಿಸಬೇಕು.
  6. ಆಹಾರ ಉತ್ಪಾದಕರಾದ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ಹಕ್ಕನ್ನು ಮಾನ್ಯ ಮಾಡಬೇಕು.
  7. ಭೂಸ್ವಾಧೀನ ಪರಿಹಾರ ಮತ್ತು ಪುನರ್ವಸತಿ ಕಾಯ್ದೆ 2013 ನ್ನು ಎರಡು ವರ್ಷಕ್ಕೊಮ್ಮೆ ದರವನ್ನು ಪರಿಷ್ಕರಣೆ ಮಾಡುವುದನ್ನು ಕಡ್ಡಾಯಗೊಳಿಸಿ ಕಾರ್ಯಗತಗೊಳಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ವಲಯದ ಯೋಜನೆಗಳೆರಡಕ್ಕಾಗಿಯೂ ಕಡಿಮೆ ಸರ್ಕಲ್ ದರದಲ್ಲಿ ಸ್ವಾಧೀನಪಡಿಸಿಕೊಂಡ ಎಲ್ಲಾ ಭೂಮಿಗೂ ಪರಿಹಾರ ನೀಡಬೇಕು. ಪರಿಹಾರ ಮತ್ತು ಪುನರ್ವಸತಿಗಳನ್ನು ನೀಡದೆ ಯಾವುದೇ ಭೂ ಸ್ವಾಧೀನ ಮಾಡಕೂಡದು. ಮುಂಚಿತವಾಗಿ ಪುನರ್ವಸತಿ ಕಲ್ಪಿಸದೆ ಯಾವುದೇ ಸ್ಲಂ ಮತ್ತು ಅಂತಹ ವಸತಿ ಪ್ರದೇಶಗಳನ್ನು ನೆಲಸಮ ಮಾಡಬಾರದು. ‘ಬುಲ್ಡೋಜರ್ ಆಡಳಿತ’ವನ್ನು ಕೊನೆಗೊಳಿಸಬೇಕು. ಪೂರ್ಣ ಪರಿಹಾರ ನೀಡದೆ ಯಾವುದೇ ಕೃಷಿ ಭೂಮಿಯ ಮೇಲೆ ಹೈ ವೋಲ್ವೇಜ್ ವಿದ್ಯುತ್ ಮಾರ್ಗಗಳನ್ನು ಬಲವಂತವಾಗಿ ನಿರ್ಮಿಸಬಾರದು.
  8. ಅರಣ್ಯ ಹಕ್ಕು ಕಾಯ್ದೆ (FRA) ಮತ್ತು ಪಂಚಾಯತ್ (ಶೆಡ್ಯೂಲ್ಡ್ ಏರಿಯಗಳಿಗೆ ವಿಸ್ತರಣೆ) ಕಾಯ್ದೆ (PESA) ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
  9. ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ರೂಪಿಸಬೇಕು, ಮನುಷ್ಯ ಜೀವಹಾನಿಗೆ 1 ಕೋಟಿ ರೂ. ಹಾಗೂ ಬೆಳೆ ಮತ್ತು ಸಾಕುಪ್ರಾಣಿಗಳ ನಷ್ಟಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು.
  10. ಭಾರತವನ್ನೊಂದು ಪೊಲೀಸ್ ಪ್ರಭುತ್ವವನ್ನಾಗಿಸಿ ಭಿನ್ನಾಭಿಪ್ರಾಯವನ್ನು ಮತ್ತು ಜನತೆಯ ಪ್ರತಿಭಟನೆಗಳನ್ನು ಹತ್ತಿಕ್ಕಲೆಂದೇ, ಸಂಸತ್ತಿನಲ್ಲಿ ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಗೆ ಒಳಪಡಿಸದೆ ಸಿಪಿಸಿ ಮತ್ತು ಸಿಆರ್ ಪಿಸಿ (ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ) ಕಾಯ್ದೆಗಳನ್ನು ಬದಲಾಯಿಸಿ, ಜನತೆಯ ಮೇಲೆ ಹೇರಿರುವ 3 ಕ್ರಿಮಿನಲ್ ಕಾಯ್ದೆಗಳನ್ನು ರದ್ದು ಮಾಡಬೇಕು.
  11. 736 ರೈತ ಹುತಾತ್ಮರ ಸ್ಮರಣೆಗಾಗಿ ಸಿಂಘು/ಚಿಕ್ರಿ ಗಡಿಯಲ್ಲಿ ಸೂಕ್ತವಾದ ಹುತಾತ್ಮ ಸ್ಮಾರಕವನ್ನು ನಿರ್ಮಿಸಬೇಕು. ಲಖಿಂಪುರ್ ಬೀರಿಯ ಹುತಾತ್ಮರನ್ನೂ ಒಳಗೊಂಡಂತೆ ಚಾರಿತ್ರಿಕ ರೈತ ಹೋರಾಟದ ಎಲ್ಲಾ ಹುತಾತ್ಮರ ಕುಟುಂಬಗಳಿಗೂ ಸೂಕ್ತವಾದ ಪರಿಹಾರವನ್ನು ನೀಡಬೇಕು. ರೈತ ಹೋರಾಟದ ಸಂಬಂಧ ಹಾಕಲಾಗಿರುವ ಎಲ್ಲಾ ಕೇಸುಗಳನ್ನೂ ಹಿಂತೆಗೆಯಬೇಕು.
  12. ಕಾರ್ಮಿಕರು, ರೈತರು ಮತ್ತು ಎಲ್ಲಾ ದುಡಿವ ಜನತೆಯ ನಡುವೆ ಸಂಪತ್ತಿನ ತರ್ಕಸಮ್ಮತ ಮತ್ತು ಸಮಾನ ಹಂಚಿಕೆಗೆ ಬೇಕಾದ ಹಣಕಾಸಿನ ಸಂಪನ್ಮೂಲವನ್ನು ಕಂಡುಕೊಳ್ಳುವುದಕ್ಕಾಗಿ ಅತಿ ಶ್ರೀಮಂತರಿಗೆ ತೆರಿಗೆ ಹಾಕಬೇಕು; ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಬೇಕು: ಸಂಪತ್ತಿನ ತೆರಿಗೆ ಮತ್ತು ಉತ್ತರಾಧಿಕಾರ ತೆರಿಗೆಯನ್ನು ಪುನಃ ಜಾರಿಗೆ ತರಬೇಕು.
  13. ಕೃಷಿಯ ಕಾರ್ಪೊರೇಟೀಕರಣ ಕೂಡದು. ಕೃಷಿ ಉತ್ಪಾದನೆ, ವ್ಯಾಪಾರ ಮತ್ತು ಆಹಾರ ಸಂಸ್ಕರಣೆಯಲ್ಲಿ ಎಂಎನ್ಸಿಗಳಿಗೆ ಪ್ರವೇಶ ನೀಡಕೂಡದು. ಮುಕ್ತ ವ್ಯಾಪಾರ ಒಡಂಬಡಿಕೆಗಳನ್ನು (ಫ್ರೀ ಟ್ರೇಡ್ ಅಗ್ರೀಮೆಂಟ್ FTA) ಮಾಡಿಕೊಳ್ಳಬಾರದು. ಭಾರತವು ಕೃಷಿಗೆ ಸಂಬಂಧಿಸಿದ WTO ಒಪ್ಪಂದದಿಂದ ಹೊರಬರಬೇಕು.
  14. ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ಮಾಡಿ, ಭಾರತೀಯ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ‘ಬಲಿಷ್ಠ ರಾಜ್ಯಗಳು: ಬಲಿಷ್ಠ ಭಾರತ ಒಕ್ಕೂಟ’ ಎಂಬ ಒಕ್ಕೂಟ ತತ್ವಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಗಳ ತೆರಿಗೆ ಹಕ್ಕನ್ನು ಪುನ‌ರ್ ಸ್ಥಾಪಿಸಬೇಕು.
  15. ಸಹಕಾರ ಕ್ಷೇತ್ರವು ರಾಜ್ಯ ವಿಷಯವೆಂಬ ಸಾಂವಿಧಾನಿಕ ನಿಯಮಾವಳಿಯನ್ನು ಎತ್ತಿಹಿಡಿಯಬೇಕು ಹಾಗೂ ಕೇಂದ್ರ ಸರ್ಕಾರದ ಸಹಕಾರ ಇಲಾಖೆಯನ್ನು ರದ್ದುಗೊಳಿಸಬೇಕು.
  16. ಜನತೆಯ ಜೀವನೋಪಾಯ ಮತ್ತು ಪ್ರಕೃತಿಯ ರಕ್ಷಣೆಗಾಗಿ ಭೂಮಿ, ನೀರು, ಆರಣ್ಯಗಳು ಹಾಗೂ ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳ ಕಾರ್ಪೊರೇಟ್ ಹತೋಟಿ ಮತ್ತು ಸರಕೀಕರಣವನ್ನು ಕೊನೆಗೊಳಿಸಬೇಕು. ಕೃಷಿಯ ರಕ್ಷಣೆ, ಮಳೆ ನೀರಿನ ವೈಜ್ಞಾನಿಕ ಸಂರಕ್ಷಣೆ-ಬಳಕೆಯ (ಮಳೆನೀರು ಕೊಯ್ದು) ಅಭಿವೃದ್ಧಿ, ಜಲಾನಯನ ಪ್ರದೇಶಗಳ ಆಯೋಜನೆ (watershed planning) ಹಾಗೂ ಜಲಮೂಲಗಳ ರಕ್ಷಣೆ ಇವುಗಳಿಗಾಗಿ ಹವಾಮಾನ ಬದಲಾವಣೆಯ ವಿಚಾರವನ್ನು ಸೂಕ್ತವಾಗಿ ನಿರ್ವಹಿಸಬೇಕು
  17. ಮನರೇಗಾ ಕೂಲಿಯನ್ನು 600 ರೂಪಾಯಿಗಳಿಗೆ ಹೆಚ್ಚಿಸಿ ಯೋಚನೆಯನ್ನು ಜಲಾನಯನ ಅಭಿವೃದ್ಧಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಚಟುವಟಿಕೆಗಳಿಗೆ ವಿಸ್ತರಿಸಬೇಕು.
  18. ನಾಲ್ಕು ಕಾರ್ಮಿಕ ಬಿಲ್ ಗಳನ್ನು ರದ್ದುಗೊಳಿಸಬೇಕು ಮತ್ತು ಸಾರ್ವಜನಿಕ ವಲಯದ ಖಾಸಗಿಕರಣ ಮತ್ತು ಕಾಂಟಾಕ್ಟ್ ಪದ್ಧತಿಯನ್ನು ನಿಲ್ಲಿಸಬೇಕು.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X