ಇತರ ಶಾಲಾ ಮಕ್ಕಳಂತೆ ಕಲಿಯಲು ಪೂರಕವಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ, ಸರ್ಕಾರ ವಿದ್ಯಾರ್ಥಿಗಳಿಗೆ ಅಗತ್ಯ ಸಮವಸ್ತ್ರ, ಶೂ, ಬಿಸಿಯೂಟ ಒಳಗೂಂಡಂತೆ ಎಲ್ಲ ಸೌಕರ್ಯಗಳನ್ನೂ ಒದಗಿಸಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೂಳ್ಳಬೇಕು ಎಂದು ಎಸ್‍ಡಿಎಂಸಿ ಅಧ್ಯಕ್ಷ ರುದ್ರಪ್ಪ ಕಲಹಾಳ ಶೂ ಹಾಗೂ ಸಾಕ್ಸ್ ವಿತರಿಸಿದರು.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಮಡ್ಡಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಕಂದಾಯ ವಿಷಯಗಳ ಪ್ರಗತಿ ಪರಿಶೀಲನಾ ಸಭೆ; ಪ್ರಕರಣಗಳ ವಿಲೇವಾರಿ ಕ್ರಮಕ್ಕೆ ಸೂಚನೆ
ಈ ಸಂದರ್ಭದಲ್ಲಿ ಎಸ್‍ಡಿಎಂಸಿ ಉಪಾಧ್ಯಕ್ಷ ಮುನ್ನಾಬಿ ನದಾಪ, ಸದಸ್ಯ ಸೋಮಲಿಂಗ ಗಾಣಿಗೇರ, ಮಂಜು ಯಾವಗಲ್, ಬಸವರಾಜ ನಾಡಗೌಡ್ರ, ಸುರೇಶ ಲಕ್ಕನ್ನವರ, ದರಿಯಪ್ಪ ಹಾದಿಮನಿ, ಶಾಲಾ ಮುಖ್ಯಶಿಕ್ಷಕ ಸುರೇಶ ಭಜಂತ್ರಿ ಹಾಗೂ ಶಿಕ್ಷಕ ವೃಂದದವರು ಇದ್ದರು.