ಸಮಾಜಕ್ಕೆ ಗಟ್ಟಿ ಸಂದೇಶ ಒದಗಿಸುವ ರಂಗಕಲೆಗಳು ಜಾಗತೀಕರಣದ ಭರಾಟೆಯಲ್ಲಿ ನಶಿಸುತ್ತಿದೆ. ಇದನ್ನು ಉಳಿಸಿ, ಬೆಳೆಸುವ ಪ್ರವೃತ್ತಿ ಸಮಾಜದಲ್ಲಿ ಉಂಟಾಗಬೇಕು ಎಂದು ಬಸವಂತಪ್ಪ ಎಚ್. ತಳವಾರ ಅಭಿಪ್ರಾಯಿಸಿದರು.
ಅವರು ಗದಗ ಜಿಲ್ಲಾ ರೋಣ ತಾಲೂಕಿನ ಯಾ.ಸ. ಹಡಗಲಿ ಗ್ರಾಮದಲ್ಲಿ ಶ್ರೀಕಲ್ಮೇಶ್ವರ ಸೇವಾ ನಾಟ್ಯ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕಲ್ಮೇಶ್ವರ ಹಾಗೂ ಹೊನ್ನೆಂತಮ್ಮದೇವಿಯ ಜೋಡು ರಥೋತ್ಸವ ಅಂಗವಾಗಿ ‘ಅಣ್ಣನ ಆಜ್ಞೆ, ತಂಗಿಯ ಪ್ರತಿಜ್ಞೆ’ ಎಂಬ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಗಟ್ಟಿ ಸಂದೇಶ ಒದಗಿಸುವ ನಾಟಕಗಳು ಇಂದು ಆಧುನಿಕ ಭರಾಟೆಯಲ್ಲಿ ಚಲನಚಿತ್ರದ ಅಬ್ಬರದಲ್ಲಿ ಸಿಲುಕಿ ಕಣ್ಮರೆಯಾಗುತ್ತಿವೆ. ಸಾಮಾಜಿಕ ನಾಟಕಗಳು ಇಂದು ಗ್ರಾಮಾಂತರ ಪ್ರದೇಶದಲ್ಲಿ ಉಳಿದ ಜನರಿಗೆ ಮನರಂಜನೆ ಒದಗಿಸುತ್ತವೆ. ಜಾಗತೀಕರಣದ ಭರಾಟೆಯಲ್ಲಿ ರಂಗಕಲೆಗಳು ನಶಿಸುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಟಿ.ವಿ. ಮಾಧ್ಯಮಗಳ ಹಾವಳಿ ಹೆಚ್ಚಾಗಿರುವುದರಿಂದ ರಾತ್ರಿ ವೇಳೆಯಲ್ಲಿ ಹೆಣ್ಣುಮಕ್ಕಳು ಟಿ.ವಿ. ನೋಡುವುದರಿಂದ ಗ್ರಾಮೀಣ ಪ್ರದೇಶದಲ್ಲಿ ನಾಟಕಗಳು ಮಾಯವಾಗಿವೆ ಎಂದು ಬಸವಂತಪ್ಪ ಎಚ್ ತಳವಾರ ಹೇಳಿದರು.

ನಾಟಕ ಮನರಂಜನೆಯೊಂದಿಗೆ ಸಂದೇಶ ನೀಡುವಂತಿರಲಿ. ಹಬ್ಬ-ಹರಿದಿನ ಜಾತ್ರೆಗಳ ಸಂದರ್ಭದಲ್ಲಿ ಪೂರ್ವಕಾಲದಿಂದ ಗ್ರಾಮೀಣ ಪ್ರದೇಶದಲ್ಲಿ ಅಭಿನಯಿಸಿರುವ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಸಮಾಜದ ಪರಿವರ್ತನೆಗಾಗಿ ಕವಿಗಳು ತಮ್ಮ ಕಲ್ಪನೆಯಿಂದ ರಚಿಸಿರುವ ನಾಟಕಗಳು, ಸಮಾಜದ ಅಂಕು-ಡೊಂಕುಗಳ ತಿದ್ದುವ ಮಹಾಸಾಧನೆಗಳು ನಾಟಕಗಳು ಮನರಂಜನೆಗಾಗಿ ಜೊತೆಗೆ ಸಾಮಾಜಿಕ ಉತ್ತಮ ಸಂದೇಶ ನೀಡುವಂತೆ ಇದ್ದರೆ ಕಲಾಭಿಮಾನಿಗಳು ಹೃದಯಪೂರ್ವಕವಾಗಿ ಸ್ವೀಕರಿಸುತ್ತಾರೆ. ಇದರಿಂದ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಜನತೆ, ಜಾಗೃತಿಗೊಳ್ಳುವಲ್ಲಿ ನಾಟಕಗಳ ಪಾತ್ರ ಹಿರಿದಾಗಿರುವುದರಿಂದ ಕಲೆ ಮತ್ತು ಕಲಾವಿದರು ಉಳಿಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಜ್ಯೋತಿಯನ್ನು ಶಿವಬಸಪ್ಪನವರು ಶಿದ್ಲಿಂಗಪ್ಪನವರ ಬೆಳಗಿಸಿದರು. ಈ ಕಾರ್ಯಕ್ರಮದಲ್ಲಿ ನಿಂಗಯ್ಯನವರು ಪೂಜಾರ, ಮಲ್ಲಪ್ಪ ಕೆಂಪಶಿ, ಕಲ್ಲಯ್ಯನವರ, ಪೂಜಾರ, ಬಸನಗೌಡ ಪಾಟೀಲ, ಶೇಖಪ್ಪ ಹ. ಯಲಿಗಾರ, ಡಾ. ರಾಜು ಸವದತ್ತಿ, ಎಂ.ಬಿ. ಪಾಟೀಲ, ಬಸನಗೌಡ ಧಾರವಾಡ, ಹನುಮಂತಗೌಡ ಪೊಲೀಸ ಪಾಟೀಲ, ಆನಂದಗೌಡರ ಬೆಂಗೇರಿ, ಯಲ್ಲಪ್ಪ ಹಳ್ಳದ, ವೀರಯ್ಯ ಮುಳ್ಳೂರು, ರುದ್ರಗೌಡ ಪಾಟೀಲ, ಶಿವಪ್ಪ ಹನುಮಕ್ಕನವರ, ಗೂರಪ್ಪ ಬೋಪ್ಲಾಪೂರ, ಡಾ. ಶರಣಪ್ಪ ಹನುಮಕ್ಕನವರ, ಮಂಜು ಮಡ್ಲಿ, ಶೇಖಪ್ಪ ನೀ. ಮಾದರ, ಕಲ್ಲಪ್ಪ ಎ. ಹಡಪದ, ಹನುಮಂತ ಹನುಮಕ್ಕನವರ, ರುದ್ರಪ್ಪ ಅಳ್ಳೊಳ್ಳಿ (ಹಾರ್ಮೋನಿಯಂ ಮಾಸ್ಟರ್), ಶಬ್ಬೀರ್ ಬಾದಾಮಿ, ಕುಮಾರ ಹೊಳೆ ಆಲೂರ, ಮಾಂತೇಶ ಡೊಳ್ಳಿನ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
