ಸಮುದಾಯದ ಜೊತೆಗೆ ಕೆಲಸ ಮಾಡಿದರೆ ಸದೃಢರಾಗಲು ಸಾಧ್ಯ ಎಂದು ದಲಿತ ಮುಖಂಡ ಉಡಚಪ್ಪ ಮಾಳಗಿ ಹೇಳಿದರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ವತಿಯಿಂದ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿರವರ ಅಧ್ಯಕ್ಷತೆಯಲ್ಲಿ ಹಾವೇರಿ ನಗರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಶಶಿಕಲಾ ರಾಮು ಮಾಳಗಿ ಮತ್ತು ಬ್ಯಾಡಗಿ ಪುರಸಭೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಭಾಸ್ ಮಾಳಗಿಯವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಉಡಚಪ್ಪ ಮಳಗಿ, “ನಾವು ಸಾಮಾಜಿಕವಾಗಿ ಸದೃಢರಾಗಲು ರಾಜಕೀಯ ಅಧಿಕಾರಬೇಕು ಎಂದು ಡಾ.ಬಿ.ಆರ್ ಅಂಬೇಡ್ಕರ್ ಅವರು ಹೇಳಿದ್ದರು. ಅಧಿಕಾರ ಬಂದಾಗ ತಮ್ಮ ವ್ಯಾಪ್ತಿಯ ಜನತೆಯ ಕೆಲಸದ ಜೊತೆಗೆ ಸಮುದಾಯಗಳ ಜನರ ಕೆಲಸ ಮಾಡಿದರೆ ನಮ್ಮ ಸಮುದಾಯ ಇನ್ನೂ ಹೆಚ್ಚು ರಾಜಕೀಯವಾಗಿ ಬಲಿಷ್ಠವಾಗಲು ಸಾಧ್ಯವಾಗಲಿದೆ” ಎಂದು ತಿಳಿಸಿದರು.

ಹಾವೇರಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರಾಮು ಮಾಳಗಿ ಹಾಗೂ ಬ್ಯಾಡಗಿ ಪುರಸಭೆ ಉಪಾಧ್ಯಕ್ಷರಾದ ಸುಭಾಸ ಮಾಳಗಿ ಅವರಿಗೆ ಕಲ್ಯಾಣ ಸಮಿತಿ ವತಿಯಿಂದ ಅವರ ಅಭಿಮಾನಿಗಳ ಹಾಗೂ ಹಿತೈಸಿಗಳ ಪರವಾಗಿ ಶುಭ ಕೋರಲಾಗುತ್ತಿದೆ. ಇನ್ನೂ ಹೆಚ್ಚು ಅವರಿಗೆ ಕೆಲಸ ಮಾಡಲು ಅವಕಾಶ ಸಿಗಲಿ ಎಂದು ಶುಭ ಕೋರಿದರು.
ಇದನ್ನು ಓದಿದ್ದೀರಾ? ಸೆ.13-22: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದಿಂದ ‘ಪ್ರವಾದಿ ಮುಹಮ್ಮದ್: ಮಹಾನ್ ಚಾರಿತ್ರ್ಯವಂತ’ ರಾಜ್ಯವ್ಯಾಪಿ ಅಭಿಯಾನ
ಈ ಸಂದರ್ಭದಲ್ಲಿ ಭೀಮ್ ಘರ್ಜನೆಯ ರಾಜ್ಯಾಧ್ಯಕ್ಷರಾದ ತಿರಕಪ್ಪ ಚಿಕ್ಕೇರಿ, ಪ್ರಧಾನ ಕಾರ್ಯದರ್ಶಿಯಾದ ಬಸವರಾಜ ದೊಡ್ಮನಿ, ಕಟ್ಟಡ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಎನ್. ಮಾಸೂರ, ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ, ನಿವೃತ್ತ ಪಿಎಸ್‌ಐ ನೀಲಪ್ಪ ಮಾಳಗಿ, ಎಪಿಎಂಸಿ ಮಾಜಿ ಸದಸ್ಯರಾದ ರಾಮು ಮಾಳಗಿ, ಮುಖಂಡರಾದ ಮಾರುತಿ ಕಿಳ್ಳಿಕ್ಯಾತರ, ಚಲನಚಿತ್ರ ನಟ ಪಕ್ಕೀರೇಶ, ಬಸವರಾಜ ಕಾಳಿ, ಜಗದೀಶ ಹರಿಜನ, ರಾಜೇಶ ಗೋಣೆಮ್ಮನವರ, ವಿಜಯ ಮಾಳಗಿ,ನಾಗರಾಜ ಹಾವನೂರ, ಮಂಜುನಾಥ ದೊಡ್ಡಮರಿಯಮ್ಮನವರ, ದುರಗಪ್ಪ ಮಾದರ, ಶ್ರೀಮತಿ ರೇಣುಕಾ ಬಡಕಣ್ಣವರ, ಶ್ರೀಮತಿ ನೀಲಮ್ಮ ಬುಡಪನಹಳ್ಳಿ, ಶಿವಪ್ಪ ಮುದಿಮಲ್ಲಣ್ಣನವರ, ಶ್ರೀಮತಿ ಅನ್ನಪೂರ್ಣ ಅರಕೇರಿ, ನಾಗರಾಜ ಕಲ್ಲೇದೇವರ, ಜಗದೀಶ ತಿಮ್ಮಾಪುರ, ರಾಜೀವ ಕರಿಯಣ್ಣವರ, ಮಂಜುನಾಥ ಗಾಳೆಪ್ಪನವರ, ಯಲ್ಲಪ್ಪ ದೊಡ್ಮನಿ, ಶ್ರೀಮತಿ ನೇತ್ರಾ ಕಾಂತೇಶ ದೊಡ್ಮನಿ, ಶ್ರೀಮತಿ ಗೀತಾ ಹಳೆಶಿಡೇನೂರ, ಶ್ರೀಮತಿ ಸುಮಂಗಲಾ ಕೃಷ್ಣಾಪುರ, ಶ್ರೀಮತಿ ಮಾಯವ್ವ ದೊಡ್ಮನಿ, ಶ್ರೀಮತಿ ನಾಗಮ್ಮ ಹಳೆಶಿಡೇನೂರ, ಶ್ರೀಮತಿ ಯಲ್ಲಮ್ಮ ಮಾಲತೇಶ ಕೊಪ್ಪದ ಸೇರಿದಂತೆ ಅನೇಕರಿದ್ದರು.
