“ಫಲವತ್ತಾದ ಭೂಮಿಗಳನ್ನು ಒತ್ತಾಯ ಪೂರ್ವಕವಾಗಿ ಭೂಮಿ ಕಸಿದುಕೊಳ್ಳಲು ಹೊರಟ ಸರಕಾರದ ವಿವಿಧ ಇಲಾಖೆಗಳ ವಿರುದ್ದ “ನಮ್ಮ ಭೂಮಿ ನಮ್ಮ ಹಕ್ಕು” ರೈತ ಹೋರಾಟ ಸಮೀತಿ ತೀವ್ರವಾಗಿ ಖಂಡಿಸುತ್ತದೆ” ಎಂದು ಕರವೇ ಎಚ್. ಶಿವರಾಮೇಗೌಡ್ರ ಬಣದ ಜಿಲ್ಲಾಧ್ಯಕ್ಷ ಎಂ. ಪಿ. ಪರ್ವತಗೌಡ್ರ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಪಟ್ಟಣದ ಪತ್ರಿಕಾ ಭವನದಲ್ಲಿ ಬಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಜಿಲ್ಲೆಯ ಗದಗ ತಾಲ್ಲೂಕಿನ ನರಸಾಪುರ- ನಾಗಸಮುದ್ರ ಸರಹದ್ದಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯವರು 250 ಕ್ಕೂ ಹೆಚ್ಚು ರೈತರ ಫಲವತ್ತಾದ ಭೂಮಿಯನ್ನು ರೈತರ ವಿರೋಧದ ನಡುವೆ ಒತ್ತಾಯ ಪೂರ್ವಕವಾಗಿ ಭೂ ಸ್ವಾದೀನ ಪಡಿಸಿಕೊಳ್ಳಲು ಹೊರಟಿರುವ ಕೆ.ಐ.ಎ.ಡಿ.ಬಿ ಭೂ ಸ್ವಾದೀನಾಧಿಕಾರಿಗಳು ಮುಂದಾಗಿದ್ದಾರೆ. ಸರಕಾರದ ನಡೆಯನ್ನು ಖಂಡಿಸುತ್ತೇವೆ. ರೈತರ ವಿರೋಧದ ನಡುವೆಯೂ ವಿಂಡ್ ಪ್ಯಾನ್ ಗಳನ್ನು ಅಳವಡಿಸಲು ಹೊರಟ ಕಂಪನಿಗಳು ಜೋತೆಗೆ ವಿವಿಧ ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿಗಳನ್ನು ಕಸಿದುಕೊಳ್ಳಲು ಹೊರಟಿದ್ದಾರೆ” ಎಂದು ಕಿಡಿಕಾರಿದರು.
“ರೈತರ ಫಲವತ್ತಾದ ಭೂಮಿಯನ್ನೇ ಈ ಹಿಂದೆ 170 ಎಕರೆಗಿಂತ ಹೆಚ್ಚು ಭೂಮಿಯನ್ನ ರೈತರ ವಿರೋಧದ ನಡುವೆ ಕೆ.ಐ.ಎ.ಡಿ.ಬಿ. ಯವರು ಕಸಿದುಕೊಂಡು ಇಂಡಸ್ಟ್ರೀಯಲ್ ಏರಿಯಾ ಮಾಡಿದರು. ನಂತರ ಚಿಕ್ಕೊಪ್ಪ, ನಾಗಸಮುದ್ರ ಗ್ರಾಮದ ಮಧ್ಯೆದಲ್ಲಿರುವ 198 ಎಕರೆಗಿಂತಲೂ ಹೆಚ್ಚು ಭೂಮಿಯನ್ನು ಒಳಚರಂಡಿ ಶುದ್ದೀಕರಣ ಘಟಕಕ್ಕೆ ಸರಕಾರ ಮತ್ತು ನಗರಸಭೆ ಕಸಿದುಕೊಂಡುರು. ಇನ್ನುಳಿದ ಅಲ್ಪ ಸ್ವಲ್ಪ ಭೂಮಿಯಲ್ಲಿ ಕುಟುಂಬ ನಿರ್ವಹಣೆಗಾಗಿ ಬಿತ್ತಿ ಬೆಳೆದು ಬದುಕಬೇಕೆಂದರೆ ಇವತ್ತು ಕೆ.ಐ.ಎ.ಡಿ.ಬಿ ಅವರು ಬಿಡುತ್ತಿಲ್ಲ. ಮತ್ತೆ ನರಸಾಪೂರ ನಾಗಸಮುದ್ರ ಸರಹದ್ದಿನಲ್ಲಿ 250 ಎಕ್ರೆಗಿಂತ್ತಲು ಹೆಚ್ಚು ಭೂಮಿಯನ್ನ ರೈತರು ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರ ವಿರೋಧದ ಮದ್ಯೆನು ನಾವು ಸುಪರ್ದಿಗೆ ತೆಗೆದುಕೊಳ್ಳುತ್ತೆವೆಂದು ರೈತರಿಗೆ ನೋಟಿಸಗಳನ್ನ ಕಳೆಸಿರುದು ಖಂಡನೀಯ” ಎಂದರು.
“ಸಂವಿಧಾನದ ಅನುಚ್ಚೆದ 21 ನಾವು ಬದುಕುವ ಹಕ್ಕನ್ನು ಕಸಿದುಕೊಳ್ಳಲು ಹೊರಟಿರುವುದು ಮತ್ತು ಕರ್ನಾಟಕ ಪ್ರದೇಶಾಭಿವೃದ್ಧಿ ಅಧಿನಿಯಮ 1966 ಕಾಯ್ದೆಯನ್ನು ನಡೆಗಳನ್ನು ಸಂಪೂರ್ಣವಾಗಿ ಉಲಂಘಿಸಿ ಸದರಿ ಕಾಯ್ದೆಯನ್ನು ಪರಿಪಾಲಿಸದೆ ಮೋಸದಿಂದ ನಮ್ಮ ರೈತರ ಪಲವತ್ತಾದ ಭೂಮಿಗಳನ್ನ ಕಸಿದುಕೊಳ್ಳಲು ಕೆ.ಐ.ಎ.ಡಿ.ಬಿ. ಮತ್ತು ಸರಕಾರ ನಡೆಯನ್ನ ತೀವ್ರವಾಗಿ ಖಂಡಿಸುತ್ತೆವೆ. ಮುಂದಿನ 15 ದಿನಗಳಲ್ಲಿ ರೈತರಿಗೆ ಕಳಿಸಿದ ತಮ್ಮ ಅಕ್ರಮ ಒತ್ತಾಯ ಪೂರ್ವಕ ನೋಟೀಸ್ ಗಳನ್ನ ಮರಳಿ ಪಡಿಬೇಕು. ಮತ್ತು ರೈತರ ವಿರೋಧದ ಮದ್ಯನು ವಿಂಡಪ್ಯಾನಗಳನ್ನ ಫಲವತ್ತಾದ ರೈತರ ಭೂಮಿಗೆ ಅಳವಡಿಸಲು ಹೊರಟ ವಿಂಡಿಪ್ಯಾನ ಕಂಪನಿಗಳು ತತಕ್ಷಣವೆ ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.
ಪ್ರಗತಿಪರ ರೈತ ಯಮನೂರಸಾಭ ನದಾಪ್ ಅವರು ಮಾತನಾಡಿ, “ರೈತರ ವಿರೋಧದ ಮದ್ಯನು ಒತ್ತಾಯ ಪೂರ್ವಕವಾಗಿ ನಮ್ಮ ಆಸ್ತಿಗಳನ್ನ ಅಭಿವೃದ್ಧಿ ಹೆಸರಿನಲ್ಲಿ ಕಸಿದುಕೊಳ್ಳಲು ಹೊರಟಿರುದನ್ನ ನಾವು ಸುಮ್ಮನಿರುವುದಿಲ್ಲ. ಇದೆ ಇಂಡಸ್ಟ್ರಿಯಲ್ ನಗರಗಳನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರದಲ್ಲಿ ಮತ್ತು ತಮ್ಮ ಸ್ವ ಗ್ರಾಮದ ಹತ್ತಿರ ಮಾಡಿಕೊಳ್ಳಲಿ ನೋಡೋಣ. ತಮ್ಮ ಕ್ಷೇತ್ರದಲ್ಲಿ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಸರಕಾರಿ ಕಚೇರಿಗಳು ಮಾತ್ರ ಇರಬೇಕು. ಅವರ ಕ್ಷೇತ್ರ ಹೊರತು ಪಡೆಸಿದ ಹಳ್ಳಿಗಳು ಏನಾದರು ಆಗಲಿ ನಮಗೆ ಸಂಬಂದವಿಲ್ಲಾ ಅನ್ನುವ ಉಸ್ತುವಾರಿ ಸಚಿವರ ನಡೆ ಖಂಡನಾರ್ಹ. ಇದಕ್ಕೆ ತಕ್ಕ ಉತ್ತರ ಕೊಡುತ್ತೆವೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಕೆ ಪಾಟೀಲರ ಎಚ್ಚರಿಕೆ ನೀಡಿದರು
ಪ್ರಗತಿಪರ ಹೋರಾಟಗಾರು ಶಾಂತಯ್ಯ ಮುತ್ತಿನಿಪೆಂಡಿಮಠ ಮಾತನಾಡಿ, “ಕೆ.ಐ.ಎ.ಡಿ.ಬಿ ಅವರು ಜೊತೆಗೆ ವಿಂಡಪ್ಯಾನ ಕಂಪನಿ ಸೇರಿ ವಿವಿಧ ಅಭಿವೃದ್ಧಿ ಯೋಜನೆಯಗಳಿಗಾಗಿ ಒತ್ತಾಯ ಪೂರ್ವಕವಾಗಿ ರೈತರ ಭೂಮಿಗಳನ್ನ ಕಸಿದುಕೊಳ್ಳಲು ಹೊರಡಿರುದನ್ನ ತತಕ್ಷಣವೆ ರದ್ದು ಗೊಳಿಬೇಕು. ಇಲ್ಲದೆ ಇದ್ದಲ್ಲಿ ಅತಿ ಶೀಘ್ರದಲ್ಲಿ ಅನ್ಯಾಯಕ್ಕೆ ಒಳಗಾದ ರೈತರು ಮತ್ತು ಈ ಭಾಗದಲ್ಲಿ ಕಲುಸಿತ ಪರಿಸರದಿಂದ ಹಾನಿಗೆ ಒಳಗಾಗುವ ಎಲ್ಲಾ ಗ್ರಾಮಗಳ ಗ್ರಾಮಸ್ಥರೊಂದಿಗೆ ಅಹೋರಾತ್ರಿ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಕರವೇ ಗೌರವಾದ್ಯಕ್ಷ ಮಲ್ಲಿಕಾರ್ಜುನ ಕಿರೇಸೂರು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಸಂಚಾಲಕರು ಬಸಯ್ಯ ಗುಡ್ಡಿಮಠ, ಹಿರಿಯರು ಸಂತ್ತೋಷ ಹಿರೇಮಠ, ಕುಮಾರಗೌಡ ಬರಮಗೌಡ್ರ, ಯಶವಂತ ಉಪ್ಪಾರ, ಗರುಯ್ಯ, ಶಾಂತಯ್ಯಾ, ಶಿವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು




