ಗೃಹ ಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂ. ಜಮೆ ಆಗುತ್ತಿದೆ. ಈ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗುತ್ತದೆ. ಅರ್ಹರು ಯೋಜನೆಯ ಉಪಯೋಗ ಪಡೆಯಬೇಕು ಎಂದು ಚಿಕ್ಕನರಗುಂಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಲಮ್ಮ ಮರೆಣ್ಣವರ ಹೇಳಿದ್ದಾರೆ.
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಚಿಕ್ಕನರಗುಂದದಲ್ಲಿ ನಡೆದ ಗೃಹ ಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಯೋಜನೆಯಿಂದ ಬರುವ ಹಣದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಪುಸ್ತಕ, ಬಟ್ಟೆ ಹಾಗೂ ಗೃಹಪಯೋಗಿ ವಸ್ತಗಳನ್ನು ಕೊಂಡುಕೊಳ್ಳಬಹುದು. ಇದು ನಮ್ಮೆಲ್ಲರಿಗಾಗಿ ಮಾಡಿರುವ ಯೋಜನೆ. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಈರಮ್ಮ ಮುದಿಗೌಡ್ರ, ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ, ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ್ರ ಚನ್ನಪ್ಪಗೌಡ್ರ, ಶೃತಿ ಬ್ಯಾಳಿ, ನಿರ್ಮಲಾ ತಳವಾರ, ಪಿಡಿಒ ಕು.ಶೈನಾಜ್ ಮುಜಾವರ್ ಸೇರಿದಂತೆ ಹಲವರು ಇದ್ದರು.