ಬೆಂಗಳೂರು | ಪ್ರಾಣಿಗಳ ಅಪಘಾತ ಪ್ರಕರಣಗಳ ಹೆಚ್ಚಳ; ಎನ್‌ಜಿಒಗಳ ಆತಂಕ

Date:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕುಪ್ರಾಣಿಗಳ (ಪ್ರಮುಖವಾಗಿ ನಾಯಿ) ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ಸಮಯದಲ್ಲಿ, ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ಕ್ರಮೇಣ ಕಡಿಮೆಯಾಗುತ್ತಿವೆ ಎಂದು ಹಲವಾರು ಎನ್‌ಜಿಒಗಳು ದೂರಿವೆ.

ಶನಿವಾರ (ಆಗಸ್ಟ್‌ 26) ಅಂತಾರಾಷ್ಟ್ರೀಯ ಶ್ವಾನ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವಾರು ಎನ್‌ಜಿಒಗಳು ನಗರದಲ್ಲಿ ನಾಯಿಗಳ ಸಮಸ್ಯೆಗಳ ಕುರಿತು ಮಾತನಾಡಿವೆ.

“ರಾತ್ರಿಯ ವೇಳೆ ಬೀದಿನಾಯಿಗಳಿಗೆ ಹೆಚ್ಚಾಗಿ ವಿಷ ಹಾಕಲಾಗುತ್ತಿದೆ. ಇದನ್ನು ತಿಂದು ಸಾವನ್ನಪ್ಪಿದ ನಾಯಿಗಳ ದೇಹ 12 ಗಂಟೆಗಳಲ್ಲಿ ಕೊಳೆಯಲು ಪ್ರಾರಂಭವಾಗುತ್ತದೆ. ಅಪರಾಧಿಗಳನ್ನು ಹಿಡಿಯಬೇಕಾದರೆ, ಅವುಗಳು ಕೊಳೆಯದಂತೆ ಇಟ್ಟುಕೊಳ್ಳಬೇಕು. ಅದಕ್ಕಾಗಿ, ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು ಮತ್ತು ತುರ್ತು ಪ್ರತಿಕ್ರಿಯೆ ತಂಡದ ಅಗತ್ಯವಿದೆ” ಎಂದು ಹೆವೆನ್ ಅನಿಮಲ್ ವೆಲ್ಫೇರ್ ಟ್ರಸ್ಟ್‌ನ ಸಂಸ್ಥಾಪಕ ಟೋನಿ ಫ್ರೀರ್ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸರ್ಕಾರಿ ಪಶು ಆಸ್ಪತ್ರೆಗಳನ್ನು 24 X 7 ತೆರೆದಿರಬೇಕು. ಆಗ ಯಾವುದೇ ಬೀದಿನಾಯಿ ವಿಷ ಸೇವಿಸಿದ್ದರೆ, ಮರಣೋತ್ತರ ಪರೀಕ್ಷೆಯ ಮೂಲಕ ತಕ್ಷಣ ಗುರುತಿಸಬಹುದು” ಎಂದು ಪ್ರಾಣಿ ಕಾರ್ಯಕರ್ತರು ಹೇಳಿದ್ದಾರೆ.

“ಸಾಕುನಾಯಿಗಳ ಮೇಲಿನ ಅಪಘಾತ ಪ್ರಕರಣಗಳು ಹೆಚ್ಚಳವಾಗುತ್ತಿವೆ. ನಗರದಲ್ಲಿ ಬೀದಿ ನಾಯಿಗಳನ್ನು ರಕ್ಷಿಸಲು ಸರ್ಕಾರದಿಂದ ಉತ್ತಮ ಬೆಂಬಲ ದೊರೆಯುತ್ತಿಲ್ಲ. ಪ್ರಾಣಿಗಳ ಅಪಘಾತ ಪ್ರಕರಣಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಇದಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನು ನೇಮಕ ಮಾಡಬೇಕು. ನಾಯಿಗಳಿಗೆ ವಿಷ ಹಾಕಲಾಗಿದೆಯೇ ಅಥವಾ ಮತ್ತಿತರ ಸಮಸ್ಯೆಗಳಿಂದ ಅವು ಸಾವನ್ನಪ್ಪಿವೆಯೇ ಎಂಬುದನ್ನು ವರದಿ ಮಾಡಬೇಕು. ಪ್ರಾಣಿ ರಕ್ಷಣೆಗೆ ಟೋಲ್ ಫ್ರೀ ಸಂಖ್ಯೆ ಆರಂಭಿಸಬೇಕು” ಎಂದಿದ್ದಾರೆ. 

“ನಗರದಲ್ಲಿ ಶ್ವಾನ ರಕ್ಷಕರೊಬ್ಬರು ಇತ್ತೀಚೆಗೆ 15 ನಾಯಿಗಳನ್ನು ತಮ್ಮ ಶೆಲ್ಟರ್‌ನಿಂದ ಹೊರಗಟ್ಟಿದ್ದಾರೆ. ಅವುಗಳಲ್ಲಿ ಕೆಲವು ನಾಯಿಗಳನ್ನು ಕಂಬಗಳಿಗೆ ಕಟ್ಟಿದ್ದಾರೆ. ಇನ್ನೂ ಕೆಲವನ್ನು ರಸ್ತೆಗಳಲ್ಲಿ ಬಿಟ್ಟಿದ್ದಾರೆ. ಈ ನಡುವೆ, ಎನ್ಜಿಒಗಳು ಮತ್ತು ಶೆಲ್ಟರ್‌ಗಳನ್ನು ನಡೆಸುತ್ತಿರುವ ವ್ಯಕ್ತಿಗಳು ಸಾಕುಪ್ರಾಣಿಗಳನ್ನು ಆಶ್ರಯ ಮನೆಗಳಿಗೆ ಸೇರಿಸುವುದನ್ನು ನಿಲ್ಲಿಸಿದ್ದಾರೆ. ಏಕೆಂದರೆ, ಆಶ್ರಯ ಶೆಲ್ಟರ್‌ಗಳಲ್ಲೂ ಹಣಕಾಸಿನ ಕೊರತೆ ಇದೆ” ಎಂದು ಹೇಳಿದ್ದಾರೆ.

“ಪ್ರತಿದಿನ ಸುಮಾರು 15-20 ಪ್ರಕರಣ ನೋಡುತ್ತಿದ್ದೇವೆ. ಬೀದಿ ಪಾಲಾದ ನಾಯಿಗಳನ್ನು ರಕ್ಷಿಸಲು ಬಯಸುತ್ತೇವೆ. ಆದರೆ, ನಾವು ಕ್ರೌಡ್ ಫಂಡಿಂಗ್ ಮೇಲೆ ಅವಲಂಬಿತರಾಗಿದ್ದೇವೆ. ಪ್ರಸ್ತುತವಾಗಿ ನಾವು ಆರ್ಥಿಕ ಮುಗ್ಗಟ್ಟಿನಲ್ಲಿದ್ದೇವೆ. ಲಕ್ಷಾಂತರ ರೂಪಾಯಿ ಆಸ್ಪತ್ರೆಯ ಬಿಲ್ ಬಾಕಿ ಉಳಿದಿದೆ” ಎಂದು ಪೆಟ್ ಅಡಾಪ್ಷನ್ ಟ್ರಸ್ಟ್‌ನ ಲಕ್ಷ್ಮಿ ಗೌಡ ಹೇಳಿದ್ದಾರೆ.

“ಸ್ಥಳದ ಕೊರತೆಯಿಂದಾಗಿ ಆರೋಗ್ಯಕರವಾಗಿರುವ ಯಾವುದೇ ಸಾಕುಪ್ರಾಣಿಗಳನ್ನು ಬೆಳೆಸಲು ನಮಗೆ ಸಾಧ್ಯವಾಗುತ್ತಿಲ್ಲ. ನಾವು ಅಪಘಾತ ಪ್ರಕರಣಗಳಲ್ಲಿ ಗಾಯಗೊಂಡ ಪ್ರಾಣಿಗಳಿಗೆ ತಕ್ಷಣದ ಚಿಕಿತ್ಸೆಯನ್ನು ಮಾತ್ರ ನೀಡುತ್ತಿದ್ದೇವೆ” ಎಂದು ಚಾರ್ಲಿಸ್ ಅನಿಮಲ್ ರೆಸ್ಕ್ಯೂ ಸೆಂಟರ್ (ಕೇರ್) ವ್ಯವಸ್ಥಾಪಕ ಕೀರ್ತನ್ ಆರ್ಪಿ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಅನ್ಯಾಯ; ಚೆಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಚೆಂಬು ಹಿಡಿದುಕೊಂಡು...

ಉಡುಪಿ | ಮತದಾನ ಬಹಿಷ್ಕಾರ ಹಿಂಪಡೆದ ಕಟ್ಟಿಂಗೇರಿ ಮತದಾರರು

ರಸ್ತೆಯ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದ ಮತದಾರರ ಮನವೊಲಿಸುವಲ್ಲಿ ಮಾಜಿ...

ಕಲಬುರಗಿ | ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿತ್ತು: ಮಾಲೀಕಯ್ಯ ಗುತ್ತೇದಾರ

2018ರಲ್ಲಿ ಕಾರಣಾಂತರಗಳಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾದೆ. ಪಕ್ಷದಲ್ಲಿ...

ದಕ್ಷಿಣ ಕನ್ನಡ | ಎನ್‌ಡಿಎ ಹೀನಾಯ ಸೋಲು, ‘ಇಂಡಿಯಾ’ ಒಕ್ಕೂಟಕ್ಕೆ ಬಹುಮತ ಖಚಿತ: ಎಂ ವೀರಪ್ಪ ಮೊಯಿಲಿ

ಬೆಲೆ ಏರಿಕೆ, ಆರ್ಥಿಕ ಅಸಮಾನತೆ ನಿರುದ್ಯೋಗದಿಂದ ಕೇಂದ್ರ ಸರ್ಕಾರದ ವಿರುದ್ಧ ಜನರ...