‘ಭಾರತದ ಜನಗಳಾದ ನಾವು’ ಎಂಬ ಸಂವಿಧಾನದ ಪೀಠಿಕೆಯ ಸಾಲುಗಳ ಓದಿನೊಂದಿಗೆ ಗೋಗೇರಿ ಗ್ರಾಮದ ಬಾಗವಾನ ವೆಲ್‌ಫೇರ್ ಅ್ಯಂಡ್ ಎಜುಕೇಶನ್ ಸೊಸೈಟಿಯ ಮದರಸಾ ಮೊಹಮ್ಮದೀಯಾ ಅರೇಬಿಯಾ ಶಾಲೆಯಿಂದ 2ನೇ ವರ್ಷದ ʼದಿನಿಯಾತ್ ಜಲ್ಸಾʼ ಕಾರ್ಯಕ್ರಮ ನಡೆಯಿತು.
ಗದಗ ಜಿಲ್ಲೆ ಗಜೇಂದ್ರಗಡ ನಗರದ ಅರಬ್ಬಿ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ರಿಹಾನ್ ನದಾಫ್ ಕಂಠಪಾಠ ಮಾಡಿದ ಸಂವಿಧಾನದ ಪೀಠಿಕೆಯನ್ನು ಎಲ್ಲರಿಗೂ ಹೇಳಿಕೊಡುವ ಮೂಲಕ ಕಾರ್ಯಕ್ರಮ ಚಾಲನೆಗೊಂಡಿತು.
ಜಲ್ಸಾ ಕಾರ್ಯಕ್ರಮ ಉಖ್ಯ ಅತಿಥಿಯಾಗಿ ಮುಫ್ತಿ ಇರ್ಫಾನ ಶಾಹಿ ಇಲಕಲ್ಲ ಮಾತನಾಡಿ, “ಸಂವಿಧಾನ ರಚನೆ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆ ಅಧಿಕೃತವಾಗಿ ಜಾರಿಯಾಗಿದೆ. ಮಕ್ಕಳು ಸೇರಿದಂತೆ ಎಲ್ಲರೂ ಸಂವಿಧಾನದ ಪೀಠಿಕೆ ತಿಳಿದುಕೊಳ್ಳಬೇಕು. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವಾಗುತ್ತದೆ. ಪ್ರಜಾಪ್ರಭುತ್ವ, ಸಂವಿಧಾನ ಉಳಿದರೆ ನಾವೆಲ್ಲರೂ ಉಳಿದಂತೆ. ಮಕ್ಕಳಿಗೂ ಕೂಡ ಸಂವಿಧಾನದ ಅರಿವು ಇರಬೇಕು. ಅರಬ್ಬಿ ಶಾಲೆಗಳಲ್ಲಿ ಸಂವಿಧಾನದ ಬಗ್ಗೆ ತಿಳಿಸಿಕೊಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ದ್ವೇಷದ ದಾಳಿಗೆ ಗುರಿಯಾಗಿರುವ ಎಂ ಜಿ ಹೆಗ್ಡೆ; ಸಮಾನ ಮನಸ್ಕರಿಂದ ಭೇಟಿ
ಪ್ರಸ್ತಾವಿಕವಾಗಿ ಶಿಕ್ಷಕ ಆರ್ ಕೆ ಭಗವಾನ್ ಮಾತನಾಡಿ, “ಭಾರತದ ಮುಸ್ಲಿಮರಾದ ನಾವು ಕುರಾನ್ ಮತ್ತು ಸಂವಿಧಾನವನ್ನು ಸಂಪೂರ್ಣವಾಗಿ ಅರಿತುಕೊಂಡು ಸೌಹಾರ್ದತೆ ಮರೆಯಬೇಕು” ಎಂದರು.
ಕಾರ್ಯಕ್ರಮದಲ್ಲಿ ಮುಫ್ತಿ ಹಸನ್ ಕಾಸ್ಮಿ, ಮಫ್ತಿ ವಾಹಿದ, ಮೌಲಾನಾ ಮಹೆಬೂಬ ಸುಲ್ತಾನಿ, ಹಾಫಿಜ್ ಅಸ್ಲಂ, ಹಾಫಿಜ್ ಬರಕತುಲ್ಲಾ, ಆರ್ ಐ ಭಗವಾನ್, ಹುಸೇನಸಾಬ ಬಡಿಗೇರ ಇದ್ದರು.
